रोहिण्यां अर्धरात्रे तु यदा काळाष्टमी भवेत् ।
जयन्ती नाम सा प्रोक्ता सर्वपापप्रणाशिनी ।
यस्यां जातो जगन्नाथः निशीथे भगवानजः ॥
ಅರ್ಧರಾತ್ರಿಯಲ್ಲಿ ರೋಹಿಣೀ ನಕ್ಷತ್ರವಿದ್ದು ಆ ಸಮಯದಲ್ಲಿ ಅಷ್ಟಮಿಯು ಒದಗಿದರೆ ಜಯಂತಿ ಎಂದು ನಿರ್ಣಯಿಸಿದ್ದಾರೆ. ೨೯ ರಂದು ರೋಹಿಣೀನಕ್ಷತ್ರವಿಲ್ಲ. ಹಾಗೆಂದು ಕೇವಲ ಅಷ್ಟಮಿಯನ್ನು ಆಚರಿಸಬಹುದೇ ಎಂದು ಪ್ರಶ್ನಿಸಿದರೆ ಶ್ರೀಮದಾಚಾರ್ಯರ ಪೂರ್ವಾಶ್ರಮದ ಸಹೋದರರೂ ಶಿಷ್ಯರೂ ಆದ ಶ್ರೀವಿಷ್ಣುತೀರ್ಥರು -
सिंहमासे तु रोहिण्यायुतां कष्णाष्टमीं पुमान् ।
उपोष्य मध्यरात्रे तु पूजयेत् नन्दनन्दनम् ॥
ಸಿಂಹಮಾಸದಲ್ಲಿ ರೋಹಿಣೀಸಹಿತವಾದ ಅಷ್ಟಮಿ ಒದಗಿದಂದೇ ಜಯಂತಿಯನ್ನು ಆಚರಿಸಬೇಕೆಂದು ನಿರ್ಣಯವನ್ನು ಕೊಟ್ಟಿದ್ದಾರೆ. ಆದ್ದರಿಂದ ೨೯ ರಂದು ಅಷ್ಟಮಿಮಾತ್ರವಾದ್ದರಿಂದ ಆಚರಣೆಗೆ ಸೂಕ್ತವಲ್ಲ. ಭವಿಷ್ಯತ್ಪುರಾಣದಲ್ಲೂ -
सत्यष्टममुहूर्ते वा रोहिणीसहिताष्टमी ।
श्रावणे मासि सिंहार्के क्वचित्सापि च शस्यते ।।
एकादशीनां कोटीनां व्रतैश्च लभते फलम् ।
अतो दशगुणं प्रोक्तं कृत्वैतत्फलमाप्नुयात् ।।
ಸಿಂಹಮಾಸದಲ್ಲಿ ಒದಗಿದ ಶ್ರಾವಣಮಾಸದಲ್ಲಿ ರೋಹಿಣೀಸಹಿತಾವಾದ ಅಷ್ಟಮಿಯನ್ನು ಆಚರಿಸಬೇಕು. ಅಂದು ಹತ್ತು ಕೋಟಿ ಏಕಾದಶಿ ಉಪವಾಸ ಮಾಡಿದಷ್ಟು ಪುಣ್ಯ ಉಪವಾಸದಿಂದ ಸಿಗುತ್ತದೆ ಎಂದಿದೆ. ಗರುಡಪುರಾಣದಲ್ಲೂ,
कृष्णाष्टम्यां च रोहिण्यां अर्धरात्रेऽर्चनं हरेः ।
कार्याविद्धापि सप्तम्यां हन्तिपापं त्रिजन्मनः ॥
ಕೃಷ್ಣಪಕ್ಷದ ಅಷ್ಟಮಿಯಿಂದ ಕೂಡಿದ ರೋಹಿಣಿಯನ್ನು ಆಚರಿಸುವಂತೆ ತಿಳಿಸಿದ್ದಾರೆ. ಶ್ರೀವಿಷ್ಣುತೀರ್ಥಾರಾಗಲಿ ಗರುಡಪುರಾಣವಾಗಲಿ ಅರ್ಧರಾತ್ರಿಯಲ್ಲಿ ಪೂಜಿಸಬೇಕೆಂದು ಹೇಳಿದ್ದಾರೆಯೇ ಹೊರತು ಅರ್ಧರಾತ್ರಿಯಲ್ಲಿ ಯೋಗವು ಕಡ್ಡಾಯವಾಗಿ ಹೇಳಿಲ್ಲ. ಆದರೆ ರೋಹಿಣೀಸಹಿತವಾದ ಅಷ್ಟಮಿಯ ಯೋಗಕ್ಕೆ ಹೆಚ್ಚು ಪ್ರಾಶಸ್ತ್ಯ ಹೇಳಿದ್ದಾರೆ.
रोहिण्याश्च यदा कृष्णपक्षेऽष्टम्यां द्विजोत्तम ।
जयन्ती नाम सा प्रोक्ता सर्वपापहरातिथिः ॥
- विष्णुधर्म
कृष्णाष्टम्यां भवेद्यत्र कलैका रोहिणी नृप ।
जयन्ती नाम सा प्रोक्ता उपोष्य सा प्रयत्नतः
- आग्नेय
ಕೃಷ್ಣ ಪಕ್ಷದ ಅಷ್ಟಮಿಯಲ್ಲಿ ಕಲೆಯಷ್ಟಾದರು ರೋಹಿಣಿಯು ಒದಗಿದರೆ ಅಂದು ಉಪವಾಸಕ್ಕೆ ಪ್ರಾಶಸ್ತ್ಯಕೊಟ್ಟಿದ್ದಾರೆ. ಆದ್ದರಿಂದ ತಾ. ೩೦-೮-೨೦೨೧ ರಂದು ಜಯಂತಿಯ ಆಚರಣೆ ಶಾಸ್ತ್ರಸಮ್ಮತವಾಗಿದೆ. ೨೯ ರ ಆಚರಣೆ ಪ್ರಶಸ್ತವಲ್ಲ.
