ಎದೆಹಾಲು ನೀಡುವುದರ ಅವಶ್ಯಕತೆಯ ಕುರಿತಂತೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾರತ್ ಹಳ್ಳಿಯ ರೈನ್ ಬೋ ಮಕ್ಕಳ ಆಸ್ಪತ್ರೆಯು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸ್ಯಾಂಡಲ್‍ವುಡ್ ನಟಿ ಮಯೂರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಟಿ ಮಯೂರಿ,"ಕ್ಯಾಮರಾ ಮುಂದೆ ಹಲವು ಪಾತ್ರ ನಿಭಾಯಿಸಿದ್ದ ನನಗೆ, ನಿಜ ಜೀವನದಲ್ಲಿ ತಾಯಿಯಾದಾಗ ಆ ಪಾತ್ರ ಅದೆಷ್ಟು ಜವಾಬ್ದಾರಿಯುತ ಎಂಬುದು ಅರ್ಥವಾಯಿತು. ಆ ಬದಲಾವಣೆಯನ್ನ ಅತೀವ ಸಂಭ್ರಮದಿಂದ ಸ್ವೀಕರಿಸಿದ್ದೇನೆ. ಮಗುವನ್ನ ನೋಡಿಕೊಳ್ಳುವುದು ನಿಜಕ್ಕೂ ಬಹು ದೊಡ್ಡ ಹೊಣೆ ಎಂಬುದು ನನಗೆ ಮನವರಿಕೆಯಾಗಿದೆ. ನಾನು ಈ ಜವಾಬ್ದಾರಿಯನ್ನ ಸಮರ್ಥವಾಗಿ ನಿಬಾಯಿಸುತ್ತಿದ್ದೇನೆ ಎಂದರೆ ಇದರಲ್ಲಿ ನನ್ನ ಪತಿ ಮತ್ತು ಕುಟುಂಬದವರ ಬೆಂಬಲದಿಂದಲೇ", ಎಂದು ಹೇಳಿದರು.
ಮಾರತ್ ಹಳ್ಳಿ ರೈನ್ ಬೋ ಮಕ್ಕಳ ಆಸ್ಪತ್ರೆಯ ಶಿಶುಗಳ ತೀವ್ರನಿಗಾಘಟಕದ ಮುಖ್ಯಸ್ಥ ಡಾ. ರಕ್ಷಯ್ ಶೆಟ್ಟಿ ಮಾತನಾಡಿ,"ಶಿಶುಗಳ ಬೆಳವಣಿಗೆಗೆ ಪೌಷ್ಠಿಕಾಂಶಗಳು ತುಂಬಾ ಅವಶ್ಯಕ. ಇವು ತಾಯಿಯ ಎದೆಹಾಲಿನಿಂದಲೇ ಸಿಗುವುದು. ಈ ಕಾರಣಕ್ಕೆ ತಾಯಿಂದಿರು ಮಕ್ಕಳಿಗೆ ಎದೆಹಾಲು ನೀಡುವುದರಲ್ಲಿ ನಿರ್ಲಕ್ಷ್ಯ ಮಾಡಕೂಡದು. ಮಕ್ಕಳಲ್ಲಿ ಹೆಚ್ಚಿನ ರೋಗನಿರೋಧಕ ಶಕ್ತಿ ಬೆಳವಣಿಗೆಯಾಗಲು ತಾಯಿ ಎದೆಹಾಲು ನೀಡುವುದು ಅತೀ ಮುಖ್ಯ" ಎಂದು ತಿಳಿಸಿದರು.
ರೈನ್ ಬೋ ಮಕ್ಕಳ ಆಸ್ಪತ್ರೆಯ ಯುನಿಟ್ ಮುಖ್ಯಸ್ಥ ಅಕ್ಷಯ್ ಮಾತನಾಡಿ,"ರೈನ್ ಬೋ ಮಕ್ಕಳ ಆಸ್ಪತ್ರೆಯು ಆರೋಗ್ಯದ ಕಾಳಜಿ ಕುರಿತಂತೆ ನಿರಂತರವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಈ ಕಾರ್ಯವು ಅತೀ ಮುಖ್ಯವಾದದ್ದು ಎಂದು ನಾವು ನಂಬಿದ್ದು, ಸಮಾಜದಲ್ಲಿ ಈ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತದೆ," ಎಂದರು.





0 Comments