Ticker

6/recent/ticker-posts

Ad Code

Responsive Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದಿಂದ ತರಬೇತಿ ಕಾರ್ಯಾಗಾರ


ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಪುರವರ ದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಒಕ್ಕೂಟದಿಂದ ಎಲ್ಲಾ ಪದಾಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕರಾದ ದಿನೇಸ್.ಎಂ ಮಾತನಾಡಿ ಎಲ್ಲ ಪದಾಧಿಕಾರಿಗಳು ಯಾವ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು. 


 ನಮ್ಮ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ವಿವಿಧ ರೀತಿಯ ಯೋಜನೆಗಳಿದ್ದು ಅದನ್ನು ಎಲ್ಲರೂ ಕೂಡ ಸದುಪಯೋಗಪಡಿಸಿಕೊಳ್ಳಬೇಕು ಈಗಾಗಲೇ 5 ಲಕ್ಷ 50 ಸಾವಿರ ಜನ ಸಂಘದಲ್ಲಿ ಇದ್ದು ,1 ಲಕ್ಷ ರೈತರುಗಳ ಗುಂಪುಗಳಿದ್ದು ಲಕ್ಷಾಂತರ ಜನಗಳಿಗೆ ತುಂಬಾ ಅನುಕೂಲವಾಗುತ್ತದೆ. ಹಾಗೆ ವಿಮಾ ಸೌಲಭ್ಯ ಕೂಡ ಇರುವ ಸಂಘ ಎಂದರೆ ಅದು ನಮ್ಮ ಧರ್ಮಸ್ಥಳ ಸಂಘ ದಲ್ಲಿ ಮಾತ್ರ ಎಂದರು .ಇನ್ನು ನಾನಾರೀತಿಯ ತರಬೇತಿಗಳು ಇದ್ದು ಜನಗಳು ಅವೆಲ್ಲವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. 


ಅದರಲ್ಲಿ ಶುದ್ಧ ಗಂಗಾ ಕುಡಿಯುವ ಕುಡಿಯುವ ನೀರಿನ ಯೋಜನೆ ಹಾಗು ನಿರ್ಗತಿಕರಿಗೆ ಮಾಶಾಸನ ಯೋಜನೆ ಇರುವುದಾಗಿ ಮತ್ತು ವಿಕಲಚೇತನ ಕೆಲವು ಉಪಕರಣಗಳನ್ನು ಕೂಡ ನೀಡುತ್ತಿರುವುದಾಗಿ ಹೇಳಿದರು. ಹಾಗೂ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ಗಳನ್ನೂ ಕೂಡ ಕೊಡುತ್ತಿದ್ದೇವೆ. ಹಾಗೆಯೇ ನಮ್ಮಲ್ಲಿ ಯಾವುದೇ ರೀತಿ ಜಾತಿ- ಭೇದ -ಭಾವ ಆಗಲಿ ಅಥವಾ ಶ್ರೀಮಂತ-ಬಡವ ಎಂಬ ಭೇದಭಾವ ಇಲ್ಲದೆ ಎಲ್ಲರೂ ಕೂಡ ಒಂದೇ  ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿ ದಿನೇಶ್ ಕುಮಾರ್, ಜನಜಾಗೃತಿ ಸದಸ್ಯರಾದ ಲಿಂಗಾರೆಡ್ಡಿ, ತಾಲೂಕಿನ ಲೆಕ್ಕಪರಿಶೋಧಕರ ಸಂದೀಪ್, ವಲಯದ ಮೇಲ್ವಿಚಾರಕರಾದ ಎಂ. ಸೈಯದ್ ಯೂನಾಸ್, ಸೇವಾ ಪ್ರತಿನಿಧಿ ಮೇಲ್ವಿಚಾರಕರಾದ ಅನು ಮತ್ತಿತರರಿದ್ದರು.

Post a Comment

0 Comments

Ad Code

Responsive Advertisement