ಬೆಂಗಳೂರು, ಆಗಸ್ಟ್ 15 (ಕರ್ನಾಟಕ ವಾರ್ತೆ) : ಜನಪರ, ಜನೋಪಯೋಗಿ ಯೋಜನೆಗಳನ್ನು ರೂಪಿಸಲು ಸಂಕಲ್ಪ ಮಾಡಿದ್ದು, ಅವುಗಳನ್ನು ನನ್ನ ಆಡಳಿತದ ಅವಧಿಯಲ್ಲಿ ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ತಿಳಿಸಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ವಿಧಾನ ಮಂಡಲದ ಉಭಯ ಸದನಗಳು ರ‍್ಪಡಿಸಿದ್ದ “ಸ್ವಾತಂತ್ರ‍್ಯ ಅಮೃತ ಮಹೋತ್ಸವ” ಆಚರಣೆ ಕರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ನನ್ನ ಆಡಳಿತ ಜನರಿಗಾಗಿ, ಜನರ ಕಲ್ಯಾಣಕ್ಕಾಗಿ ಇರುತ್ತದೆ. ದಕ್ಷ ಹಾಗೂ ಪಾರರ‍್ಶಕ ಆಡಳಿತ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಅಹಿಂಸೆ ಮತ್ತು ದುಡಿಯುವ ರ‍್ಗದವರ ಸತತ ಹೋರಾಟದಿಂದ ನಮಗೆ ಸ್ವಾತಂತ್ರ‍್ಯ ಲಭಿಸಿದೆ ಎಂದು ಮಾತನಾಡಿದ ಮುಖ್ಯಮಂತ್ರಿಗಳು ವ್ಯಕ್ತಿಗೆ 75 ರ‍್ಷ ವಯಸ್ಸು ಎಂದರೆ ವೃದ್ದಾಪ್ಯದೆಡೆಗೆ ಎಂಬ ರ‍್ಥ. ಆದರೆ, ದೇಶಕ್ಕೆ ಚಿರಯೌವ್ವನದ ಉತ್ಸಾಹ. ಇಂತಹ ಸಂರ‍್ಭದಲ್ಲಿ ನಾವು ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟ ಎಲ್ಲಾ ಮಹನೀಯರನ್ನು ಗೌರವಿಸುವ ಮೂಲಕ ಅವರು ಹಾಕಿಕೊಟ್ಟಿರುವ ದಾರಿಯಲ್ಲಿ ದೇಶದ ಪ್ರಗತಿಗಾಗಿ ಕೆಲಸ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಅವರು ಮಾತನಾಡಿದರು.
“ಸ್ವಂತಕ್ಕೆ ಸ್ವಲ್ಪ, ದೇಶಕ್ಕೆ ರ‍್ವಸ್ವ” ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಇಡೀ ಬದುಕನ್ನೇ ದೇಶಕ್ಕಾಗಿ ಸರ‍್ಪಿಸಿದ ಸ್ವಾತಂತ್ರ‍್ಯ ಹೋರಾಟಗಾರರ ದೇಶಭಕ್ತಿ ಹಾಗೂ ದೇಶದ ಯಶೋಗಾಥೆಯನ್ನು ನಮ್ಮ ಯುವಪೀಳಿಗೆ ಅರಿಯಬೇಕು ಎಂದು ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿಮ ಅವರು ದೇಶದ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಸ್ವಾತಂತ್ರ‍್ಯ ವೀರರ ಋಣ ನಮ್ಮ ಮೇಲಿದ್ದು, ಅವರೆಲ್ಲರ ಸ್ಮರಣೆ ಜೊತೆಗೆ ದೇಶದ ಪ್ರಗತಿಗೆ ನಾವೆಲ್ಲಾ ಒಟ್ಟಾಗಿ ಶ್ರಮಿಸೋಣ ಎಂದು ತಿಳಿಸಿದರು.
ನೈತಿಕತೆ, ತತ್ವ ಸಿದ್ಧಾಂತಗಳು ಮತ್ತು ಮಾನವೀಯ ಮೌಲ್ಯಗಳು ಮರೆಯಾಗುತ್ತಿರುವ ಈ ಸಂರ‍್ಭದಲ್ಲಿ ಮುಂದಿನ ಪೀಳಿಗೆಯಲ್ಲಿ ಸಾಮಾಜಿಕ ಮೌಲ್ಯಗಳನ್ನು ಬಿತ್ತುವ ಮೂಲಕ ಭಾರತೀಯ ಪ್ರಜಾಪ್ರಭುತ್ವವನ್ನು ಇನ್ನಷ್ಟು ಗಟ್ಟಿಗೊಳಿಸೋಣ ಎಂದು ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ತಿಳಿಸಿದರು.
