Ticker

6/recent/ticker-posts

Ad Code

Responsive Advertisement

ಬನುಮಯ್ಯನವರ ಜಯಂತಿಯನ್ನು ಒಂದೇ ಜಾತಿಯವರು ಆಚರಿಸಬೇಕೆಂಬ ಕಟ್ಟುಪಾಡುಗಳಿಲ್ಲ

ಮಧುಗಿರಿ - ಬನುಮಯ್ಯನವರ ಜಯಂತಿಯನ್ನು ಒಂದೇ ಜಾತಿಯವರು ಆಚರಿಸಬೇಕೆಂಬ ಕಟ್ಟುಪಾಡುಗಳಿಲ್ಲ ಎಂದು ಹೊಸದುರ್ಗ ಕುಂಚಿಟಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಂಚಿಟಿಗರ ಸಂಘದ ಆವರಣದಲ್ಲಿ ರಾವ್ ಬಹದ್ದೂರು ಧರ್ಮಪ್ರಕಾಶ್ ಡಿ.ಬನುಮಯ್ಯನವರ ಜಯಂತ್ಯೋತ್ಸವ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಬನುಮಯ್ಯ ನವರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲಾ ಜಾತಿಗಳನ್ನು ಒಪ್ಪಿಕೊಳ್ಳುವ ಹಾಗೂ ಅಪ್ಪಿಕೊಳ್ಳುವ ಮೂಲಕ ಜಾತ್ಯಾತೀತರಾಗಿದ್ದರು. ಅವರ ಪ್ರೇರಣೆ ಮೇರೆಗೆ ಮಿರ್ಜಾ ಇಸ್ಮಾಯಿಲ್ ರವರು ಕುಂಚಿಟಿಗರ ಸಂಘಕ್ಕೆ ಈ ನಿವೇಶನವನ್ನು ದಾನವಾಗಿ ನೀಡಿದ್ದನ್ನು ಸ್ಮರಿಸಿದರು.

ತುಮಕೂರು ಜಿಲ್ಲೆ ಶಾಶ್ವತ ಬರಗಾಲದಿಂದ ತತ್ತರಿಸುತ್ತಿದ್ದು, ಜಿಲ್ಲೆಯ ಪ್ರಭಾವಿ ಮುಖಂಡರುಗಳಾದ ಡಾ.ಜಿ.ಪರಮೇಶ್ವರ್, ಟಿ.ಬಿ.ಜಯಚಂದ್ರ ಹಾಗೂ ಕೆ.ಎನ್ ರಾಜಣ್ಣ ಅವರಿಗೆ ಅಧಿಕಾರ ನೀಡಿದರೆ ನೀರಾವರಿ ಯೋಜನೆಗಳು ಅನುಷ್ಠಾನಗೊಂಡು ರೈತರ ಬದುಕು ಹಸನಾಗುವುದು. ಬನುಮಯ್ಯ ಜಯಂತಿ ಕಾರ್ಯಕ್ರಮ ಯಶಸ್ವಿಯಾಗಲು ಆರ್.ರಾಜೇಂದ್ರ ಹಾಗೂ ಅವರ ಸಂಗಡಿಗರ ಶ್ರಮ ಶ್ಲಾಘನೀಯ ಎಂದ ಅವರು ಸಮಾಜದ ಏಳಿಗೆಗೆ ಕೆ.ಎನ್.ರಾಜಣ್ಣ ಅವರ ಕೊಡುಗೆ ಅಪಾರವಾಗಿದ್ದು, ನಮ್ಮ ಸಮಾಜ ಮುಂದಿನ ದಿನಗಳಲ್ಲಿ ಅವರ ಜೊತೆ ಇರಲಿದೆ ಎಂದರು. 

ಇತ್ತೀಚಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿರುವ ಕೆಲವರು ಸ್ವಾಮೀಜಿಗಳು ರಾಜಕೀಯ ಮಾಡಬಾರದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಸರ್ಕಾರ ಎಡವಿದಾಗ ಎಚ್ಚರಿಕೆ ಹಾಗೂ ಮಾರ್ಗದರ್ಶನ ನೀಡುವುದು ಸ್ವಾಮೀಜಿಗಳ ಕರ್ತವ್ಯ ಎಂದು ತಿಳಿಸಿದರು. 

ಮಾಜಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಹುಟ್ಟು ಸಾವಿನ ಮಧ್ಯೆ ಜೀವನದಲ್ಲಿ ಮಾಡಿರುವ ಸಾಧನೆಗಳು ಮನುಷ್ಯನಿಗೆ ಮುಖ್ಯವೇ ಹೊರತು ಆಸ್ತಿ ಅಂತಸ್ತುಗಳಲ್ಲ. ಈ ನಿಟ್ಟಿನಲ್ಲಿ ಬನುಮಯ್ಯ ನವರು ಸಮಾಜದ ಏಳಿಗೆಗೆ ಅನೇಕ ಕೊಡುಗೆಗಳನ್ನು ನೀಡಿ ಆದರ್ಶ ವ್ಯಕ್ತಿಗಳಾಗಿದ್ದಾg. ಮಧುಗಿರಿ ಪಟ್ಟಣದಲ್ಲಿ ಬನುಮಯ್ಯನವರ ಪ್ರತಿಮೆ ಸ್ಥಾಪಿಸಬೇಕೆಂಬುದು ಸ್ವಾಮೀಜಿಯವರ ಆಶಯ ಎಂದರು.

ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ, ದಾರ್ಶನಿಕ ಬನುಮಯ್ಯನವರ ಜೀವನ ಚರಿತ್ರೆಯ ಕಿರು ಹೊತ್ತಿಗೆಗಳನ್ನು ಮುಂದಿನ ಪೀಳಿಗೆಗೆ ಓದಲು ಕೊಡಬೇಕು. ಅವರ ಬಗ್ಗೆ ಅಧ್ಯಯನ ನಡೆಸಿ ಅವರ ಅದರ್ಶ ತತ್ವಗಳನ್ನು ಪಾಲಿಸಲು ಪೋಷಕರು ಮಕ್ಕಳಿಗೆ ಅನುವು ಮಾಡಿಕೊಡಬೇಕು ಎಂದರು. 

ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಯೋಜನೆಗಳು ಅನುಷ್ಠಾನಗೊಳಿಸಲು ಈಗಿರುವ ಜನಪ್ರತಿನಿಧಿಗಳು ತಾತ್ಸರ ಮನೋಭಾವ ತೋರುತ್ತಿದ್ದು, ಮುಂದಿನ ದಿನಗಳಲ್ಲಿ ನಾನು ಹಾಗೂ ಜಯಚಂದ್ರ ಅವರು ಮತ್ತೇ ಶಾಸಕರಾಗಲಿದ್ದು, ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಕೃಷಿ ವಿಜ್ಞಾನಿ ಡಾ.ವಸಂತಕುಮಾರ್ ತಿಮಕಾಪುರ, ರಾಜ್ಯ ಪ್ರಶಸ್ತಿ ರೈತ ಮಹಿಳೆ ಮಿಡತರಹಳ್ಳಿ ಮಂಗಳಮ್ಮ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕ್ರಿಬ್ಕೋ ನಿರ್ದೇಶಕ ಆರ್.ರಾಜೇಂದ್ರ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕರಾದ ಬಿ.ನಾಗೇಶ್ ಬಾಬು, ಜಿ.ಎನ್.ಮೂರ್ತಿ, ಜಿ.ಎಸ್.ರವಿ, ತಾ.ಪಂ ಮಾಜಿ ಅಧ್ಯಕ್ಷೆ ಇಂದಿರಾ, ರಾಜ್ಯ ಮಹಿಳಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಸುವರ್ಣಮ್ಮ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಸ್.ಆರ್.ರಾಜಗೋಪಾಲ್, ಪುರಸಭೆ ಸದಸ್ಯ ಲಾಲಾಪೇಟೆ ಮಂಜುನಾಥ್, ಮಾಜಿ ಅಧ್ಯಕ್ಷರಾದ ಎಂ.ಕೆ.ನಂಜುಂಡಯ್ಯ, ಮಹಮದ್ ಅಯೂಬ್, ಮುಖಂಡರಾದ ಆದಿನಾರಾಯಣ ರೆಡ್ಡಿ, ಪಿ.ಸಿ.ಕೃಷ್ಣಾರೆಡ್ಡಿ, ಯುವ ಕಾಂಗ್ರೇಸ್ ಕಾರ್ಯಾಧ್ಯಕ್ಷ ಬಿ.ಎನ್.ನಾಗಾರ್ಜುನ, ಹೊನ್ನಾಪುರ ದೀಪಕ್, ಡಿ.ಬಿ.ಆಶಾ, ಅಪ್ಪುಗೌಡ, ಮಲ್ಲೇಗೌಡ, ಬಂದ್ರೇಹಳ್ಳಿ ಕುಮಾರ್ ಹಾಗೂ ಮುಂತಾದವರು ಇದ್ದರು.

Post a Comment

0 Comments

Ad Code

Responsive Advertisement