ಬೆಂಗಳೂರು ಮೂಲದ ಇಬ್ಬರು ಮೋಟಾರ್‌ಸೈಕಲ್ ಉತ್ಸಾಹಿಗಳು ಬಿಎಂಡಬ್ಲ್ಯು 1200 ಜಿಎಸ್ ಸರಣಿಯ ಬೈಕ್‌ಗಳಲ್ಲಿ 100,000 ಕಿಲೋಮೀಟರ್‌ಗಳನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಭಾರತೀಯರಾಗಿದ್ದಾರೆ. ಮೋಹನ್ ಮಲ್ಲಪ್ಪ ಮೂರು ವರ್ಷಗಳಲ್ಲಿ ತಲುಪಿದರೆ, ಬಾಬುರವರು ಇನ್ನೂ ಎರಡು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಕುತೂಹಲವೇನೆಂದರೆ, ಇಬ್ಬರೂ ಸಹ ಆರ್‌ಆರ್‌ಎಂಸಿ (ರೈಡರ್ಸ್ ರಿಪಬ್ಲಿಕ್ ಮೋಟಾರ್‌ಸೈಕಲ್ ಕ್ಲಬ್) ನ ಸದಸ್ಯರಾಗಿದ್ದಾರೆ, ಇದು ದೇಶದ ಅತಿದೊಡ್ಡ ಸಾಮಾಜಿಕ ಕಳಕಳಿ ಹೊಂದಿರುವ ಉನ್ನತ ಮೋಟಾರ್‌ಸೈಕಲ್ ಕ್ಲಬ್ ಆಗಿದೆ.
ಆಗಸ್ಟ್ 15 ರಂದು, ಇಬ್ಬರೂ ಸವಾರರ ಸಾಧನೆಯನ್ನು ಗುರುತಿಸಿ ಆರ್‌ಆರ್‌ಎಂಸಿ ಮಾರತಹಳ್ಳಿಯ ಟಾರ್ಕ್ 03 ಈಝೋನ್ ನಲ್ಲಿ ಸನ್ಮಾನಿಸಲಾಯಿತು. ಮೋಹನ್ ಮತ್ತು ಬಾಬು ಅವರು ಯುಎಸ್ ಮೂಲದ ಮೋಟಾರ್ ಸೈಕ್ಲಿಂಗ್ ಸಂಸ್ಥೆ, ಐರನ್ ಬಟ್ ಅಸೋಸಿಯೇಷನ್ (ಐಬಿಏ) ನಿಂದ ಹಲವಾರು ಮೋಟಾರ್ ಸೈಕಲ್ ನ ಸವಾಲುಗಳನ್ನು ಎದುರಿಸಿ ಅವರು ದೇಶದ ಮೂಲೆ ಮೂಲೆಗಳಲ್ಲಿ ಸವಾರಿ ಮಾಡಿದ್ದಾರೆ.
ಮೋಟಾರ್ ಸೈಕಲ್ ಸವಾರಿ ಮನೋಭಾವವನ್ನು ಉತ್ತೇಜಿಸುವುದರ ಜೊತೆಗೆ, ಮೋಹನ್ ಮಲ್ಲಪ್ಪ ಮತ್ತು ಬಾಬುರವರು ಗ್ರಾಮೀಣ ಕ್ಷೇತ್ರದ ಅನೇಕ ಸಾಮಾಜಿಕ ಸೇವೆಗಳನ್ನು ಬೆಂಬಲಿಸಲು ಮೋಟಾರ್ ಸೈಕಲ್ ಯಾತ್ರೆಗಳನ್ನು ಕೈಗೊಂಡಿದ್ದಾರೆ. ಶಿಕ್ಷಣ, ಯುವ ಸಬಲೀಕರಣ, ಉದ್ಯೋಗ ಮತ್ತು ಹಿಂದುಳಿದ ವರ್ಗಗಳಿಗೆ ವಿವಿಧ ಸಂಸ್ಥೆಗಳಿAದ ಕೊಡುಗೆಗಳನ್ನು ಹೆಚ್ಚಿಸುವುದು ಮೂಲ ಉದ್ದೇಶವಾಗಿದೆ.
