ಶ್ರೀ ಬಾಲರಾಮ ಸೇವಾ ಸಂಘದ ಹಿರಿಯ ಸದಸ್ಯ ಶ್ರೀ ಸೊನ್ನಿ ರಂಗನಾಥಾಚಾರ್ಯರು ಇಂದು ಮುಂಜಾನೆ ದೈವಾಧೀನ ರಾಗಿರುತ್ತಾರೆ ಎಂದು ತಿಳಿಸಲು ವಿಷಾದಿಸುತ್ತೇನೆ.
ಶ್ರೀಯುತರು ಚಿತ್ರದುರ್ಗ ಜಿಲ್ಲೆಯ ನಿವಾಸದಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ಶ್ರೀಯುತ ಸೊನ್ನಿ ರಂಗನಾಥಾಚಾರ್ಯರು ತಮ್ಮ ಜೀವನದಲ್ಲಿ ಜಾತಿಭೇದವಿಲ್ಲದೆ ಎಲ್ಲ ಜನಾಂಗದಲ್ಲಿಯೂ ಬೆರೆತು ಕರ್ಮಾದಿಗಳನ್ನು ಮಾಡಿಸುತ್ತಾ ಧರ್ಮಜಾಗೃತಿ ಮೂಡಿಸುತ್ತಾ ಜನೋಪಕಾರಿ ಸೇವೆಗಳನ್ನು ನಿರ್ವಹಿಸಿದ್ದರು. ರಂಗನಾಥಾಚಾರ್ಯರು ಅನೇಕಾನೇಕ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಸೊನ್ನಿ ರಂಗನಾಥಾಚಾರ್ಯರು ಅವರಿಗೆ ಪುರೋಹಿತ ರತ್ನ ಎಂದು ಬಿರುದನ್ನು ನೀಡಿ ಪುರಸ್ಕರಿಸಲಾಗಿತ್ತು. ಸೊನ್ನಿ ರಂಗನಾಥಾಚಾರ್ಯರಿಗೆ ಭಗವಂತ ಸದ್ಗತಿಯನ್ನು ಕರುಣಿಸಲಿ ಹಾಗೂ ಶ್ರೀಯುತರ ಕುಟುಂಬಕ್ಕೆ ಧೈರ್ಯ - ಸ್ಥೆರ್ಯ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಎಂದು ಭಗವಂತನಲ್ಲಿ ಪ್ರಾರ್ಥಿಸೋಣ.
-ಜಿಕೆ ತಾಡಪತ್ರಿ

0 Comments