ಕರ್ನಾಟಕ ವಿಪ್ರ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಅಸೋಸಿಯೇಷನ್ (ರಿ) ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಗೂ ವಿಶ್ವ ಛಾಯಾಗ್ರಾಹಕರ ದಿನ, ಸಾಧನೆ ಮಾಡಿದ ಛಾಯಾಗ್ರಾಹಕರಿಗೆ ಸನ್ಮಾನ ಕಾರ್ಯಕ್ರಮವನ್ನು ಬಸವನಗುಡಿಯ ಉದಯ ಭಾನು ಕಲಾ ಸಂಘ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು . ದೀಪಾ ಬೆಳಗಿಸಿ ಕಾರ್ಯಕ್ರಮವನ್ನು ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಮತ್ತು ಚಿಕ್ಕಪೇಟೆ ಶಾಸಕರಾದ ಉದಯಗರುಡಾಚಾರ್ ಮತ್ತು ಪಂಡಿತರಾದ ಸತ್ಯಧ್ಯಾನಚಾರ್ಯ ಕಟ್ಟಿರವರು ಅಖಿಲಾ ಕರ್ನಾಟಕ ಮಹಾಸಭಾ ಉಪಾಧ್ಯಕ್ಷರಾದ ಲಕ್ಷ್ಮೀಕಾಂತ್, ಹಿರಿಯ ಪತ್ರಕರ್ತ ವೆಂಕಟನಾರಾಯಣ್ ಕೆ.ಎಸ್.ವಿ.ಪಿ.ಸಂಘದ ಅಧ್ಯಕ್ಷರಾದ ಬಿ.ಕೆ.ರಮೇಶ್ ರವರು ಕ್ಯಾಮರಗಳನ್ನು ಚಾಲನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರು ಸ್ವಾಮೀಜಿಗಳು ಮಾತನಾಡಿ ಸಂಘಟನೆ ಇದ್ದಾಗ ಸಮಾಜ ಅಭಿವೃದ್ದಿ ಸಾಧ್ಯ .ಧಾರ್ಮಿಕ ,ಸಂಸ್ಕೃತಿ ,ಸಂಪ್ರಾದಯಗಳನ್ನು ಮರೆಯಬಾರದು .ಯಾವುದೇ ವೃತ್ತಿ ಮೇಲು ,ಕೀಳು ಇಲ್ಲ .ಶ್ರದ್ದೆ ಭಕ್ತಿ ಇಂದ ಶ್ರೀ ಕೃಷ್ಣ ನೆನದು ಕಾರ್ಯ ನಿರ್ವಹಿಸಿ ಯಶ್ವಸಿ ಫಲ ಸಿಗುತ್ತದೆ ಎಂದು ಹೇಳಿದರು.
ಶಾಸಕರಾದ ಉದಯಗರುಡಾಚಾರ್ ರವರು ಮಾತನಾಡಿ ಬ್ರಾಹ್ಮಣ ಸಮುದಾಯದವರು ವಿಡಿಯೊ ಮತ್ತು ಪೋಟೋ ಉದ್ಯಮದಲ್ಲಿ ತೊಡಗಿಸಿಕೊಂಡು ವಿಡಿಯೊ, ಪೋಟೋ ಕ್ಷೇತ್ರದಲ್ಲಿ ಹೆಸರು ಗಳಿಸಿದ್ದಾರೆ .ರಾಜಕಾರಣಿಗಳ ಯಾವುದೇ ಕಾರ್ಯಕ್ರಮ ಪೋಟೋ ಬಹಳ ಮುಖ್ಯ .ನಾವು ಮಾಡಿದ ಸಾಧನೆ ಪೋಟೋ ಮಾತನಾಡುತ್ತದೇ .ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಸಾಧನೆ ಮಾಡಿದ ಪೋಟೋಗ್ರಾಫರ್ ಗಳನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಪ್ರ ಪೋಟೋಗ್ರಾಫರ್ಸ್ ಸಂಘ ವೆಬ್ ಸೈಟ್ ಚಾಲನೆ ನೀಡಲಾಯಿತು.
ನಂತರ ಸಾಧನೆ ಮಾಡಿದ ಛಾಯಾಗ್ರಾಹಕರಿಗೆ ಸನ್ಮಾನಿಸಿದರು.



0 Comments