Ticker

6/recent/ticker-posts

Ad Code

Responsive Advertisement

ಗ್ರಾಮಸಭೆಗಳ ಮೂಲಕ ರೈತರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ,ಪಶುಸೇವೆಗಳ ಅರಿವು ಮೂಡಿಸಿ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪ್ರಗತಿ ಪರಿಶೀಲನೆ
ಗ್ರಾಮಸಭೆಗಳ ಮೂಲಕ ರೈತರಲ್ಲಿ ಗೋಹತ್ಯೆ ನಿಷೇಧ ಕಾಯ್ದೆ,ಪಶುಸೇವೆಗಳ ಅರಿವು ಮೂಡಿಸಿ:ಸಚಿವ ಪ್ರಭು ಚವ್ಹಾಣ


ಹೊಸಪೇಟೆ(ವಿಜಯನಗರ),ಆ.31: ರಾಜ್ಯ ಸರಕಾರ ನಾಡಿನ ಜನರ ಒತ್ತಾಸೆಗೆ ಸ್ಪಂದಿಸಿ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಸಮರ್ಪಕ ತಿಳಿವಳಿಕೆ ಹಾಗೂ ಪಶುಸಂಗೋಪನಾ ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಸೇವಾ ಸೌಲಭ್ಯಗಳ ಕುರಿತು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಗ್ರಾಮಸಭೆಗಳ ಮೂಲಕ ರೈತರಿಗೆ ಅರಿವು ಮೂಡಿಸುವ ಕೆಲಸ ಮಾಡುವಂತೆ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಗರದ ಮುನ್ಸಿಪಾಲಿಟಿ ಮೈದಾನದ ಒಳಕ್ರೀಡಾಂಗಣ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನ,ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮೂಕಪ್ರಾಣಿಗಳ ರಕ್ಷಣೆಯಾಗಬೇಕು ಮತ್ತು ಕಸಾಯಿಖಾನೆಗೆ ಹೋಗಬಾರದು ಎಂಬ ಸದುದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಪರಿಣಾಮಕಾರಿ ಅನುಷ್ಠಾನವಾಗುವಲ್ಲಿ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರ ಪಾತ್ರ ಅಪಾರವಾಗಿದೆ;ಈ ಹಿನ್ನೆಲೆಯಲ್ಲಿ ತಾವು ಇದರ ಬಗ್ಗೆ ಸಂಪೂರ್ಣ ತಿಳಿದುಕೊಂಡು ರೈತರಿಗೆ ಜಾಗೃತಿ ಮೂಡಿಸುವ ಮತ್ತು ಪರಿಣಾಮಕಾರಿ ಅನುಷ್ಠಾನ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದ ಸಚಿವ ಪ್ರಭು ಚವ್ಹಾಣ ಅವರು ಪೊಲೀಸ್ ಇಲಾಖೆಯ ಸಹಕಾರ ಅಗತ್ಯವಾಗಿದ್ದು,ನಮ್ಮ ಇಲಾಖೆಯೊಂದಿಗೆ ಸ್ಪಂದಿಸುವAತೆ ಎಸ್ಪಿ ಅವರಿಗೆ ಸೂಚಿಸಿದರು.

