Ticker

6/recent/ticker-posts

Ad Code

Responsive Advertisement

" ಶ್ರೀ ರಾಘವೇಂದ್ರಾಯ ನಮಃ " ಸಕಲ ಅಭೀಷ್ಟಗಳು ಲಭಿಸುವುದು

ಶ್ರೀ ರಾಘವೇಂದ್ರ  ಅಷ್ಟಾಕ್ಷರ ಸ್ತೋತ್ರವನ್ನು  ಶ್ರೀ  ಜಗನ್ನಾಥ ದಾಸರು  ಎಲ್ಲಾ ಜನಗಳ ಅಭಿಲಾಷೆಗಳು  ಪೂರ್ಣಗೊಳ್ಳಲಿ  ಹಾಗೂ   ಪ್ರತ್ಯೇಕವಾಗಿ ಸ್ತ್ರೀಯರಿಗೆ   ಸಕಲ ಭಾಗ್ಯಗಳನ್ನು ಅನುಗ್ರಹಿಸುವ  ಶ್ರೇಷ್ಠವಾದ ಉದ್ದೇಶದಿಂದಲೇ  ಅರ್ಪಿಸಿದ್ದಾರೆ . 

ಪ್ರತಿ ದಿನ  " ಶ್ರೀ ರಾಘವೇಂದ್ರಾಯ ನಮಃ " ಎಂದು  ೧೦೮(108)  ಬಾರಿ ಯಾರು ಸ್ತುತಿಸುತ್ತಾರೋ  ಅವರಿಗೆ  ಸಕಲ ಅಭೀಷ್ಟಗಳು ಲಭಿಸುವುದು .

ಗುರುರಾಜಾಷ್ಟಾಕ್ಷರಂ  ಸ್ಯಾತ್  ಮಹಾಪಾತಕನಾಶನಮ್ ।

ಏಕೈಕಮಕ್ಷರಮ್ ಚಾತ್ರ  ಸರ್ವಕಾಮ್ಯಾರ್ಥ  ಸಿದ್ಧಿದಮ್ ।।೧।।

ಅರ್ಥ : ಶ್ರೀ ಮದ್ರಾಘವೇಂದ್ರತೀರ್ಥ  ಗುರುಸಾರ್ವಭೌಮರ ' ಶ್ರೀ ರಾಘವೇಂದ್ರಾಯ ನಮಃ ' ಎಂಬ ಅಷ್ಟಾಕ್ಷರ ಮಂತ್ರವು  ಮಹಾಪಾತಕಗಳನ್ನು  ಕಳೆಯುವಂಥದ್ದಾಗಿದೆ. ಇದರಲ್ಲಿರುವ ಒಂದೊಂದು ಅಕ್ಷರವು  ಸಕಲ ಅಭಿಲಾಷೆಗಳನ್ನು  ಪೂರೈಸುವಂಥದ್ದಾಗಿದೆ. 

ರಕಾರೋಚ್ಚಾರಣೇನೈವ ರೋಗಹಾನಿರ್ನ  ಸಂಶಯಃ ।

ಘಕಾರೇಣ ಬಲಂ  ಪುಷ್ಟಿಃ  ಆಯುಃ  ತೇಜಶ್ಚ ವರ್ಧತೇ ।।೨।।

ಅರ್ಥ : ರಕಾರದ  ಉಚ್ಛಾರಣೆಯ ಮಾತ್ರದಿಂದ ರೋಗಹಾನಿಯಾಗುವುದಲ್ಲಿ  ಸಂಶಯವಿಲ್ಲ . ಘಕಾರದ   ಉಚ್ಛಾರದಿಂದ  ಬಲ , ಪುಷ್ಟಿ , ಆಯುಷ್ಯ  ಮತ್ತು ತೇಜಸ್ಸು (ಶರೀರದ ಕಾಂತಿ ) ವರ್ಧಿಸುತ್ತದೆ. 

