ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ):
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ಕ್ಯಾಲೆಂಡರ್ ಮಾಹೆಗನುಗುಣವಾಗಿ ಮಾಸಿಕ ಪಾಸುಗಳನ್ನು ವಿತರಣೆ ಮಾಡಲಾಗುತ್ತಿದ್ದು, ಮಾಸಿಕ ಪಾಸುಗಳಲ್ಲಿ ಪ್ರಯಾಣಿಕರು ಅನಿಯಮಿತವಾಗಿ ಪ್ರಯಾಣಿಸಬಹುದಾಗಿರುತ್ತದೆ.
ಸೆಪ್ಟೆಂಬರ್-2021 ರ ಮಾಹೆಯ ಮಾಸಿಕ ಪಾಸುಗಳನ್ನು 28.08.2021 ರಿಂದ ವಿತರಣೆ ಮಾಡಲು ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಗೆ ಸುಲಭವಾಗಿ ಹಾಗೂ ತ್ವರಿತವಾಗಿ ಮಾಸಿಕ ಪಾಸುಗಳು ದೊರಕಲು ಅನುಕೂಲವಾಗುವಂತೆ ಸಂಸ್ಥೆಯ ಟಿಟಿಎಂಸಿ ಮತ್ತು ಬಸ್ ನಿಲ್ದಾಣಗಳಲ್ಲಿ ಮಾಸಿಕ ಪಾಸುಗಳನ್ನು ವಿತರಣೆ ಮಾಡಲಾಗುತ್ತಿದೆ. ಅಲ್ಲದೆ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬೆಂಗಳೂರಿನ ಖಾಸಗಿ ಏಜನ್ಸಿಗಳ ಮೂಲಕ ಮಾಸಿಕ ಪಾಸುಗಳು ವಿತರಿಸಲಾಗುತ್ತಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ, ಬಿ.ಎಂ.ಟಿ.ಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


0 Comments