ಮಧುಗಿರಿ :ತಾಲ್ಲೂಕಿನ ಪುರವರ ಹೋಬಳಿ ವ್ಯಾಪ್ತಿಯ ಮಧುಗಿರಿ- ಹಿಂದೂಪುರ ಮಾರ್ಗದ ಹಳೆ ತಿಮ್ಮನಹಳ್ಳಿ ಮುಖ್ಯರಸ್ತೆಯ ಗ್ರಾಮದ ಮಧ್ಯದಲ್ಲೇ ದೊಡ್ಡ ದೊಡ್ಡ ಗುಂಡಿಗಳಿದ್ದು ಕಳೆದ ಹಲವು ವರ್ಷಗಳಿಂದ ಈ ರಸ್ತೆ ಹಾಳಾಗಿದ್ದು ದುರಸ್ತಿ ಭಾಗ್ಯ ಮಾತ್ರ ಕಾಣದಿರುವುದು ಒಂದು ದೌರ್ಭಾಗ್ಯವೇ ಸರಿ.
ಈ ರಸ್ತೆ ಹೆಚ್ಚಿನ ಪ್ರಮಾಣದ ಓಡಾಟ ವಿದ್ದು, ಸಂಚರಿಸುವಾಗ ವಾಹನ ಚಾಲಕರು ಹಾಗೂ ಸಾರ್ವಜನಿಕರು ಬಿದ್ದು ಗಾಯಗಳಾಗುವುದು ಸರ್ವೇಸಾಮಾನ್ಯವಾಗಿದೆ. ದಿನಾಲು ನೂರಾರು ವಾಹನಗಳು ಸಂಚರಿಸುತ್ತಿದ್ದು ಅಧಿಕಾರಿಗಳು ಮತ್ತು ರಾಜಕಾರಣಿಗಳು ಪ್ರಯಾಣಿಸುವ ಸಂದರ್ಭದಲ್ಲಿ ಈ ರಸ್ತೆಯನ್ನು ಪ್ರತಿದಿನವೂ ನೋಡುತ್ತಿದ್ದಾರೆ .ಆದರೆ ಜಾಣಕಿವುಡು ವಹಿಸಿರುವುದು ಕೇದಕರ ವಾಗಿದೆ .ಈ ರಸ್ತೆಯಲ್ಲಿ ವಯಸ್ಸಾದವರು, ಮಕ್ಕಳು ಸೇರಿದಂತೆ ಸಾರ್ವಜನಿಕರ ಓಡಾಟ ಹೆಚ್ಚಿರುವ ಮುಖ್ಯರಸ್ತೆ ಇದಾಗಿದೆ. ಈ ಭಾಗದ ಹಲವು ಜನಪ್ರತಿನಿಧಿಗಳು ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸಿದರೂ ಸಹ ಗುಂಡಿಗಳನ್ನು ಗಮನಿಸದೆ ಇರುವುದು ರಾಜಕೀಯದ ಕೈಗನ್ನಡಿ ಗೆ ಹಿಡಿದ ಸಾಕ್ಷಿಯಾಗಿದೆ.
ಎಷ್ಟೋ ಬಾರಿ ಎಚ್ಚರಿಸಿದರು ಕಿವಿಗೊಡದೆ ಇರುವುದು ಅನಾಹುತಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ. ಅಲ್ಲದೆ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿದ್ದು, ಮುಖ್ಯರಸ್ತೆ ಆಗಿರುವುದರಿಂದ ವಾಹನಗಳ ಸಂಖ್ಯೆಯೂ ಅಧಿಕವಾಗಿದೆ .ಈ ಗುಂಡಿಗಳಲ್ಲಿ ಬಿದ್ದಂತಹ ವ್ಯಕ್ತಿಗಳು ಕೈಕಾಲುಗಳನ್ನು ಮುರಿದು ಕೊಳ್ಳುವುದರ ಜೊತೆಗೆ ಪ್ರಾಣಾಪಾಯವಾಗುವ ಸಾಧ್ಯತೆ ಕೂಡ ಹೆಚ್ಚಿದೆ. ಇದನ್ನು ಮನಗಂಡ ಊರಿನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ, ಊರಿನ ಗ್ರಾಮಸ್ಥರಾದ ಗಜೇಂದ್ರ, ರವಿಕುಮಾರ್, ವೆಂಕಟೇಶ್ ರವರು ತಾವೇ ಸ್ವತಹ ಮುತುವರ್ಜಿವಹಿಸಿ ಮಣ್ಣನ್ನು ತೊಟ್ಟಿಗಳಲ್ಲಿ ತಂದು ಹಾಕುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ವ್ಯಕ್ತಿಗಳು ಎಚ್ಚೆತ್ತುಕೊಂಡು ಈ ರಸ್ತೆಗೆ ಸರಿಯಾದ ರೀತಿಯಲ್ಲಿ ದುರಸ್ತಿ ಕಾರ್ಯ ನಡೆಯಲಿ ಎಂದು ಆಶಿಸುತ್ತೇವೆ ಎಂದು ಗ್ರಾಮಸ್ಥರು ಆಗ್ರಹಿಸಿದರು .
ಇದರ ಜೊತೆಗೆ ಜಾಣ ಕಿವುಡನ್ನು ಪ್ರದರ್ಶಿಸುತ್ತಿರುವ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಮ್ಮೆ ಕಣ್ಣಾಯಿಸಿದರೆ ಒಳ್ಳೆಯದು ಎಂದಿದ್ದಾರೆ.


0 Comments