Ticker

6/recent/ticker-posts

Ad Code

Responsive Advertisement

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ ಕಾಣಿಪಾಕಂನ ವರಸಿದ್ಧಿ ವಿನಾಯಕ ದೇಗುಲಕ್ಕೆ ಡಿ.ಕೆ.ಶಿವಕುಮಾರ್ ಭೇಟಿ

 ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಾಣಿಪಾಕಂನ ಶ್ರೀ ವರಸಿದ್ಧಿ ವಿನಾಯಕ ದೇಗುಲಕ್ಕೆ ಸೋಮವಾರ ತೆರಳಿ, ಪೂಜೆ ಸಲ್ಲಿಸಿದರು.


ಇದಕ್ಕೆ ಮುನ್ನ ಕಾಂಗ್ರೆಸ್, ವೈಎಸ್ಸಾರ್ ಕಾಂಗ್ರೆಸ್ ಹಾಗೂ ತೆಲುಗು ದೇಶಂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗೂಡಿ ಶಿವಕುಮಾರ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಂಡದ್ದು ವಿಶೇಷವಾಗಿತ್ತು.

ಆಂಧ್ರದ ಪುಟ್ಟಲಪಟ್ಟು ಶಾಸಕ ಎಂ.ಎಸ್. ಬಾಬು, ಚಿತ್ತೂರು ಶಾಸಕ ಜೆಎಂಸಿ ಶ್ರೀನಿವಾಸ್, ವೈಎಸ್ಸಾರ್ ಕಾಂಗ್ರೆಸ್ ನಾಯಕ ವಲಿವೇಲು ರಾಜರೆಡ್ಡಿ, ಪೃಥ್ವಿ, ಕಾಂಗ್ರೆಸ್ ನಾಯಕ ಸುರೇಶ್ ಕುಪ್ಪಂ , ಕುಮಾರರಾಜು, ಪ್ರದೀಪ್ ರೆಡ್ಡಿ, ದತ್ತು, ಸರಪಂಚ ಶಾಂತಿಸಾಗರ ರೆಡ್ಡಿ, ಬುಜ್ಜಿರೆಡ್ಡಿ, ಕಾಣಿಪಾಕಂ ವಿನಾಯಕ ದೇವಸ್ಥಾನ ಮಂಡಳಿಯ ಮಾಜಿ ಅಧ್ಯಕ್ಷರಾದ ಮೋಹನ್ ರೆಡ್ಡಿ, ಜಗನ್ನಾಥ ರೆಡ್ಡಿ, ಬೆಂಗಳೂರಿನ ರಘುನಾಥ ನಾಯ್ಡು ಹಾಜರಿದ್ದರು.

Post a Comment

0 Comments

Ad Code

Responsive Advertisement