Ticker

6/recent/ticker-posts

Ad Code

Responsive Advertisement

ಆಂಧ್ರ ಗಡಿ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ: ಕಣ್ಣು ಮುಚ್ಚಿ ಕುಳಿತ ಅಧಿಕಾರಿಗಳು?

ಬಳ್ಳಾರಿ ಆ 27. ಕರ್ನಾಟಕದ ಆಂಧ್ರಗಡಿ ಭಾಗಗಳಲ್ಲಿ ಅಕ್ರಮ ಮದ್ಯ ಮಾರಾಟ ರಾಜರೋಷವಾಗಿ ನಡೆಯುತ್ತಿದೆ, ರಾಜಕಾರಣಿಗಳ,ಪೋಲಿಸ್ ಅಧಿಕಾರಿಗಳ ಕೈವಾಡ ಇದೆ ಎಚಿದು ಸಾರ್ವಜನಿಕರ ಧ್ವನಿಯಾಗಿದೆ. ಆಂದ್ರಪ್ರದೇಶದಲ್ಲಿ ಲಿಕ್ಕರ್ ಕೆಲ ಬ್ರಾಂಡ್‌ಗಳನ್ನು ನಿಷೇಧ ಮಾಡಿ ಹೊಸ ಬ್ರಾಂಡ್‌ಗಳನ್ನು ತಯಾರಿ ಮಾಡಿ ಮಾರಾಟ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಗಡಿ ಬಾಗದ ಕರ್ನಾಟಕದ ಹಳ್ಳಿಗಳಿಂದ ಆಂದ್ರಪ್ರದೇಶಕ್ಕೆ ಅಕ್ರಮ ಮದ್ಯ ಮಾರಾಟ ರಾಜರೋಷವಾಗಿ ನಡೆಯುತ್ತಿದೆ. ಗಡಿ ಬಾಗದ ತಾಲುಕಿನ ಆಂಧ್ರ ಕರ್ನಾಟಕ ರಾಜಕಾರಣಿಗಳ, ಪೋಲಿಸರ ಕೈವಾಡ ದಿಂದ ಮದ್ಯ ಮಾರಾಟ ನಡೆಯುತ್ತಿದೆ ಎ0ದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. 

ಆಂಧ್ರಪ್ರದೇಶದಲ್ಲಿ ಯಾವ ಮೂಲೆ ಮೂಲೆಗಳಲ್ಲಿ ನೋಡಿದರೆ ಕರ್ನಾಟಕದ ಕೆಲ ಬ್ರಾಂಡ್‌ಗಳು ಕಾಣಿಸಿಕೊಳ್ಳುತ್ತವೆ,ಸಿಗುತ್ತವೆ. ಕಡಿಮೆ ದರದಲ್ಲಿ ಕರ್ನಾಟಕದಿಂದ ಪಡೆದು ಹೆಚ್ಚಿನ ರೇಟಿಗೆ ಮಾರಾಟ ಮಾಡುತ್ತಾರೆ,ಇದು ಒಂದು ಲಿಕ್ಕರ್ ಮಾಫಿಯಾ ಆಗಿದೆ.

ಆಂಧ್ರ ಗಡಿ ಬಾಗದಲ್ಲಿ ನಡೆಯುವ ಮದ್ಯ ಮಾರಾಟ ದಲ್ಲಿ ತಿಂಗಳ ಮಾಮೂಲು (ಲಂಚ) ಕೊಡಬೇಕು ಆಗುತ್ತದೆ. ಬಳ್ಳಾರಿ ಜಿಲ್ಲೆ ದಿಂದ ಕೂಡ ಜೀಪ್‌ಗಳಲ್ಲಿ ದ್ವಿಚಕ್ರ ವಾಹನ ಗಳಲ್ಲಿ ಹೈಟೆಕ್ ರೀತಿಯಲ್ಲಿ ಅಕ್ರಮ ಮದ್ಯ ಮಾರಾಟ ದಂದೆ ನಡೆಯುತ್ತಿದೆ,ಬಳ್ಳಾರಿ ಜಿಲ್ಲೆಯ ಅಬಕಾರಿ ಅಧಿಕಾರಿಗಳು “ಉತ್ಸವ ಮೂರ್ತಿಗಳು” ಆಗಿದ್ದಾರೆ.

ಈ ಅಕ್ರಮ ಮದ್ಯ ಮಾರಾಟವನ್ನು ನೆರೆಯ ಕರ್ನೂಲು ಜಿಲ್ಲೆಯ ಟೈಗರ್ ಎಸ್ಪಿ ಸುಧೀರ್ ಕೂಮಾರ್ ರೆಡ್ಡಿ, ಚಾಲೆಂಜ್ ಅಗಿ ತೆಗೆದುಕೊಂಡು,ನಾಲ್ಕು ತಿಂಗಳಲ್ಲಿ ನಾಲ್ಕು ಮಂದಿ PSI ಗಳನ್ನು ಸೇರಿದಂತೆ ಇನ್ನಷ್ಟು ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ. ಚೆಕ್ ಪೋಸ್ಟ್ಗಳು ಮೇಲೆ ದೃಷ್ಟಿ ಇಟ್ಟು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ.ಬುಧವಾರ ಆಲೂರು ತಾಲ್ಲೂಕಿನ ಆಸ್ಪರಿ ಪೋಲಿಸ್ ಠಾಣೆಯು PSI ಗಿರಿಬಾಬು ಅವರನ್ನು ಅಮಾನತು ಮಾಡಿದ್ದಾರೆ.

 ಕರ್ನಾಟಕದ ಅಕ್ರಮ ಮದ್ಯದ ಮಾರಾಟಕ್ಕೆ ಆಂದ್ರಪ್ರದೇಶದ ಅಧಿಕಾರಿಗಳಗೆ ಶಿಕ್ಷೆ ಆಗಿದ್ದು ಅಚ್ಚರಿ ಮೂಡಿಸಿದೆ.ಅದೋನಿ ಸಬ್ ಡಿವಿಜನ್ ವ್ಯಾಪ್ತಿಯಲ್ಲಿ ಮತ್ತಷ್ಟು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.ನೆರೆಯ ಜಿಲ್ಲೆಯ ಎಸ್ಪಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಅಕ್ರಮಗಳಿಗೆ ಕಡಿವಾಣ ಹಾಕುತ್ತಾ ಇದ್ದಾರೆ.ನಮ್ಮ ಜಿಲ್ಲೆಯ ಪೋಲಿಸ್ ಅಧಿಕಾರಿಗಳು ಮಾತ್ರ “ಮೌನಂ,ಶರಣ0” ಅಂತಾರೆ.??!!.ಲಿಕ್ಕರ್ ಮಾಫಿಯಾಕ್ಕೆ ಕಡಿವಾಣ ಮಾಡಲಿಲ್ಲ ಅಂದರೆ ಅಪಾಯ ಕಾದಿಟ್ಟ ಬುತ್ತಿ ಆಗುತ್ತದೆ ಎಂದು ಜನರು ಆಕ್ರೋಶವನ್ನು ವ್ಯಕ್ತ ಪಡಿಸುತಿದ್ದಾರೆ.

-Varthajala, Bellary.

Post a Comment

0 Comments

Ad Code

Responsive Advertisement