ಹುಳಿಮಾವು ಪೊಲೀಸ್ ಠಾಣೆ ಸರಹದ್ದಿನ ಹುಳಿಮಾವು, ಕಮ್ಮನಹಳ್ಳಿ ಗೊಟ್ಟಿಗೆರೆ ಮುಖ್ಯರಸ್ತೆ, ಬಾಬ್‌ಜೀ ಲೇಕ್ ವ್ಯೂ ಅಪಾರ್ಟ್ಮೆಂಟ್ ಮುಂಭಾಗದ ರಸ್ತೆಯಲ್ಲಿ ಏಂ-53 ಒಉ-5859 ವಾಹನದಲ್ಲಿ ರಕ್ತ ಚಂದನ ಮರದ ತುಂಡುಗಳನ್ನು ತುಂಬಿಕೊAಡು ಮಾರಾಟ ಮಾಡಲು ಗಿರಾಕಿಗಳಾಗಿ ಕಾಯುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ, ರಕ್ತ ಚಂದನ ತುಂಡು ಹಾಗೂ ಕಾರ್‌ನ್ನು ವಶಕ್ಕೆ ಪಡೆದುಕೊಂಡು ಮಾರಾಟ ಮಾಡಲು ಯತ್ನಿಸುತ್ತಿದ್ದ ಈ ಕೆಳಕಂಡ ಆರೋಪಿಗಳಾದ ಆನಂದ್ ಕುಮಾರ್ 51 ವರ್ಷ, ಅನೀಲ್ ಸಿಂಘಿ 47 ವರ್ಷ, ಎಂಬುವರನ್ನು ವಶಕ್ಕೆ ಪಡೆದಿರುತ್ತಾರೆ.
ಆರೋಪಿಗಳು ಕರ್ನಾಟಕ ಸೇರಿದಂತೆ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಿಂದ ರಕ್ತಚಂದನ ಮರಗಳನ್ನು ಕಳ್ಳ ಸಾಗಾಣಿಕೆ ಮಾಡಿಕೊಂಡು ಬಂದು ವಿದೇಶಗಳಿಗೆ ಸರಬರಾಜು ಮಾಡಲು ಬೆಂಗಳೂರು ನಗರ, ಬನ್ನೇರುಘಟ್ಟ ರಸ್ತೆ, ಹೊಮ್ಮದೇವನಹಳ್ಳಿ ಮುಖ್ಯ ರಸ್ತೆ ಗೋಡೊನ್‌ನಲ್ಲಿ ದಾಸ್ತಾನು ಮಾಡಿದ್ದು, ಈ ದಿನ ಸ್ಯಾಂಪಲ್ ರಕ್ತ ಚಂದನ ಮರದ ಒಂದು ತುಂಡನ್ನು ಗಿರಾಕಿಗಳಿಗೆ ತೋರಿಸಲು ತಂದಿದ್ದಾಗಿ ತಿಳಿಸಿದ ಮೇರೆಗೆ ಆರೋಪಿಗಳೊಂದಿಗೆ ಬನ್ನೇರುಘಟ್ಟ ರಸ್ತೆ, ಹೊಮ್ಮದೇವನಹಳ್ಳಿ ಮುಖ್ಯ ರಸ್ತೆ ಗೋಡೊನ್‌ನ ಮೇಲೆ ದಾಳಿ ಮಾಡಲಾಗಿ ಆರೋಪಿಗಳು ಸದರಿ ಗೋಡೊನ್‌ನಲ್ಲಿ ಹಾಗೂ ಖಿಓ-23 ಂ-6055 ಆಶೊಕ ಲೈಲ್ಯಾಂಡ್ ಲಾರಿಯಲ್ಲಿ ದಾಸ್ತಾನು ಮಾಡಿದ್ದ 4.5 ಕೋಟಿ ರೂಪಾಯಿ ಬೆಲೆ ಬಾಳುವ ಒಟ್ಟು 9135 ಕೆ.ಜಿ ತೂಕದ ರಕ್ತ ಚಂದನ ಮರಗಳ ತುಂಡುಗಳು, ಒಂದು ಪೊರ್ಡ್ ಎಂಡೊವರ್ ಕಾರ್ ನಂ ಏಂ-53 ಒಉ-5859 ಹಾಗೂ ಖಿಓ-23 ಂ-6055 ಆಶೊಕ ಲೈಲ್ಯಾಂಡ್ ಲಾರಿಯನ್ನು ವಶಪಡಿಸಿಕೊಂಡಿರುತ್ತದೆ.
ಆರೋಪಿಗಳ ವಿರುದ್ಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ತನಿಖೆ ಮುಂದುವರೆದಿರುತ್ತದೆ.
ಕಾರ್ಯಾಚರಣೆಯನ್ನು ಬೆಂಗಳೂರು ನಗರ ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಅಪರಾಧ ರವರಾದ, ಸಂದೀಪ್ ಪಾಟೀಲ್, ಐ.ಪಿ.ಎಸ್. ಮತ್ತು ಉಪ ಪೊಲೀಸ್ ಆಯುಕ್ತರು, ಅಪರಾಧ ರವರಾದ, ಬಿ.ಎಸ್.ಅಂಗಡಿ, ಕೆ.ಎಸ್.ಪಿ.ಎಸ್, ರವರ ಮಾರ್ಗದರ್ಶನದಲ್ಲಿ, ಸಿಸಿಬಿ, ಸಂಘಟಿತ ಅಪರಾಧ ದಳ (ಪೂರ್ವ) ವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಹೆಚ್.ಎಸ್.ಪರಮೇಶ್ವರ್ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿಗಳು ಕೈಗೊಂಡಿರುತ್ತಾರೆ.






0 Comments