ಮಧುಗಿರಿ: ತಾಲೂಕಿನ ಮಧುಗಿರಿ ರೋಟರಿ ಕ್ಲಬ್ ವತಿಯಿಂದ ಪುರವರ ಹೋಬಳಿಯ ಕೊಡ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಸಸಿಯನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷರಾದ ಜಿ.ಜೆ ಜಯರಾಮಯ್ಯನವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಇದರ ಜೊತೆಗೆ ಕಾಡನ್ನು ಉಳಿಸಿ ಬೆಳೆಸಬೇಕಾದರೆ, ಸಸಿ ನೆಟ್ಟು ಅರಣ್ಯವನ್ನು ರಕ್ಷಿಸಬೇಕಾದದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು. ಪ್ರಕೃತಿಯ ವೈಪರೀತ್ಯಗಳಿಗೆ ಮೂಲಕಾರಣ ಅರಣ್ಯ ನಾಶ. ಇದರಿಂದಾಗಿಯೇ ಕಾಲಕಾಲಕ್ಕೆ ಮಳೆ ಬೆಳೆ ಆಗದೇ ನೀರಿನ ಆಹಾಕಾರ ಎದ್ದಿದ್ದೆ. ಅಂತರ್ಜಲ ಮಟ್ಟ ಕುಸಿದಿದೆ. ಈ ಕಾರಣದಿಂದಾಗಿ ಪ್ರಕೃತಿಯ ಸಮತೋಲನ ಸರಿಯಾಗಬೇಕಾದರೆ ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಜೊತೆಗೆ ಶಾಲಾ ಮಕ್ಕಳ ಆರೋಗ್ಯ ದೃಷ್ಟಿಯ ಮುಂಜಾಗ್ರತ ಕ್ರಮವಾಗಿ ಉತ್ತಮ ಗುಣಮಟ್ಟದ ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಸಹ ವಿತರಿಸಿದರು. ಹಾಗೂ ಹಸಿರೇ ಉಸಿರಾಗಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿಯಾದ ಕರಿಯಣ್ಣ, ಐಪಿಪಿ ಶಿವಲಿಂಗಪ್ಪ ಮತ್ತು ಲತಾ ನಾರಾಯಣ, ರೇಣುಕಾಪ್ರಸಾದ್, ಕೌಶಲ್ಯ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷರಾದ ಮುರಳಿಧರ್ ಹಾಲಪ್ಪ, ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಗ್ರಾಮಸ್ಥರು ಮತ್ತಿತರಿದ್ದರು.


0 Comments