ಾನುವಾರ ರಾತ್ರಿಯಿಂದಲೇ ನಡೆದಿರುವ ಕರ್ನಾಟಕ ಬಿಜೆಪಿ ಸರ್ಕಾರದ ಸಂಪುಟ ರಚನೆಯ ಕಸರತ್ತು ಮಂಗಳವಾರ ತಡರಾತ್ರಿ ವೇಳೆಗೆ ಪೂರ್ಣಗೊಂಡಿದೆ. ಇವತ್ತೇ ಹೊಸ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವುದು ಖಾತರಿಯಾಗಿದೆ. ಇಂದು ಮಧ್ಯಾಹ್ನದ ನಂತರ 25 ಜನ ಸಚಿವರು ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಕಿರಿಯ ಮಗ ಬಿ.ವೈ. ವಿಜಯೇಂದ್ರಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಆಯಕಟ್ಟಿನ ಖಾತೆಯೇ ಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಟ್ಟು ಹಿಡಿದಿದ್ದಾರೆ. ‘ಯಡಿಯೂರಪ್ಪ ಸಂಪುಟದಲ್ಲಿದ್ದ ಎಲ್ಲ ಹಿರಿಯರನ್ನೂ ಸಾರಾಸಗಟಾಗಿ ಕೈಬಿಡುವ ಮೂಲಕ ಹೊಸಬರ ಆಡಳಿತಕ್ಕೆ ಚಾಲನೆ ನೀಡಬೇಕು’ ಎಂಬ ವರಿಷ್ಠರ ಮತ್ತೊಂದು ತೀರ್ಮಾನ ಮುಖ್ಯಮಂತ್ರಿಗೆ ಬಿಸಿತುಪ್ಪವಾಗಿದೆ. ಸಚಿವರಾಗುವಂತೆ ಮುಖ್ಯಮಂತ್ರಿ ಸಚಿವಾಲಯದಿಂದ ಶಾಸಕರಿಗೆ ಕರೆ ಹೋಗಿದೆ. ಈವರೆಗೆ 15ಕ್ಕೂ ಹೆಚ್ಚು ಶಾಸಕರಿಗೆ ಕರೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕರೆ ಬಂದ ಶಾಸಕರು ಖಚಿತಗೊಳಿಸಿದ್ದಾರೆ.
ಕರೆ ಹೋಗಿರುವ ಶಾಸಕರು (ಸಂಭವನೀಯ ಸಚಿವರು)
1. ಗೋವಿಂದ ಕಾರಜೋಳ 2. ವಿ.ಸೋಮಣ್ಣ 3. ಬಿ.ಶ್ರೀರಾಮುಲು 4. ಉಮೇಶ ಕತ್ತಿ 5. ಬೈರತಿ ಬಸವರಾಜ 6. ಕೆ.ಎಸ್.ಈಶ್ವರಪ್ಪ 7. ಆರ್.ಅಶೋಕ 8. ಡಾ. ಸಿ.ಎನ್. ಅಶ್ವತ್ಥನಾರಾಯಣ 9. ಎಸ್.ಟಿ. ಸೋಮಶೇಖರ್ 10. ಬಿ.ಸಿ.ಪಾಟೀಲ 11. ಪೂರ್ಣಿಮಾ ಶ್ರೀನಿವಾಸ್ 12. ಎಸ್.ಅಂಗಾರ 13. ಆರಗ ಜ್ಞಾನೇಂದ್ರ 14. ಶಂಕರಪಾಟೀಲ ಮುನೇನಕೊಪ್ಪ 15. ಡಾ.ಸುಧಾಕರ್ 16. ಅರವಿಂದ ಲಿಂಬಾವಳಿ 17. ಮುನಿರತ್ನ 18. ಕೆ. ಗೋಪಾಲಯ್ಯ 19. ಜೆ.ಸಿ. ಮಾಧುಸ್ವಾಮಿ 20. ವಿ. ಸುನಿಲ್‌ಕುಮಾರ್

0 Comments