2020 ರಲ್ಲಿ, ಆರ್‌ಆರ್‌ಎಂಸಿ ಬೆಂಗಳೂರು ಪೊಲೀಸರೊಂದಿಗೆ ಪಾಲುದಾರಿಕೆಯೊಂದಿಗೆ ಕೋವಿಡ್ -19 ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಅಗತ್ಯವಿರುವ ಅರೋಗ್ಯ ಸೇವೆಗಳು, ಔಷಧೀಯ ವಸ್ತುಗಳ ಪೂರೈಕೆಗೆ ಕರ್ನಾಟಕದ ದೂರದ ಮೂಲೆಗಳಲ್ಲಾದ ಲಾಕ್‌ಡೌನ್ ನಲ್ಲಿ ಸಹ ಮೋಹನ್ ಮಲ್ಲಪ್ಪ ಮತ್ತು ಬಾಬು ಕಾರ್ಯತತ್ಪರರಾಗಿ ಮುಂಚೂಣಿಯಲ್ಲಿದ್ದರು. ಕೇರಳದ ಗಡಿ ಮತ್ತು ಕರ್ನಾಟಕದ ಇತರ ಭಾಗಗಳಲ್ಲಿ ಜೀವರಕ್ಷಕ ಔಷಧಿಗಳನ್ನು ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೋಟಾರ್ ಸೈಕ್ಲಿಂಗ್ ಮೇಲಿನ ಅವರ ಪ್ರೀತಿಯ ಬಗ್ಗೆ ಮಾತನಾಡುತ್ತಾ, ಮೋಹನ್ ಮಲ್ಲಪ್ಪರವರು, "ಸವಾರಿ ಮಾಡುವುದು ಒಂದು ಉತ್ಸಾಹದ ಕ್ರೀಡೆಯಾಗಿದ್ದು ಅದನ್ನು ಅನ್ವೇಷಿಸಲು, ಸೇವೆ ಮಾಡಲು ಮತ್ತು ಅದೇ ಸಮಯದಲ್ಲಿ ನಮ್ಮ ಯುವಜನರಲ್ಲಿ ವಿವಿಧ ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಮೋಟಾರ್ ಸೈಕ್ಲಿಂಗ್ ಯುವಕರಿಗೆ ಉತ್ತಮ ಹವ್ಯಾಸವಾಗಬಹುದು ಹಾಗೂ ಒಂದು ಕಾರಣಕ್ಕಾಗಿ ಸವಾರಿ ಮಾಡಬಹುದು, ಎಂಬುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಮೋಹನ್ ಮಲ್ಲಪ್ಪ 2019 ರಲ್ಲಿ 100,000 ಕಿಮೀ ಮೈಲಿಗಲ್ಲು ತಲುಪಿದ್ದರು ಮತ್ತು ಇತ್ತೀಚೆಗೆ 150,000 ಕಿಮೀ ಗಡಿ ದಾಟಿದ್ದಾರೆ.