ಬಕ್ರಿದ್ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೆರವಿನೊಂದಿಗೆ ರಾಜ್ಯದಲ್ಲಿ 7 ಸಾವಿರ ಗೋವುಗಳನ್ನು ರಕ್ಷಿಸಲಾಗಿರುವುದನ್ನು ಪ್ರಸ್ತಾಪಿಸಿದರು.*ಪ್ರಾಣಿ ಕಲ್ಯಾಣ ಸಹಾಯವಾಣಿಗೆ ಒಂದೇ ತಿಂಗಳಲ್ಲಿ 10 ಸಾವಿರ ಕರೆಗಳು: ಇಡೀ ದೇಶದಲ್ಲಿಯೆ ಮೊದಲ ಬಾರಿಗೆ ಇಲಾಖೆಯಲ್ಲಿ ಆರಂಭಿಸಲಾಗಿರುವ 24*7 ಪ್ರಾಣಿ ಕಲ್ಯಾಣ ಸಹಾಯವಾಣಿ(ವಾರ್ ರೂಂ)ಗೆ ಕಳೆದ ಒಂದೇ ತಿಂಗಳಲ್ಲಿ 10 ಸಾವಿರ ಕರೆಗಳು ರೈತರಿಂದ ಬಂದಿದ್ದು,ಅವುಗಳಲ್ಲಿ ಶೇ.85ರಷ್ಟು ಇತ್ಯರ್ಥಪಡಿಸಲಾಗಿದೆ ಎಂದು ಸಚಿವ ಚವ್ಹಾಣ ಅವರು ತಿಳಿಸಿದರು.ಗೋಹತ್ಯೆ ನಿಷೇಧ ಕಾಯ್ದೆ,ಚಿಕಿತ್ಸೆ,ತರಬೇತಿ,ಪಶುಸಂಗೋಪನಾ ಇಲಾಖೆಯ ವಿವಿಧ ಸೇವೆಗಳ ಕುರಿತು ರೈತರಿಂದ ಕರೆಗಳು ಬಂದಿದ್ದು,ಅವುಗಳಿಗೆ ತಕ್ಷಣ ಸ್ಪಂದಿಸುವ ಕೆಲಸ ಇಲಾಖೆಯಿಂದ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇಲಾಖೆಯ ಅಧಿಕಾರಿಗಳು ಮತ್ತು ವೈದ್ಯರು ತಕ್ಷಣ ಸ್ಪಂದಿಸುವ ಕೆಲಸ ಮಾಡಬೇಕು ಮತ್ತು ಯಾವುದೇ ರೀತಿಯ ದೂರುಗಳಿಗೆ ಅಸ್ಪದ ನೀಡಬೇಡಿ ಎಂದು ಸೂಚಿಸಿದರು.*ಪ್ರತಿ ಜಿಲ್ಲೆಗೊಂದು ಗೋಶಾಲೆ: ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿರುವ ಹಿನ್ನೆಲೆ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ನಿರ್ಧರಿಸಿದ್ದು,ಅದರಂತೆ ಈ ಜಿಲ್ಲೆಯಲ್ಲಿಯೂ ಸಹ 50 ರಿಂದ 100 ಎಕರೆ ವಿಶಾಲ ಪ್ರದೇಶದಲ್ಲಿ ಗೋಶಾಲೆ ಸ್ಥಾಪಿಸಲಾಗುವುದು.ಇದಕ್ಕೆ ಶೀಘ್ರ ಜಾಗ ಹುಡುಕಿ ಮಂಜೂರಿ ಮಾಡಿಕೊಡುವಂತೆ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸಚಿವ ಪ್ರಭು ಚವ್ಹಾಣ ಅವರು ಸೂಚಿಸಿದರು.ಬರುವ ಅಕ್ಟೋಬರ್ ವೇಳೆಗೆ ಗೋಶಾಲಾ ಕಾಮಗಾರಿಗೆ ಭೂಮಿಪೂಜೆ ಆರಂಭಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರ ನಾಯಕ್ ಅವರು ಗೋಶಾಲಾ ನಿರ್ಮಾಣಕ್ಕೆ ಹಗರಿಬೊಮ್ಮನಹಳ್ಳಿ ಬಳಿ 10 ಎಕರೆ ಗುರುತಿಸಲಾಗಿದೆ ಎಂದು ಸಚಿವರಿಗೆ ವಿವರಿಸಿದರು; ಸಚಿವ ಚವ್ಹಾಣ ಅವರು 11 ತಾಲೂಕುಗಳಿರುವ ಈ ಜಿಲ್ಲೆಯಲ್ಲಿ ಕನಿಷ್ಠ 10 ಸಾವಿರ ಗೋವುಗಳನ್ನು ರಕ್ಷಿಸಬೇಕಿದ್ದು,ಈ ನಿಟ್ಟಿನಲ್ಲಿ 50ರಿಂದ 100 ಎಕರೆ ವಿಶಾಲ ಜಾಗ ಗೋಶಾಲಾ ಸ್ಥಾಪನೆಗೆ ಅಗತ್ಯವಿದೆ ಮತ್ತು ಇಡೀ ಜಿಲ್ಲೆಗೆ ಮಧ್ಯವಾಗಿರುವಂತೆ ಹುಡುಕಿ ಎಂದರು.*ಜವಾಬ್ದಾರಿ ಇದ್ರೆ ಇರಿ;ಇಲ್ಲದಿದ್ದರೇ ಇಲಾಖೆ ಬಿಟ್ಟು ಹೋಗಿ: ರೈತರು ನಮ್ಮ ಪಶು ಇಲಾಖೆಯ ವೈದ್ಯರಿಗೆ ಫೋನ್ ಮಾಡಿದರೇ ಸದಾ ಫೋನ್ ಸ್ವಿಚ್ ಆಫ್ ಅಂತ ಬರತಾ ಇದೆ ಎನ್ನುವ ದೂರುಗಳು ಕೇಳಿಬರುತ್ತಿದ್ದು, ಪಶುವೈದ್ಯರಿಗೆ ಸೇವೆ ಸಲ್ಲಿಸಬೇಕೆಂಬ ಇಚ್ಛಾಶಕ್ತಿ ಮತ್ತು ಜವಾಬ್ದಾರಿ ಎನ್ನುವುದು ಇದ್ದರೇ ಸರಿಯಾಗಿ ಕೆಲಸ ಮಾಡಿ;ಇಲ್ಲದಿದ್ದರೇ ಇಲಾಖೆ ಬಿಟ್ಟು ಹೋಗಿ ಎಂದು ಸಚಿವ ಪ್ರಭು ಚವ್ಹಾಣ ಅವರು ಖಾರವಾಗಿ ನುಡಿದರು.

