ಬಳ್ಳಾರಿ,ಆ.27-ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಅವರಿಗೆ ಕೊಪ್ಪಳ ಜಿಲ್ಲೆಯ ತಿರುಗಲ್ ತಿಮ್ಮಪ್ಪ, ಲಕ್ಷಿö್ಮÃದೇವಿ ಮತ್ತು ತೇರಿನ ಹನುಮಪ್ಪ ಗುಡ್ಡದ ಬಳಿ ಆದ ತೊಂದರೆ ಕುರಿತು ತನಿಖೆ ಕೈಗೊಳ್ಳುವುದು ಮತ್ತು ಬಂಗ್ಲೆ ಅವರನ್ನೂ ಒಳಗೊಂಡAತೆ ರಾಜ್ಯದ ಎಲ್ಲ ಪತ್ರಕರ್ತರಿಗೆ ರಕ್ಷಣೆ ನೀಡುವಂತೆ ಕೋರಿ ಸಂಘದ ಜಿಲ್ಲಾ ಘಟಕವು ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ವಿ.ಜಗನ್ಮೋಹನರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಕಾ ಮಲ್ಲಯ್ಯ ಅವರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಹಾಗೂ ಗೃಹ ಮಂತ್ರಿಗಳಿಗೆ ಮನವಿ ಪತ್ತ ಸಲ್ಲಿಸಿ, ನಮ್ಮ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊ0ದಿಗೆ ನಿನ್ನೆಯ ದಿನ ಕೊಪ್ಪಳ ಜಿಲ್ಲೆ, ತಾಲೂಕಿನ ಕೆರೆಹಳ್ಳಿ ಗ್ರಾಮದ ಬಳಿ ಇರುವ ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷಿö್ಮÃದೇವಿ ಮತ್ತು ಶ್ರೀ ತೇರಿನ ಹನುಮಪ್ಪ ಐತಿಹಾಸಿಕ ಪುಣ್ಯ ಕ್ಷೇತ್ರ ವೀಕ್ಷಣೆ ಹಾಗೂ ದರ್ಶನ ಪಡೆಯಲು ಹೋಗಿದ್ದರು. ಹೋಗಿ ಬರುವ ಸಂದರ್ಭದಲ್ಲಿ ಬಂಗ್ಲೆ ಮಲ್ಲಿಕಾರ್ಜುನ ಅವರ ಕಾರು ಗುಡ್ಡದ ಬಳಿಯಿಂದ ರಸ್ತೆಗೆ ಇಳಿಯದಂತೆ ಯಾರೋ ದುಷ್ಕರ್ಮಿಗಳು ಆಳೆತ್ತರದ ಕಲ್ಲು ಮತ್ತು ಮಣ್ಣಿನ ಗುಡ್ಡೆ ಹಾಕಿ ತೊಂದರೆ ನೀಡಿದ್ದಾರೆ.
ಅವರ ಆಪ್ತರಾದ ವೀರಣ್ಣ ಕೋಮಲಾಪುರ ಮತ್ತು ವಸಂತ್ ಶಿಳ್ಳೆಕ್ಯಾತರ್ ಇವರ ಬೈಕ್ ನಲ್ಲಿನ ಪೆಟ್ರೋಲ್ ಸಹಿತ ತೆಗೆದಿದ್ದಾರೆ. ಮೇಲ್ನೋಟಕ್ಕೆ ಇವರ ಮೇಲೆ ಹಲ್ಲೆ ನಡೆಸಲು ಹೊಂಚು ಹಾಕಿರಬಹುದು ಎಂದು ತೋರುತ್ತದೆ. ಅದೃಷ್ಟವಶಾತ್ ಬಂಗ್ಲೆ ಮಲ್ಲಿಕಾರ್ಜುನ ಅವರು ತಮ್ಮ ಕುಟುಂಬದೊAದಿಗೆ ಭಾರೀ ಅವಘಡದಿಂದ ತಪ್ಪಿಸಿಕೊಂಡು ಬಂದಿದ್ದಾರೆ. ಈ ಕುರಿತು ಕೊಪ್ಪಳ ಜಿಲ್ಲೆ, ತಾಲೂಕು ವ್ಯಾಪ್ತಿಯ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ದೂರು ಆಧರಿಸಿ ಕೂಡಲೇ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಬಂಗ್ಲೆ ಮಲ್ಲಿಕಾರ್ಜುನ ಮತ್ತು ಕುಟುಂಬದವರಿಗೆ ಸೂಕ್ತ ರಕ್ಷಣೆ ನಿಡಬೇಕು. ಅವರ ಪರಿಚಯಸ್ಥರಾದ ವೀರಣ್ಣ ಕೋಮಲಾಪುರ ಮತ್ತು ವಸಂತ್ ಸಿಳ್ಳೆಕ್ಯಾತರ್ ಅವರಿಗೂ ರಕ್ಷಣೆ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನಿವೇದಿಸಿಕೊಳ್ಳುತ್ತಿದ್ದೇವೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹಲ್ಲೆ, ದೌರ್ಜನ್ಯ, ತೊಂದರೆ ಕೊಡುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿದಿನ ಭಯ ಮತ್ತು ಆತಂಕಗಳ ನಡುವೆ ಪತ್ರಕರ್ತರು ಜೀವಿಸುವಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ಪತ್ರಕರ್ತರಿಗೆ ಮತ್ತು ಅವರ ಕುಟುಂಬದವರಿಗೆ ರಕ್ಷಣೆ ಕೊಡಬೇಕೆಂದೂ ಸರ್ಕಾರಕ್ಕೆ ಕೋರಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗುರುಶಾಂತ್, ಯಾಳ್ಪಿ ವಲಿಬಾಷಾ, ಎಂ.ಇ.ಜೋಷಿ, ಬಜಾರಪ್ಪ, ರವಿಕುಮಾರ್, ವೀರೇಶ್ ಕರೂರು, ಮಲ್ಲಿನಾಥ, ಗಿರಿ, ಸಂಘಟನೆಯ ಮುಖಂಡರಾದ ಅದ್ದಿಗೆರೆ ರಾಮಣ್ಣ, ನಾರಾಯಣ ಯಾದವ, ವರದಿಗಾರರಾದ ರವೀಂದ್ರ, ಅರ್ಥ್ಕಿಂಗ್ ಜಗಧೀಶ್ ಇನ್ನಿತರರು ಇದ್ದರು.

0 Comments