ಬೆಂಗಳೂರು -ಜು.5- ಕಾರ್ಮಿಕ ಇಲಾಖೆ ಸಹಯೋಗದಲ್ಲಿ ಕರೋನ ಸಮಯದ ಸಂಕಷ್ಟದಲ್ಲಿರುವ ಕೃಷ್ಣಯ್ಯನಪಾಳ್ಯ ಹಾಗೂ ಸದಾನಂದನಗರದ ಅಸಂಘಟಿತ ವಲಯದ 350 ಕಾರ್ಮಿಕರಿಗೆ ಇಂದು ದಿನಸಿ ಕಿಟ್ ವಿತರಿಸಲಾಯಿತು ಹಿರಿಯ ಕಾ,ರ್ಮಿಕ ನಿರೀಕ್ಷಕರಾದ R T ಶಶಿಧರ್ ಹಾಗೂ ಕಾರ್ಮಿಕ ಇಲಾಖೆಯಹಿರಿಯ ಅಧಿಕಾರಿಯಾದ ಶ್ರೀಮತಿ ಗೀತಾ ಸಮ್ಮುಖದಲ್ಲಿ ಕಾರ್ಮಿಕರಿಗೆ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಸದಾನಂದ ನಗರದ ಬಿ ಡಿ ಎ ಕಲ್ಯಾಣ ಸಂಘವು ವಿತರಣಾ ಕಾರ್ಯವನ್ನ ನಡೆಸಿಕೊಟ್ಟಿತು. ಸಂಘದ ಹಾಗೂ ಹಾಗೂ ಇಲ್ಲಿನ ಹಿರಿಯ ನಾಗರಿಕ ವೇದಿಕೆಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



0 Comments