ರೈತರ ಫೋನ್ ಅಟೆಂಡ್ ಮಾಡಿ ಮತ್ತು ಪಶುಗಳ ಚಿಕಿತ್ಸೆಗೆ ಸಂಬAಧಿಸಿದ ಔಷಧಿಗಳನ್ನು ನಮ್ಮಲ್ಲಿಲ್ಲ ಅಂತೇಳಿ ಹೊರಗಡೆ ಬರೆದುಕೊಡುವುದನ್ನು ಬಿಡಿ ಎಂದು ಸೂಚಿಸಿದ ಸಚಿವ ಚವ್ಹಾಣ ಅವರು ಔಷಧಿಗಳು ಹಾಗೂ ಇನ್ನೀತರ ಏನಾದರೂ ಸಮಸ್ಯೆಗಳು ಮತ್ತು ಬೇಡಿಕೆಗಳಿದ್ದಲ್ಲಿ ಗಮನಕ್ಕೆ ತರುವಂತೆ ಕೋರಿದರು.ಯಾವ್ಯಾವ ಕಡೆ ಪಶುವೈದ್ಯರ ಕೊರತೆ ಇದೆಯೋ ಅಲ್ಲೆಲ್ಲಾ ಬೇರೆ ಕಡೆಯಿಂದ ನಿಯೋಜನೆ ಮಾಡಿ ಎಂದು ಸೂಚಿಸಿದ ಅವರು ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ಉಪನಿರ್ದೇಶಕರು ತಾಲೂಕುಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.ಯರ‍್ಯಾರು ಏನೇನು ನಿತ್ಯ ಕೆಲಸ ಮಾಡುತ್ತಿದ್ದೀರಿ;ಯಾವ ಕಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೀರಿ ಎಂಬುದರ ಸಮಗ್ರ ವಿವರ ಹಾಗೂ ಚಿತ್ರಗಳ ಸಮೇತ ವಾಟ್ಸ್ಆಪ್ ಮೂಲಕ ಮಾಹಿತಿ ನೀಡುವಂತೆ ಅವರು ಸೂಚಿಸಿದರು.

ನಮ್ಮ ಡಾಕ್ಟರ್‌ಗಳು ಬೇರೆ ಇಲಾಖೆಗಳಿಗೆ ಹೋಗಿದ್ದರೇ ಕೂಡಲೇ ಅವರನ್ನು ವಾಪಸ್ ಕರೆಸಿಕೊಳ್ಳಿ;ಈ ಕುರಿತು ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದರು.37 ವಾರಗಳಿಗಾಗುವಷ್ಟು ಮೇವು ಸಂಗ್ರಹ ನಮ್ಮ ಜಿಲ್ಲೆಯಲ್ಲಿದೆ. 2126 ಮೇವು ಕಿಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. 328 ಗ್ರಾಮಸಭೆಗಳನ್ನು ನಡೆಸಲಾಗಿದೆ.286 ರೈತರಿಗೆ ತರಬೇತಿ ನೀಡಲಾಗಿದೆ ಎಂದು ಸಚಿವರಿಗೆ ವಿವರಿಸಿದ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಪರಮೇಶ್ವರ ನಾಯಕ್ ಅವರು ಕೃತಕ ಗರ್ಭಧಾರಣೆ,ಗರ್ಭಧಾರಣೆ ತಪಾಸಣೆ,ಗೋಶಾಲೆಗಳ ಮಾಹಿತಿ ಸೇರಿದಂತೆ ವಿವಿಧ ಪ್ರಮುಖ ವಿಷಯಗಳನ್ನು ಸಚಿವರಿಗೆ ತಿಳಿಸಿದರು.

ಸಂಸದ ವೈ.ದೇವೇಂದ್ರಪ್ಪ ಅವರು ಮಾತನಾಡಿ ತಮ್ಮ ಇಲಾಖೆಯ ಸೇವಾ ಸೌಲಭ್ಯಗಳು ಸಮಾಜದ ಕಟ್ಟಕಡೆಯ ಜನರಿಗೆ ತಲುಪಬೇಕು;ಅಂದಾಗ ಮಾತ್ರ ಸರಕಾರದ ಉದ್ದೇಶ ಈಡೇರಲು ಸಾಧ್ಯ ಎಂದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಉಪನಿರ್ದೇಶಕ ಪರಮೇಶ್ವರ ನಾಯಕ್ ಸೇರಿದಂತೆ ಇಲಾಖೆಯ ಸಹಾಯಕ ನಿರ್ದೇಶಕರುಗಳು ಮತ್ತು ಪಶುವೈದ್ಯರು ಇದ್ದರು.ಸಭೆಗೂ ಮುಂಚೆ ಸಚಿವರು ಹೊಸಪೇಟೆ ಸಮೀಪದ ಮಲಪನಗುಡಿಯ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.


Post a Comment

0 Comments

Ad Code

Responsive Advertisement