ಈ ಸಂದರ್ಭದಲ್ಲಿ ಬಾಬುರವರು ಸಹ ತಮ್ಮ ಅಭಿಪ್ರಾಯ ಹಂಚಿಕೊAಡರು, ಕಳೆದ ವಾರ 100,000 ಕಿಮೀಗಳನ್ನು ಪೂರೈಸಿದರು, "ನಾವು ವಿವಿಧ ದತ್ತಿ-ನೇತೃತ್ವದ ಸಾಮಾಜಿಕ ಸೇವೆಗಳಿಗಾಗಿ ಒಟ್ಟಿಗೆ ಸವಾರಿ ಮಾಡಿದ್ದೇವೆ. ದಾಖಲೆಗಳ ನಂಬಿಕೆ ಇಲ್ಲ ಆದರೆ ನಾವು ಸಮುದಾಯಕ್ಕೆ ಪ್ರಯೋಜನವಾಗುವ ಸವಾರಿಗಳನ್ನು ಆರಂಭಿಸಿದಾಗ ಸಹಜವಾಗಿಯೇ ದೀರ್ಘ ಸ್ವರೂಪದ ಮೈಲಿಗಲ್ಲುಗಳನ್ನು ದಾಟುತ್ತೇವೆ, ಕಳೆದ ಕೆಲವು ವರ್ಷಗಳಲ್ಲಿ, ಬೈಕಿಂಗ್ ಸಮಾಜದ ಅವಿಭಾಜ್ಯ ಅಂಗವಾಗಿದೆ, ಏಕೆಂದರೆ ಹೆಚ್ಚು ಹೆಚ್ಚು ಭಾವೋದ್ರಿಕ್ತ ಸವಾರರು ವಿವಿಧ ಸಾಮಾಜಿಕ ಜವಾಬ್ದಾರಿ ಕಾರಣಗಳಿಗಾಗಿ ಭಾಗವಹಿಸುತ್ತಿದ್ದೇವೆ" ಎಂದರು. ಇದನ್ನು ಹೊರತುಪಡಿಸಿ ದ್ವಿಚಕ್ರ ವಾಹನಗಳಲ್ಲಿ ದೇಶದ ಮೂಲೆಗಳನ್ನು ಅನ್ವೇಷಿಸುತ್ತಿದ್ದಾರೆ. ಮೋಹನ್ ಮತ್ತು ಬಾಬು ಅವರಿಂದ ಪ್ರೇರಿತರಾಗಿ ಅನೇಕ ಇತರ ಸವಾರರು ಈಗ ಇದೇ ರೀತಿಯ ರಸ್ತೆ ಪ್ರಯಾಣವನ್ನು ಆರಂಭಿಸಿದ್ದಾರೆ.
ಆರ್‌ಆರ್‌ಎAಸಿ ಬಗ್ಗೆ:
ಬೆಂಗಳೂರು ಮೂಲದ ಆರ್‌ಆರ್‌ಎಂಸಿ (ರೈಡರ್ಸ್ ರಿಪಬ್ಲಿಕ್ ಮೋಟಾರ್‌ಸೈಕಲ್ ಕ್ಲಬ್) ನೋಂದಾಯಿತ ಮೋಟಾರ್‌ಸೈಕಲ್ ಕ್ಲಬ್ ಆಗಿದೆ. ಭಾರತದ ಅತಿದೊಡ್ಡ ಸಾಮಾಜಿಕ ಜವಬ್ದಾರಿಯುತ ಮೋಟಾರ್‌ಸೈಕಲ್ ಕ್ಲಬ್, ಆರ್‌ಆರ್‌ಎಂಸಿ, ಮೋಟಾರ್‌ಸೈಕಲ್ ಸವಾರಿ ಮನೋಭಾವವನ್ನು ಉತ್ತೇಜಿಸುವುದರ ಜೊತೆಗೆ, ಗ್ರಾಮೀಣ ಶಿಕ್ಷಣ, ಯುವ ಸಬಲೀಕರಣ, ಉದ್ಯೋಗ ಮತ್ತು ಸಮುದಾಯದ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಕೊಡುಗೆಗಳನ್ನು ಹೆಚ್ಚಿಸುವಲ್ಲಿ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಹಾಗೂ ಈ ಸಂಸ್ಥೆಯ ಅನೇಕ ಸದಸ್ಯರು ಮೋಟಾರ್‌ಸೈಕಲ್ ಸವಾರರು ಅವರು ಅನೇಕ ರೀತಿಯ ಬೈಕ್ ಸವಾರಿಗಳಲ್ಲಿ ದಾಖಲೆಗಳನ್ನು ಹೊಂದಿರುವುದು ನಮ್ಮ ದೇಶದ ಹೆಮ್ಮೆಯ ವಿಷಯವಾಗಿದೆ.
ಹೆಚ್ಚಿನ ಮಾಹಿತಿಗಾಗಿ: ಅಶೋಕ್ 9620078500

0 Comments