ವಕಾರೇಣಾತ್ರ  ಲಭತೇ  ವಾಂಛಿತಾರ್ಥಾನ್ನ  ಸಂಶಯಃ ।

ದ್ರಕಾರೇಣಾಘರಾಶಿಸ್ತು  ದ್ರಾವ್ಯತೇ ದೃತಮೇವ ಹಿ ।।೩।।

ಅರ್ಥ : ವಕಾರೋಚ್ಛಾರಣದಿಂದ  ಭಕ್ತನು ವಾಂಛಿತಾರ್ಥಗಳನ್ನೆಲ್ಲಾ ಪಡೆಯುತ್ತಾನೆ . ದ್ರಕಾರದ ಉಚ್ಛಾರಣದಿಂದ  ಪಾಪಗಳ ರಾಶಿಯು  ಕೂಡಲೇ  ನಿವಾರಣೆಯಾಗುತ್ತದೆ . 

ಯಕಾರೇಣ  ಯಮಾತ್ ಬಾಧೋ  ವಾರ್ಯತೇ  ನಾತ್ರ ಸಂಶಯಃ ।

ನಕಾರೇಣ  ನರೇಂದ್ರಾಣಾಂ  ಪದಮಾಪ್ನೋತಿ  ಮಾನವಃ ।।೪।।

ಅರ್ಥ :  ಯಕಾರದ  ಉಚ್ಛಾರದಿಂದ  ಯಮ ಬಾಧೆಯು  ನಿಶ್ಚಿತವಾಗಿ  ನಿವಾರಿಸಲ್ಪಡುತ್ತದೆ . ನಕಾರದ  ಉಚ್ಛಾರದಿಂದ  ಭಕ್ತನು ರಾಜಪದವಿಯನ್ನು ( ಉನ್ನತ  ಅಧಿಕಾರದ ಸ್ಥಾನವನ್ನು) ಹೊಂದುತ್ತಾನೆ . 

ಮಕಾರೇಣೈವ  ಮಾಹೇಂದ್ರಮೈಶ್ವರ್ಯಂ  ಯಾತಿ ಮಾನವಃ ।

ಗುರೋರ್ನಾಮ್ನಾಶ್ಚ  ಮಹಾತ್ಮ್ಯಂ  ಅಪೂರ್ವಂ   ಪರಮಾದ್ಭುತಮ್ ।।೫।।

ಅರ್ಥ : ಮಕಾರೋಚ್ಛಾರದಿಂದ  ಇಂದ್ರನ ಐಶ್ವರ್ಯವನ್ನು  ಪಡೆಯುವನು. ಈ ರೀತಿ ಶ್ರೀಮದ್ರಾಘವೇಂದ್ರತೀರ್ಥ   ಗುರುಸಾರ್ವಭೌಮರ  ಹೆಸರಿನ ಮಹಾತ್ಮ್ಯವು  ಹಿಂದೆಂದೂ  ಕಾಣದಂತಹ  ಪರಮಾಶ್ಚರ್ಯ ಫಲದಿಂದ  ಒಳಗೊಂಡಿದೆ .  

ತನ್ನಾಮಸ್ಮರಣಾದೇವ  ಸರ್ವಾಭೀಷ್ಟಂ  ಪ್ರಸಿದ್ಯತಿ ।

ತಸ್ಮಾನಿತ್ಯಂ  ಪಠೇಧ್ಭಕ್ತ್ಯಾ  ಗುರುಪಾದರತಸ್ಸದಾ ।।೬।।

ಅರ್ಥ : ಅಷ್ಟಾಕ್ಷರ ಮಂತ್ರವನ್ನು  ಸ್ಮರಣೆ ಮಾತ್ರದಿಂದಲೇ  ಸರ್ವಾಭೀಷ್ಟವು  ಲಭಿಸುವುದು . ಆದ್ದರಿಂದ  ಗುರುವರ್ಯರ ಪಾದಗಳನ್ನು ಆಶ್ರಯಿಸಿದ  ಭಕ್ತನು  ಈ ಮಂತ್ರವನ್ನು ನಿತ್ಯವೂ ಭಕ್ತಿಯಿಂದ ಪಠನೆ ಮಾಡಬೇಕು . 

ಶ್ರೀ ರಾಘವೇಂದ್ರಾಯ ನಮಃ  ಇತ್ಯಾಷ್ಟಾಕ್ಷರ  ಮಂತ್ರತಃ ।

ಸರ್ವಾನ್ಕಾಮಾನವಾಪ್ನೋತಿ  ನಾತ್ರ ಕಾರ್ಯಾ ವಿಚಾರಣಾಃ ।।೭।।

ಅರ್ಥ : ಶ್ರೀ ರಾಘವೇಂದ್ರಾಯ ನಮಃ  ಎಂಬ  ಅಷ್ಟಾಕ್ಷರ ಮಂತ್ರ ಜಪವನ್ನು ಮಾಡುವುದರಿಂದ  ಭಕ್ತನು  ತನ್ನೆಲ್ಲಾ  ಅಭೀಷ್ಟಗಳನ್ನು ಪಡೆಯುವುದರಲ್ಲಿ   ಸಂಶಯವಿಲ್ಲ. 

