ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಶೀ ಫಾರ್ ಸೊಸೈಟಿ ಯಿಂದ 75 ಮಾಜಿ ಸೈನಿಕರ ಕುಟುಂಬಗಳ ಮಹಿಳೆಯರಿಗೆ ಸನ್ಮಾನ:
ದೇಶ ಪ್ರೇಮ ಪ್ರತಿಬಿಂಬಿಸುವ ಬೈಕ್ ಜಾಥ, ವೇದಿಕೆ ಮೇಲೆ ಗಮನ ಸೆಳೆದ ಬೈಕ್ ಪ್ಯಾಷನ್ ಶೋ
ಬೆಂಗಳೂರು, ಆ 15; 75ನೇ ಸ್ವಾತಂತ್ರ‍್ಯೋತ್ಸವದ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಮಹಿಳಾ ಬೈಕ್ ರೈಡರ‍್ಸ್ ಗಳನ್ನು ಒಳಗೊಂಡಿರುವ ಶೀ ಫಾರ್ ಸೊಸೈಟಿ ಸಂಘಟನೆಯಿಂದ ಬೆಂಗಳೂರಿನ ಮನ್ಪೋ ಕನ್ವೆನ್ಷನ್ ಸೆಂಟರ್ ನಲ್ಲಿಂದು 75ಮಹಿಳೆಯರನ್ನೊಳಗೊಂಡ ವಿನೂತನ ಹಾಗೂ ವಿಶೇಷವಾದ ಮಹಿಳಾ ಬೈಕರ್ ಗಳ ಪ್ಯಾಷನ್ ಶೋ ಆಯೋಜಿಸಲಾಗಿತ್ತು. ಸ್ವಾತಂತ್ರ‍್ಯ ಭಾರತದಲ್ಲಿ ಮಹಿಳಾ ಸಬಲೀಕರಣವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಮಹಿಳಾ ಬೈಕರ್ ಗಳು ಸಾಂಪ್ರಾದಾಯಿಕ ಕಚ್ಚೆ ಸೀರೆ ಧರಿಸಿ 1೦೦ ಅಡಿ ವೇದಿಕೆ ಮೇಲೆ ಬೈಕ್ ರೈಡ್ ಮಾಡಿ ಗಮನ ಸೆಳೆದರು. ಶೀ ಫಾರ್ ಸೊಸೈಟಿ ಅಧ್ಯಕ್ಷೆ , ಹರ್ಷಿಣಿ ವೆಂಕಟೇಶ್ ನೇತೃತ್ವದಲ್ಲಿ ವೈವಿದ್ಯಮಯ ಕರ‍್ಯಕ್ರಮ ಆಯೋಜಿಸಲಾಗಿತ್ತು. ಕೋಲಾರ ಜಿಲ್ಲೆಯ 75 ಮಾಜಿ ಸೈನಿಕರ ಕುಟುಂಬದ ಹೆಣ್ಣು ಮಕ್ಕಳು 300 ಅಡಿ ಉದ್ದದ ತ್ರಿರ‍್ಣ ಧ್ವಜ ಹಿಡಿದು ವೇದಿಕೆಯ ಮೇಲೆ ಪಥ ಸಂಚಲನ ಮಾಡಿದರು. ಈ ಕುಟುಂಬಗಳಿಗೆ ಶೀ ಫಾರ್ ಸೊಸೈಟಿಯಿಂದ ಸೋಲಾರ್ ದೀಪಗಳನ್ನು ವಿತರಿಸಿ ಸನ್ಮಾನಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ಮೈಸೂರು ಸಾಬೂನು ಕರ‍್ಖಾನೆ ಬಳಿ ಮಹಿಳಾ ಬೈಕರ‍್ಸ್ ಗಳ ಬೈಕ್ ರ‍್ಯಾಲಿಗೆ ಕೆ.ಎಸ್.ಡಿ.