Ticker

6/recent/ticker-posts

Ad Code

Responsive Advertisement

ಶಿಸ್ತು, ಸಂಯಮ, ಪ್ರಜಾಸತ್ತಾತ್ಮಕ ಗುಣಗಳನ್ನು ವಿಧ್ಯಾರ್ಥಿಗಳಲ್ಲಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿ

ಬಳ್ಳಾರಿ ಆ 31: ನಗರದ ಮೊಹಮ್ಮದೀಯ ಮಹಿಳಾ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ ಪೌರತ್ವ ತರಬೇತಿ ಶಿಬಿರವನ್ನು ಉಧ್ಘಾಟಿಸಿದ ಡಾ. ವಿಕ್ರಮ ಹಿರೇಮಠ ಸಹಾಯಕ ಪ್ರಾಧ್ಯಾಪಕರು, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿ,  ಪ್ರಶಿಕ್ಷಣಾರ್ಥಿಗಳು ಈ ಶಿಬಿರದಲ್ಲಿ ಶಿಸ್ತು, ಸಂಯಮ, ಸಂಘಟನೆ, ಪ್ರಜಾಸತ್ತಾತ್ಮಕ ಗುಣಗಳನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿಗಳನ್ನು ಸಮರ್ಥ ಪೌರನಾಗಿ ನಿರ್ಮಿಸಬೇಕು ಎಂದರು. 


ಮುಖ್ಯ ಅಥಿತಿಗಳಾಗಿ ಆಗಮಿಸಿದ ಹಬೀಬ್ ಉಲ್ಲಾ ನಿವೃತ್ತ ಸಹಾಯಕ ಜಿಲ್ಲಾಧಿಕಾರಿಗಳು, ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ ಇದನ್ನು ಅರಿತು ಹೆಚ್ಚಿನ ಸಾಧನೆಗೆ ಮುಂದಾಗಬೇಕು ಎಂದರು.   ಮಹವಿದ್ಯಾಲಯದ ಹಿರಿಯ ಉಪನ್ಯಾಸಕ ಕರೀಮ ಶಿಬಿರದ ಧ್ಯೇಯೋದ್ದೇಶಗಳನ್ನು ಹೇಳಿದರು. ಮತ್ತೋರ್ವ ಉಪನ್ಯಾಸಕರಾದ ಪಾರ್ವತಿ ಮಾನವನಿಗೆ ಪಂಚೇAದ್ರಿಯಗಳAತೆ ಪೌರಪ್ರಜ್ಞೆಯೂ ಕೂಡ ಹೇರಳವಾಗಿರಬೆಕು ಎಂದರು ಹಾಗೆಯೇ ಯುನಿಸ್ ಅಲ್ಲಮನೂರು, ಮಕ್ಕಳಲ್ಲಿ ನಾಗರಿಕತ್ವ, ಶಿಸ್ತು, ನೈತಿಕತೆ, ಸಾಮಾಜಿಕ ಮೌಲ್ಯ, ರಾಷ್ಟಿçಯ ಮೌಲ್ಯ, ಪ್ರಜಾಸತ್ತಾತ್ಮಕತೆ, ಸಂಘಟನೆ, ಸಹಬಾಗಿತ್ವ, ಸಮಾನತೆ ಹಾಗೂ ಸಹಬಾಳ್ವೆ ಈ ಗುಣಗಳನ್ನು ಮಕ್ಕಳಿಗೆ ಹೇಳಿಕೊಡುವ ಮುನ್ನ ಶಿಕ್ಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾಗಬೇಕು ಎಂದರು.  

ಕಾರ್ಯಕ್ರಮದಲ್ಲಿ ಮೊಹಮ್ಮದೀಯ ಸಮೂಹ ಸಂಸ್ಥೆಗಳ ಮುಖ್ಯಸ್ತ ಮೌಲಾನಾ ಇದ್ರೀಸ್ ಉಮ್ರಿ, ಡಾ. ವಿಕ್ರಮ ಹಿರೇಮಠ ಸಹಾಯಕ ಪ್ರಾಧ್ಯಾಪಕರು, ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ ಬಳ್ಳಾರಿ, ಹಬೀಬ್ ಉಲ್ಲಾ ನಿವೃತ್ತ ಸಹಾಯಕ ಜಿಲ್ಲಾಧಿಕಾರಿಗಳು, ಪ್ರಾಂಶುಪಾಲರಾದ ಸುಜಾತ, ಉಪನ್ಯಾಸಕಾರದ ಕರೀಮ್, ಪಾರ್ವತಿ, ಯುನಿಸ್ ಅಲ್ಲಮನೂರು ಹಾಗೂ ಪ್ರಶಿಕ್ಷಣಾರ್ಥಿಗಳು ಇದ್ದರು. 


Post a Comment

0 Comments

Ad Code

Responsive Advertisement