ಅಷ್ಟೋತ್ತರಶತಾವೃತ್ತಿಂ  ಸ್ತೋತ್ರಸ್ಯಾಸ್ಯ  ಕರೋತಿ ಯಃ।

ತಸ್ಯ ಸರ್ವಾರ್ಥಸಿದ್ಧಿಸ್ಯಾತ್  ಗುರುರಾಜಪ್ರಸಾದತಃ ।।೮।।

ಅರ್ಥ : ಯಾರು ಶ್ರೀ ಗುರು ಸಾರ್ವಭೌಮರ  ಸ್ತೋತ್ರವನ್ನು ೧೦೮ ಬಾರಿ ಪಠಿಸುವರೋ  ಅವರಿಗೆ  ಗುರುವರ್ಯರ  ಅನುಗ್ರಹದಿಂದ ಸಕಲಕಾಮನೆಗಳು  ಸಿದ್ದಿಸುತ್ತದೆ . 

ಏತದಷ್ಟಾಕ್ಷರಸ್ಯಾತ್ರ  ಮಹಾತ್ಮ್ಯಂ  ವೇತ್ತಿ  ಕಃ ಪುಮಾನ್ ।

ಪಠನಾದೇವ  ಸರ್ವಾರ್ಥಸಿದ್ಧಿರ್ಭವತಿ  ನಾನ್ಯಥಾ ।।೯।।

ಅರ್ಥ :  ಈ ಅಷ್ಟಾಕ್ಷರ  ಮಂತ್ರದ ಮಹಾತ್ಮೆಯನ್ನು  ಯಾವ ಭಕ್ತನು  ಸಂಪೂರ್ಣವಾಗಿ ತಿಳಿಯಲು 

ಸಮರ್ಥನಾದಾನು ? ಈ ಅಷ್ಟಾಕ್ಷರ ಮಂತ್ರ ಪಠನೆಯಿಂದ  ಮಾತ್ರವೇ  ಸರ್ವಾರ್ಥಗಳ  ಸಿಧ್ಧಿಯಾಗುತ್ತದೆ  ಬೇರೆ ಮಾರ್ಗದಿಂದ ಅದು ಸಾಧ್ಯವಿಲ್ಲ . 

ಸ್ವಾಮಿನಾ  ರಾಘವೆಂದ್ರಾಖ್ಯಾ   ಗುರುಪಾದಾಬ್ಜಸೇವಿನಾ ।

ಕೃತಮಷ್ಟಾಕ್ಷರ  ಸ್ತೋತ್ರಂ  ಗುರುಪ್ರೀತಿಕರಂ  ಶುಭಮ್ ।।೧೦।।

ಅರ್ಥ : ಶ್ರೀರಾಘವೇಂದ್ರ ತೀರ್ಥರೆಂಬ  ಗುರುವರ್ಯರ  ಪಾದಕಮಲಗಳನ್ನು  ಸದಾ ಸೇವಿಸುತ್ತಿರುವ  ಸ್ವಾಮಿರಾಯ ಎಂಬುವರಿಂದ , ಗುರುಗಳಿಗೆ  ಪೀತಿಯನ್ನುಂಟು  ಮಾಡುವ ಶುಭಕರವಾದ  ಈ ಅಷ್ಟಾಕ್ಷರ ಸ್ತೋತ್ರವು  ವಿರಚಿಸಲ್ಪಟ್ಟಿದೆ . 

।। ಇತಿ ಶ್ರೀ ಜಗನ್ನಾಥಾದಾಸಾರ್ಯವಿರಚಿತ ಶ್ರೀರಾಘವೇಂದ್ರಅಷ್ಟಾಕ್ಷರ

ಸ್ತೋತ್ರಂ ಸಂಪೂರ್ಣಂ ।।

ಶ್ರೀ ಮಧ್ವೇಶಾಪ೯ಣಮಸ್ತು




Post a Comment

0 Comments

Ad Code

Responsive Advertisement