🕉️ ಶ್ರೀ ಮಂತ್ರಾಲಯ ಪ್ರಭುಗಳ ಬೃಂದಾವನವನ್ನು ಮೂರು ಭಾಗಗಳಲ್ಲಿ ನೋಡಬಹುದು. 🕉️
🔥೧. ಕೂರ್ಮಾಸನದಿಂದ ಹಿಡಿದು ವಸ್ತ್ರವನ್ನುಡಿಸುವ ಸ್ಥಳದವರೆಗೂ ಇರುವುದು ಮೊದಲನೆಯ ಭಾಗ.
ಇದರಲ್ಲಿ ೯ ಉಪಭಾಗಗಳಿವೆ. ಅವುಗಳು...
🔥೨. ಬೃಂದಾವನದ ಮಧ್ಯ ಭಾಗದಿಂದ ತೆನೆಗಳ ವರೆಗಿನದ್ದು ಎರಡನೆಯ ಭಾಗ.
ಇಂದು ಬೃಂದಾವನದಲ್ಲಿ ನಾಮ ಹಾಗೂ ಕಣ್ಣು ಮೂಗು ಇತ್ಯಾದಿ ಹಚ್ಚುವ ಭಾಗದಿಂದ ಕೂಡಿಕೊಂಡು ೬ ತೆನೆಗಳ ವರೆಗೂ ಇರುವ ಭಾಗವು ಮಂಟಪಕ್ಕೆ ಪ್ರತಿ ರೂಪವಾಗಿದೆ.
🔥೩. ತೆನೆಗಳಿಂದ ಕೂಡಿದ ಭಾಗ ಮೂರನೆಯ ಭಾಗ.
ಇದು ೬ ಊರ್ಧ್ವ ಲೋಕಗಳಿಗೆ ಪ್ರತಿ ರೂಪವಾಗಿದೆ. ಭೂಲೋಕದ ಮೇಲೆ...
೧. ಭುವರ್ಲೋಕ
೨. ಸ್ವರ್ಗಲೋಕ
೩. ಮಹಾಲೋಕ
೪. ಜನೋಲೋಕ
೫. ತಪೋಲೋಕ
೬. ಸತ್ಯಲೋಕ
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಸತ್ಯಲೋಕದಿಂದಲೇ ಭುವಿಗಿಳಿದು ಬಂದ ಕಲ್ಪವೃಕ್ಷ - ಕಾಮಧೇನು.
ಶ್ರೀಮಂತ್ರಾಲಯ ಪ್ರಭುಗಳ ಬೃಂದಾವನದಲ್ಲಿರುವ ೭೧೩ ಸಾಲಿಗ್ರಾಮಗಳು ಪೀಠ ಪೂಜೆಯಲ್ಲಿ ಬರುವ ಭಗವಂತನ ಹಾಗೂ ಅವನ ಪರಿವಾರ ದೇವತೆಗಳಿಗೆ ಸೂಚಿತವಾಗಿವೆ.
ಶ್ರೀ ಗುರುಸಾರ್ವಭೌಮರು ಬ್ರಹ್ಮಾಂಡ - ಹರಿಮಂದಿರ - ಪೀಠಗಳಿಗೆ ಪ್ರತಿರೂಪವೆನಿಸಿದ, ಸುಂದರ ಬೃಂದಾವನದ ಕೆಳ ಭಾಗದಲ್ಲಿ ಕುಳಿತಿದ್ದಾರೆ. ಇದರಿಂದ ಶ್ರೀ ಗುರುರಾಜರ ಬೃಂದಾವನ ಶ್ರೀ ಹರಿಯ ಮಂದಿರವೇ ಆಗಿದೆ.
LIVE - SRI RAGHAVENDRA SEVA SAMITHI - MALLESWARAVA 350TH ARADHANA MAHOTHSAVA
https://www.youtube.com/watch?v=56z7EePYE6A&t=2018s

0 Comments