Ticker

6/recent/ticker-posts

Ad Code

Responsive Advertisement

ಹೆಚ್.ರವೀಂದ್ರರವರ ಹುಟ್ಟುಹಬ್ಬದ ಪ್ರಯುಕ್ತ ಮಹಿಳೆಯರಿಗೆ ಸೀರೆ ವಿತರಣೆ ,ಉಚಿತ ಆರೋಗ್ಯ ಶಿಬಿರ

ವಿಜಯನಗರ ವಿಧಾನಸಭಾ ಕ್ಷೇತ್ರದ ನಾಯಕರು ,ಮಾಜಿ ಆಡಳಿತ ಪಕ್ಷದ ನಾಯಕರಾದ ಹೆಚ್.ರವೀಂದ್ರರವರ ಹುಟ್ಟುಹಬ್ಬವನ್ನು ಹೆಚ್.ರವೀಂದ್ರ ಅಭಿಮಾನಿಗಳ ಬಳಗ ವತಿಯಿಂದ ವಿಜಯನಗರದಲ್ಲಿ ಆಯೋಜಿಸಲಾಗಿತ್ತು.

3000ಸಾವಿರ ಮಹಿಳೆಯರಿಗೆ ಸೀರೆ ವಿತರಣೆ ಮತ್ತು ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ಹೆಚ್.ರವೀಂದ್ರರವರು ಕೇಕ್ ಕತ್ತರಿಸಿ ,ಸಿಹಿ ತಿಂಡಿ ವಿತರಿಸಿದರು.

ಕಂದಾಯ ಸಚಿವರಾದ ಆರ್.ಅಶೋಕ್ ರವರು ಮತ್ತು ಉನ್ನತ ಶಿಕ್ಷಣ ಸಚಿವ ಡಾ||ಸಿ.ಎನ್.ಆಶ್ವಥ್ ನಾರಾಯಣ್ ರವರು ಮತ್ತು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ,ನಿಕಟಪೂರ್ವ ಬಿ.ಬಿ.ಎಂ.ಪಿ.ಸದಸ್ಯರಾದ ಆನಂದ್ ಹೊಸುರು ,ಶ್ರೀಮತಿ ಲತಾ ಗೋಪಿನಾಥ್ ರಾಜು ,ಬೆಂಗಳೂರುನಗರ ಬಿ.ಜೆ.ಪಿ.ಹಿಂದುಳಿದ ವರ್ಗದ ಮೋರ್ಚಾದ ಮುಖಂಡರಾದ ಗೋಪಿನಾಥ್ ರಾಜುರವರು ,ವಿಜಯನಗರ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ.ಮುಖಂಡರು ,ಕಾರ್ಯಕರ್ತರು ,ಸ್ಥಳೀಯ ನಾಗರಿಕರು ಹೆಚ್.ರವೀಂದ್ರರವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.



ಹೆಚ್.ರವೀಂದ್ರರವರು ಮಾತನಾಡಿ ವಿಜಯನಗರ ವಿಧಾನಸಭಾ ಕ್ಷೇತ್ರದ ಜನರು ಮತ್ತು ಬಿ.ಜೆ.ಪಿ.ಪಕ್ಷವು ನನ್ನ ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾ ಸಹಕಾರ ನೀಡುತ್ತಾ ಬಂದಿದೆ .

ಮೂರು ಬಾರಿ ಪಾಲಿಕೆ ಸದಸ್ಯನಾಗಿ ಮತ್ತು ವಿಧಾನಸಭಾ ಚುನಾವಣೆಯಲ್ಲಿ  ಸ್ಪರ್ಧಿಸಲು ನಿಮ್ಮ ಸಹಕಾರ ,ಬೆಂಬಲದಿಂದ ಸಾಧ್ಯವಾಯಿತು.

ಜನರ ಸಮಸ್ಯೆ ನಿವಾರಣೆಯಾಗಬೇಕು ,ಎಲ್ಲರು ನೆಮ್ಮದ್ದಿ ಇಂದ ಜೀವನ ಸಾಗಿಸಬೇಕು ಎಂಬ ಆಶಯ ನನ್ನದು ಎಂದು ಹೇಳಿದರು.

Post a Comment

0 Comments

Ad Code

Responsive Advertisement