ಬಳ್ಳಾರಿ ಆ 31 : ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ನಗರದ ರಾಯಲ್ ಕಾಲೋನಿಯ ಶ್ರೀಕೃಷ್ಣ ಮಂದಿರದಲ್ಲಿ ಕೃಷ್ಣನಿಗೆ ಬೆಣ್ಣೆ ಅಲಂಕಾರದ ಜೊತೆಗೆ ವಿಶೇಷ ಪುಷ್ಪಗಳಿಂದ ಅಲಂಕಾರ ಮಾಡಿ ಭಕ್ತರು ಸಂಭ್ರಮಿಸಿದರು.ಯೋಗಿಶ್ವರ ಯಾಜ್ಞವಲ್ಕ್ಯ ಸೇವಾ ಸಮಿತಿಯಿಂದ ಆಯೋಜನೆ ಮಾಡಿದ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಹಿಳೆಯರು ಸೇರಿದಂತೆ ಮಕ್ಕಳು ಪಾಲ್ಗೊಂಡು ಹಬ್ಬದ ಸಂಭ್ರಮಾಚರಣೆ ಇಮ್ಮಡಿಗೊಳಿಸಿದ್ರು.. ಕೃಷ್ಣನ ಪುಟ್ಟ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದದ್ದು ವಿಶೇಷವಾಗಿತ್ತು.
ಬಗೆ ಬಗೆಯ ತಿಂಡಿ ಗಳನ್ನು ಮಾಡಿ ಪರಸ್ಪರ ಹಂಚುವ ಮೂಲಕ ಬಾಲ ಕೃಷ್ಣನನ್ನು ಪೂಜೆ ಮಾಡಿ ಮಾಡಲಾಯಿತು. ಬೆಳಿಗ್ಗೆಯಿಂದಲೇ ನೈರ್ಮಲ್ಯ ವಿಸರ್ಜನೆ, ಗೋಪಾಲ ಕಾವಳಿ ಕಾರ್ಯಕ್ರಮ, ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡಲಾಯಿತು. ಕೊರೊನಾ ಹಿನ್ನೆಲೆ ಈ ಬಾರಿ ಕೃಷ್ಣ ವೇಷ ಸ್ಪರ್ಧೆ ಮತ್ತು ಮಡಿಕೆ ಒಡೆಯೋ ಕಾರ್ಯಕ್ರಮ ರದ್ದು ಮಾಡಿರೋದು ಮಕ್ಕಳಲ್ಲಿ ತುಸು ಬೇಸರ ಮೂಡಿಸಿತ್ತು.
ಬೆಣ್ಣೆ ಅಲಂಕಾರವನ್ನು ಹೆಚ್.ಕೆ.ರಾಘವೇಂದ್ರ ಅವರು ನೋಡುಗರ ಕಣ್ಮನ ಸೆಳೆಯುವಂತೆ ಮಾಡಿದ್ರು.ಈ ವೇಳೆ ದೇವಸ್ಥಾನದ ಪ್ರಕಾಶ ರಾವ್, ಪ್ರಾಣೇಶ್ ರಾವ್, ರಘು ರಾಮ್, ಕೃಷ್ಣಮೂರ್ತಿ, ಎಸ್.ಕೆ. ರಾಘವೇಂದ್ರ, ಪಟವಾರಿ, ಮೋಹನ್ ಮುತಾಲಿಕ್, ವೆಂಕಟೇಶ್, ಚಿದಂಬರ್, ಶೋಭಾ, ಸುನಿತಾ, ಸಹನ, ವೇದಾ, ಕವಿತಾ ಕುಲಕರ್ಣಿ ಸೇರಿದಂತೆ ಮತ್ತಿರರು ಇದ್ದರು.

0 Comments