ಡಾ.ರಾಜ್‌ಕುಮಾರ್ ಸಿನಿಮಾದ ಸೂಪರ್ ಸ್ಟಾರ್ ಮಾತ್ರವಲ್ಲ. ಆಕಾಶದಲ್ಲಿನ ಹೊಳೆಯುವ ನಕ್ಷತ್ರ. ಡಾ. ರಾಜ್‌ಕುಮಾರ್ ಅವರು ಶಿಕ್ಷಣದ ಬಗ್ಗೆ ಹೊಂದಿದ್ದಕನಸನ್ನು ಅವರ ಕುಟುಂಬ ಸಾಕಾರ ಮಾಡುತ್ತಿರುವುದು ಶ್ಲಾಘನೀಯ. ಇದು ಜ್ಞಾನದ ಯುಗ. ಯಾರಲ್ಲಿ ಜ್ಞಾನವಿರುತ್ತದೆಯೋ ಅವರು ಜಗತ್ತನ್ನು ಆಳುತ್ತಾರೆ. ಹೀಗಾಗಿ ಬೋಧಕರು ವಿದ್ಯಾರ್ಥಿಗಳಿಗೆ ಸಾತ್ವಿಕ ಜ್ಞಾನದ ಬೆಳಕು ತುಂಬುವ ಕಾರ್ಯ ಮಾಡಬೇಕು ಎಂದು ವಿದ್ಯಾರ್ಥಿಗಳ ಕಲಿಕೆಯ ಅನುಕೂಲಕ್ಕಾಗಿ ಡಾ.ರಾಜ್‌ಕುಮಾರ್ ಕುಟುಂಬದಿಂದ ಹೊರತಂದಿರುವ ಡಾ.ರಾಜ್ ಕುಮಾರ್ ಲರ್ನಿಂಗ್ ಆ್ಯಪ್‌ಗೆ(ಕಲಿಕೆ ಆ್ಯಪ್) ಚಾಲನೆ ನೀಡಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದರು.
ಹಿಂದೆ ಭೂಮಿ ಇದ್ದರು ಜಗತ್ತು ಆಳುತ್ತಿದ್ದರು. ನಂತರ ದುಡ್ಡಿದ್ದವರು ಜಗತ್ತು ಆಳುವ ಕಾಲ ಬಂತು. ಈಗ ಜ್ಞಾನವಿದ್ದವರದ್ದೇ ಜಗತ್ತು. 21ನೇ ಶತಮಾನ ಜ್ಞಾನವಂತರಿಗೆ ಸೇರಿದ್ದು. ಜ್ಞಾನಕ್ಕೆ ಬೆಲೆ ಹಾಗೂ ಬಲ ಬಂದಿದೆ. ಜ್ಞಾನದ ಕ್ಷೇತ್ರಕ್ಕೆ ಡಾ.ರಾಜ್ ಕುಮಾರ್ ಅವರ ಆ್ಯಪ್ ದೊಡ್ಡ ಕೊಡುಗೆ ನೀಡಲಿದೆ. ಈ ಅಕಾಡೆಮಿಮೂಲಕ ಮಕ್ಕಳಿಗೆ ತರ್ಕಬದ್ಧವಾಗಿ ಚಿಂತನೆ ಮಾಡಲು ಪ್ರೇರೇಪಿಸಬೇಕು. ಇದರಿಂದ ಎಲ್ಲ ವಿಷಯವು ಸಹಜವಾಗಿ ಅವರ ಸ್ಮತಿ ಪಟಲದಲ್ಲಿ ಉಳಿಯುತ್ತದೆ ಎಂದರು.
ಮುಗ್ಧತೆ, ಆತ್ಮಶುದ್ಧತೆ: ರಾಜ್ ಕುಮಾರ್ ಎಂದರೆ,ಒಬ್ಬ ಸಾಧಕ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾಧಕ ಸಾವಿನ ನಂತರವೂ ಬದುಕಬಲ್ಲ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಎಂತಹ ಶ್ರೀಮಂತ, ಮೌಲಿಕ ಬದುಕನ್ನು ಬದುಕಿದರೆ ಸಾವಿನ ನಂತರವೂ ಜನ ನಮ್ಮನ್ನು ನೆನಪಿಸಿಕೊಳ್ಳಬೇಕು. ಅಂತಹ ಸಾಧನೆ ಮಾಡಿದ ಕರ್ನಾಟಕದ ಅಂಥ ಏಕಮೇವ ತಾರೆ ಅಂದರೆ ಡಾ.ರಾಜ್ ಕುಮಾರ್. ಅವರ ಸರಳತೆ, ನಡೆ,ನುಡಿ, ಜೀವನ ಮೌಲ್ಯಗಳನ್ನು ವಿಶೇಷವಾಗಿ ಅಧಿಕಾರದಲ್ಲಿದ್ದವರು, ಜನಪ್ರಿಯ ವ್ಯಕ್ತಿಗಳು ಸರಳವಾಗಿ ಇರಬೇಕು ಎಂಬುದನ್ನು ಅವರಿಂದ ಕಲಿಯಬೇಕು.
ಡಾ.ರಾಜ್‌ಕುಮಾರ್ ಕಲಿಕಾ ಆ್ಯಪ್‌ನ ರಾಯ ಬಾರಿಯೂ ಆಗಿರುವ ನಟ ಪುನೀತ್ ರಾಜ್ ಕುಮಾರ್, ಹಿರಿಯ ನಟ ಡಾ.ರಾಘವೇಂದ್ರ ರಾಜ್ ಕುಮಾರ್ ಇತರರು ಉಪಸ್ಥಿತರಿದ್ದರು.
ಡಾ.ರಾಜ್ ಕುಮಾರ್ ಲರ್ನಿಂಗ್ ಆ್ಯಪ್ ಅನ್ನುವಿದ್ಯಾರ್ಥಿಗಳು ತಮ್ಮ ಆ್ಯಂಡ್ರಾಯ್ಡ ಫೋನ್ ಮೂಲಕ ಪ್ಲೇಸ್ಟೋರ್‌ನಿಂದ ಪಡೆಯಬಹುದಾಗಿದೆ.
https://play.google.com/store/apps/details?id=co.pariksha.rkgov
ಸದ್ಯ ಈ ಆ್ಯಪ್‌ನಲ್ಲಿ ದ್ವಿತೀಯ ಪಿಯುಸಿವಿದ್ಯಾರ್ಥಿಗಳ ಕಲಿಕೆಗೆ ಪೂರಕವಾದ ಪೂರ್ವ ಮುದ್ರಿತ ವಿಡಿಯೊಗಳುಲಭ್ಯವಿದೆ. ವಿದ್ಯಾರ್ಥಿಗಳು ತಮ್ಮ ಪಠ್ಯಕ್ಕೆ ಸಂಬಂಧಿಸಿದ ಯಾವುದೇ ಸಂಶಯ, ಗೊಂದಲಗಳಿದ್ದರೂ, ಈ ಪೂರ್ವ ಮುದ್ರಿತ ವಿಡಿಯೊಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿದೆ.
0 Comments