ವಸೂಲಿ ದಂಧೆಯಲ್ಲಿ ತೊಡಗಿ ಸಂಚಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಚಿಂತಾಮಣಿ ಪೋಲೀಸರಿಗೆ ಬೆವರಿಳಿಸಿದ ಮಾಜಿ ಸ್ಪೀಕರ್
ಕೋಲಾರ. ಚಿಂತಾಮಣಿ ತಾಲೂಕು ಕುರುಟಹಳ್ಳಿ ಕ್ರಾಸ್ ಬಳಿ ವಾಹನಗಳನ್ನು ತಡೆದು ವಸೂಲಿ ಮಾಡುತ್ತಾ ಟ್ರಾಫಿಕ್ ಜಾಮ್ ಉಂಟುಮಾಡುತ್ತಿದ್ದ ಚಿಂತಾಮಣಿ ಪೊಲೀಸರ ವರ್ತನೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬೆವರಿಳಿಸಿದ್ದಾರೆ.
ನೆನ್ನೆ ಮಧ್ಯಾಹ್ನ ಸುಮಾರು ಎರಡು ಗಂಟೆ ಸಮಯದಲ್ಲಿ ಶ್ರೀನಿವಾಸಪುರ ದಿಂದ ಬೆಂಗಳೂರಿನತ್ತ ಹೊರಟಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕುರುಟಹಳ್ಳಿ ಕ್ರಾಸ್ ಬಳಿ ಬರುತ್ತಿದ್ದಂತೆ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಕೆಳಗಿಳಿದು ವಾಹನಗಳಿಂದ ವಸೂಲಿ ಮಾಡುತ್ತಿದ್ದ ಚಿಂತಾಮಣಿ ಗ್ರಾಮಾಂತರ ಪೊಲೀಸರ ಮೇಲೆ ಕೆಂಡಾಮಂಡಲರಾಗಿ ಸಚಿವರೊಂದು ಕಾನೂನು ಮಾಡಿದರೆ ನೀವೊಂದು ಕಾನೂನು ಮಾಡುತ್ತಾ ಈ ರೀತಿ ಬಡವರಿಂದ ಸುಲಿದ ಹಣದಿಂದ ನಿಮ್ಮ ಕುಟುಂಬಗಳನ್ನು ಪೋಷಿಸಿದರೆ ಅವರ ಶಾಪ ತಟ್ಟುತ್ತದೆಯೆಂದು ಅವಾಜ್ ಹಾಕಿದ್ದಾರೆˌ
ರಮೇಶ್ ಕುಮಾರವರ ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ರಾಜ್ಯದಾದ್ಯಂತ ಸಾರ್ವಜನಿಕರಿಂದ ಬೆಂಬಲ ವ್ಯಕ್ತವಾಗುತ್ತಿದ್ದು ಹೆದ್ದಾರಿಗಳಲ್ಲಿ ಪೋಲೀಸರು ಕರ್ತವ್ಯ ನಿರ್ವಹಿಸುವ ನೆಪದಲ್ಲಿ ವಸೂಲಿಯಲ್ಲಿ ತೊಡಗುತ್ತಿರುವುದು ಮಾಮೂಲಾಗಿದ್ದು ಇವರನ್ನ ಹತೋಟಿಗೆ ತರಲು ಹಿರಿಯ ಅಧಿಕಾರಿಗಳು ಮನಸ್ಸು ಮಾಡಬೇಕಿದೆಯೆಂಬ ಮಾತುಗಳೂ ಕೇಳಿಬರುತ್ತಿದೆ.
-ವಾರ್ತಾ ಜಾಲ, ಕೋಲಾರ




0 Comments