ಎಲ್ಲಿಯವರೆಗೆ ದೇಶ ಮೊದಲು ಎಂದು ನಾವೆಲ್ಲರೂ ಸಂಕಲ್ಪ ಮಾಡುವುದಿಲ್ಲವೋ, ಅಲ್ಲಿಯವರೆಗೆ ದೇಶ ಎಲ್ಲಾ ರಂಗಗಳಲ್ಲೂ ಪ್ರಗತಿ ಹೊಂದುವುದು ಕಷ್ಟಸಾಧ್ಯವೆಂದು ಮಾತನಾಡಿದ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರು ರಾಷ್ಟ್ರ ನರ‍್ಮಾಣ ಕರ‍್ಯದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವ ಮೂಲಕ ಬಲಿಷ್ಠ ಭಾರತ ನರ‍್ಮಾಣ ಮಾಡೋಣ ಎಂದರು.
ಸ್ವಾತಂತ್ರ‍್ಯ ಹಾಗೆಯೇ ಬಳುವಳಿಯಾಗಿ ಬಂದುದ್ದಲ್ಲ. ತ್ಯಾಗ, ಬಲಿದಾನಗಳ ಮೂಲಕ ಬಂದಿದೆ. ಸ್ವಾತಂತ್ರ‍್ಯದ ಸದ್ಭಳಕೆಯಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ರ‍್ತವ್ಯ ಎಂದು ಮಾತನಾಡಿದ ವಿಧಾನ ಸಭೆಯ ಸಭಾಧ್ಯಕ್ಷರು ಸ್ವಾತಂತ್ರ‍್ಯ ಹೋರಾಟವೆಂದರೆ ಕೇವಲ ಬ್ರಿಟೀಷರ ವಿರುದ್ಧದ ಹೋರಾಟವಲ್ಲ. ನಮ್ಮ ದೇಶದ ಮೇಲೆ ದಾಳಿ ಮಾಡಿದ ಡಚ್ಚರು, ಫ್ರೆಂಚರು, ಗ್ರೀಕರು ಹಾಗೂ ಮೊಗಲರು ಸೇರಿದಂತೆ ಪರಕೀಯರ ದಾಳಿಯ ಸಂರ‍್ಭದಲ್ಲಿ ನಡೆದ ಸ್ವಾತಂತ್ರ‍್ಯ ಹೋರಾಟವನ್ನು ನಾವು ಇಂದು ಸ್ಮರಿಸಿಕೊಳ್ಳಲೇಬೇಕಾಗಿದೆ ಎಂದು ಮಾತನಾಡಿದರು.
ಜಗತ್ತಿನಲ್ಲಿ ನಾವು ಯಾರಿಗೂ ಕಡಿಮೆ ಇಲ್ಲ. ಎಲ್ಲಾ ರಂಗಗಳಲ್ಲೂ ನಾವು ಪ್ರಗತಿ ಹೊಂದಿದ್ದೇವೆ. ಮಹಾಮಾರಿ ಕರೋನ ನಿಯಂತ್ರಿಸಲು ಲಸಿಕೆಯನ್ನು ಕಂಡು ಹಿಡಿದಿರುವ ಹೆಗ್ಗಳಿಕೆ ಕೂಡಾ ನಮ್ಮ ದೇಶದ್ದು ಎಂದು ಮಾತನಾಡಿದ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರು ವಿಧಾನ ಮಂಡಲ ವತಿಯಿಂದ ವಿಧಾನ ಸೌಧದಲ್ಲಿ ಆಚರಿಸುತ್ತಿರುವ 75 ನೇ ಸ್ವಾತಂತ್ರ‍್ಯೋತ್ಸವ ಕಾರ‍್ಯಕ್ರಮದ ಸಮಾರಂಭವು ಇತಿಹಾಸದ ಪುಟದಲ್ಲಿ ದಾಖಲಾಗುತ್ತದೆ ಎಂದು ಇದೇ ಸಂರ‍್ಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ: ಬಿ.ವಿ. ವಸಂತಕುಮಾರ್ ಅವರು ದೇಶಕ್ಕೆ ಸ್ವಾತಂತ್ರ‍್ಯ ಬಂದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಇದೇ ಸಂದರ‍್ಭದಲ್ಲಿ ದೇಶಭಕ್ತಿ ಗೀತೆಗಳು, ಸ್ವಾತಂತ್ರ‍್ಯ ಕುರಿತ ಗೀಗೀ ಪದ ಹಾಗೂ ಸಾಂಸ್ಕೃತಿಕ ಕಾರ‍್ಯಕ್ರಮಗಳನ್ನು ಎರ‍್ಪಡಿಸಲಾಗಿತ್ತು.


0 Comments