उदये अष्टमी किञ्चित् नवमी सकलायदीम् ।
भवेद्भुदेन्दुसंयुक्ता प्रजापत्यर्क्ष्यसंयुता ॥
अपि वर्षशतेनापि लभ्यते वा न लभ्यते ।
व्रतं तत्र व्रती कुर्यात्पुंसां कोटिं समुद्धरेत् ॥
ಎಂಬ ಬ್ರಹ್ಮವೈವರ್ತವಚನದಂತೆ ಉದಯದಲ್ಲಿ ಅಷ್ಟಮಿ ಮತ್ತು ರೋಹಿಣಿಯಿದ್ದು ಅಂದು ಸೋಮವಾರ ಅಥವಾ ಬುಧವಾರವಾಗಿದ್ದರೆ ಅಂತಹ ಯೋಗವು ಅಲಭ್ಯ ಅಮೂಲ್ಯ ಅಂದು ಜಯಂತಿಯನ್ನು ಆಚರಿಸಬೇಕೆಂದು ಹೇಳಿದ್ದಾರೆ. ತಾ. ೩೦-೮-೨೦೨೧ ರಂದು ಅಷ್ಟಮಿಸಹಿತವಾದ ರೋಹಿಣಿಯ ಯೋಗವಿದೆ, ಸೋಮವಾರವು ಒದಗಿ ಅತ್ಯಮೂಲ್ಯವಾಗಿದೆ. ಆಚಾರ್ಯರು ಹೇಳಿದಂತೆ ಅರ್ಧರಾತ್ರಿಯಲ್ಲಿ ರೋಹಿಣಿಯಿದೆ. ಚಂದ್ರನು ರೋಹಿಣೀಸಹಿತನಾಗಿ ಇರುವುದರಿಂದ गृहाणार्घ्यं मयादत्तं रोहिण्या सहितः शशिन् । ಎಂದು ಕೊಡುವ ಚಂದ್ರಾರ್ಘ್ಯಪ್ರಧಾನ ಹೆಚ್ಚು ಮಹತ್ವಪೂರ್ಣವೆನಿಸಿರುತ್ತದೆ. ಹೀಗೆ ಶ್ರೀಮದಾಚಾರ್ಯರು, ಶ್ರೀವಿಷ್ಣುತೀರ್ಥರು, ಹಾಗೆಯೇ ಪುರಾಣವಚನಗಳ ಅನುಸಾರ ೩೦-೮-೨೦೨೧ ರಂದು ಆಚರಣೆಯು ಸೂಕ್ತ. ಹಾಗೆಯೇ ಪಾರಣೆಯ ವಿಷಯದಲ್ಲೂ ೩೦-೮-೨೦೨೧ ರಾತ್ರಿ ತಿಥ್ಯಂತಪಾರಣೆಯನ್ನು ಹೇಳಿದ್ದಾರೆ. ಆದರೆ -
पारणं पावनं पुंसां सर्वपापप्रणाशनम् ।
उपवासाङ्गभूतं च फलदं सिद्धिकारणम् ।।
सर्वेष्वेवोपवासेषु दिवा पारणमिष्यते ।
अन्यया फलहानिः स्यात्कृते घारणपारणे ।।
न रात्रौ पारणं कुर्याह्यते वै रोहिणीव्रतम् ।
ಎಂಬ ಬ್ರಹ್ಮವೈವರ್ತಪುರಾಣದ ವಚನದ ಅನುಸಾರ ಹಾಗೆಯೇ,
सर्वेष्वेवोपवासेषु पूर्वाह्णे पारणं भवेत् ।
अन्याया तु फलस्यार्धं धर्ममेवोपसर्पति ।।
ಎಂಬ ದೇವಲರ ವಚನದಂತೆ ಪ್ರಾತಃ ಕಾಲದಲ್ಲೇ ಪಾರಣೆಯನ್ನು ಎಲ್ಲಾ ಉಪವಾಸಗಳಲ್ಲಿ ಮಾಡಬೇಕು. ಇಲ್ಲವಾದರೆ ವ್ರತದ ಫಲವು ಹಾನಿಯಾಗಿ ಅಪೂರ್ಣವಾಗುತ್ತದೆ. ಆದ್ದರಿಂದ ೨೯-೮-೨೦೨೧ ಉಪವಾಸ ಮಾಡಿ ತಿಥ್ಯಂತೇ ಪಾರಣೆಯನ್ನು ಮಾಡುವವರು ೩೧-೮-೨೦೨೧ ಬೆಳಿಗ್ಗೆಯೇ ಪಾರಣೆಯನ್ನು ಮಾಡಬೇಕಾಗುತ್ತದೆ. ಎರಡುದಿನಗಳ ಉಪವಾಸಮಾಡಿದಂತೆ ಆಗುವುದು. ೩೦-೮-೨೦೨೧ ರಂದು ಆಚರಣೆಯು ಪ್ರಶಸ್ತವು ಮರುದಿವಸ ಪಾರಣೆಯು ಯಾವುದೇ ತೊಂದರೆ ಇಲ್ಲದೆ ಆಚರಣೆಗೂ ಅನುಕೂಲವಾಗಿದೆ.
ಶ್ರೀಕೃ಼ಷ್ಣಾರ್ಪಣಮಸ್ತು
- ಬೆಳ್ಳೆ ಸುದರ್ಶನ ಆಚಾರ್ಯ

0 Comments