ಎಲ್ ನ ವ್ಯವಸ್ಥಾಪಕ ನರ‍್ದೇಶಕರಾದ ಮಹೇಶ್ ಹಾಗೂ ಬಿ. ಶಿರೂರ್ ಅವರು ಹಸಿರು ನಿಶಾನೆ ತೋರಿದರು. ಅಲ್ಲಿಂದ ವಿವಿಧ ಭಾಗಗಳಲ್ಲಿ ಸಂಚರಿಸಿದ ಬೈಕ್ ಜಾಥ ಬಳಿಕ ಮಾನ್ಯತಾ ಟೆಕ್ ಪರ‍್ಕ್‌ನ ಮನ್ಪೋ ಕನ್ವೆನ್ಷನ್ ಸೆಂಟರ್ ಬಳಿ ಕೊನೆಗೊಂಡಿತು. ಜಾಥದಲ್ಲಿ ಯುವತಿಯರಿಂದ ವಿವಿಧ ವಯೋಮಾನದವರು ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಇವೆಲ್ಲರೂ ದೇಶೀಯ ಸಾಂಸ್ಕೃತಿಕ ಸೊಗಡನ್ನು ಪ್ರತಿಬಿಂಬಿಸುವ ಉಡುಗೆ ತೊಟ್ಟಿದ್ದರು. ಆರ‍್ಷಕ ಸದ್ದಿನೊಂದಿಗೆ ವೇದಿಕೆಯಲ್ಲಿ ಸಾಹಸಮಯವಾಗಿ ಬೈಕ್ ರೈಡ್ ಮಾಡಿ ತಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ನಿರೂಪಿಸಿದರು.
ಶೀ ಫಾರ್ ಸೊಸೈಟಿ ಅಧ್ಯಕ್ಷೆ ,ಹರ್ಷಿಣಿ ವೆಂಕಟೇಶ್ ಮಾತನಾಡಿ, ಮಹಿಳಾ ಸಮಾನತೆ ಸಾರುವ ಉದ್ದೇಶದಿಂದ ಈ ರ‍್ಯಾಲಿ ಆಯೋಜಿಸಲಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಹೆಗ್ಗುರುತುಗಳನ್ನು ಮೂಡಿಸುತ್ತಿದ್ದು, ಈ ಪ್ರಮಾಣ ಹೆಚ್ಚಾಗಬೇಕು. ಈ ಮೂಲಕ ಸ್ವಾತಂತ್ರ‍್ಯ ದಿನಾಚರಣೆಯನ್ನು ಸಾಂಪ್ರಾದಾಯಿಕ ಕಚ್ಚೆ ಸೀರೆ ಧರಿಸಿ ಎಂಬುದು ತಮ್ಮ ಉದ್ದೇಶವಾಗಿದೆ ಎಂದರು. ಮಹಿಳೆಯರ ಬಳಿ ಅಂತಿಂತ ಬೈಕ್ ಗಳಿಲ್ಲ. ಬಿ.ಎಂ.ಡಬ್ಲ್ಯೂ, ಹಾರ‍್ಲಿ ಡೇವಿಡ್ ಸನ್, ಲಾಡ್ಸ್ ಆಪ್ ರಾಯಲ್ ಎನ್ ಫೀಲ್ಡ್, ಅವೆಂಜರ‍್ಸ್ ಮತ್ತಿತರ ಸೂಪರ್ ಬೈಕ್ ಗಳನ್ನು ಇವರು ಹೊಂದಿದ್ದಾರೆ. ಶೀ ಫಾರ್ ಸೊಸೈಟಿ ಯ ಖಜಾಂಚಿ ವಿದ್ಯಾ, ಶಾಲಿನಿ, ಪದಾಧಿಕಾರಿಗಳಾದ ಕವಿತಾ, ಆರತಿ, ಕಸ್ತೂರಿ ಸೇರಿ ೭೫ ಮಂದಿ ಸದಸ್ಯರು ರ‍್ಯಾಲಿಯಲ್ಲಿ ಭಾಗವಹಿಸಿದ್ದರು.
VARTHAJALA SUDDIMANE, MALLESWARA, BENGALURU 03.
080-23319247, OOLIGA COMPLEX, SAMPIGE ROAD.





0 Comments