Ticker

6/recent/ticker-posts

Ad Code

Responsive Advertisement

ನಮಸ್ಕಾರದ ಮೂಲಕ ಪಕ್ಷಕ್ಕೆ ಗೌರವ ಸಲ್ಲಿಸಿದ ಭಗವಂತ್ ಖೂಬಾ

ಬೆಂಗಳೂರು: ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಭಗವಂತ್ ಖೂಬಾ ಅವರು ಇಂದು, ಸಚಿವರಾದ ಬಳಿಕ ಮೊದಲ ಬಾರಿಗೆ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡುವ ವೇಳೆ ಕಾರ್ಯಾಲಯದ ಹೆಬ್ಬಾಗಿಲಿಗೆ ನಮಸ್ಕರಿಸಿ ಒಳಕ್ಕೆ ಪ್ರವೇಶಿಸಿದರು. 


ಪಕ್ಷವು ನನಗೆ ಈಗ ಹೆಚ್ಚಿನ ಜವಾಬ್ದಾರಿ ನೀಡಿದೆ. ಆದ್ದರಿಂದ ಪಕ್ಷಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ನಮನ ಸಲ್ಲಿಸಿದ್ದಾಗಿ ಅವರು ಭಾವಪೂರ್ಣರಾಗಿ ನುಡಿದರು. ಬಳಿಕ ಅವರು ಕಾರ್ಯಾಲಯದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಹಾಜರಿದ್ದರು.

advt.: 


Post a Comment

0 Comments

Ad Code

Responsive Advertisement