Karnataka's Sr. Journalist Venkatasubbu Mokshagundam meet World Famous Indian Cancer Specialist, Padmashri Awardee Winner Dr. K.S. Gopinath
ಈ ವಿಶೇಷ ಸಂದರ್ಭದಲ್ಲಿ ಮೋಕ್ಷಗುಂಡಂ ಅವರು ವಾರ್ತಾಜಾಲ ಮಾಧ್ಯಮ ಸಂಸ್ಥೆಯ ಕ್ರಿಯಾಶೀಲ, ಆಧುನಿಕ ತಂತ್ರಜ್ಞಾನದ ಜನಪರ ಸೇವೆಯ ವಿವರಗಳನ್ನು ನೀಡಿರುತ್ತಾರೆ. ವಾರ್ತಾಜಾಲ ಸಂಸ್ಥೆಯ ಪ್ರಧಾನರಾದ ಬಿ.ಕೆ. ಪ್ರಸನ್ನ ಅವರು ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಪತ್ರಿಕೆಯ ಮೂಲಕ ಹಮ್ಮಿಕೊಂಡಿರುವ ಬಹುಮುಖ ಕಾರ್ಯಕ್ರಮಗಳ ಜನಪರ ಕಾಳಜಿಯ ಪೂರ್ಣ ಮಾಹಿತಿಗಳನ್ನು ಡಾ. ಗೋಪಿನಾಥ್ ಅವರಿಗೆ ತಿಳಿಸಲಾಗಿರುತ್ತದೆ. ನಾಡಿನ ಇಂತಹ ಹೆಮ್ಮೆಯ ಪುತ್ರನನ್ನು, ಅವರು ಕರ್ನಾಟಕಕ್ಕೆ ಮಾತ್ರವಲ್ಲದೇ ಇಡೀ ರಾಷ್ಟ್ರಕ್ಕೆ ಸಲ್ಲಿಸಿರುವ ಅಮೋಘ ಸೇವೆಯನ್ನು ಆದಷ್ಟು ಶೀಘ್ರವೇ www.varthajala.live ನಲ್ಲಿ ಪ್ರಸಾರ ಮಾಡಲು ಆಶಿಸಿರುತ್ತೇವೆ.
ಇದು ಕೇವಲ ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಸೀಮಿತವಾದ ಕಾರ್ಯವ್ಯಾಪ್ತಿ ಆಗಿರುವುದಿಲ್ಲ. ಅವರ ಸಂದರ್ಶನ, ಜನತೆಯ ಸೇವೆಯ ಎಲ್ಲಾ ಪೂರ್ಣವಾದ ಮಾಹಿತಿಯನ್ನು ಅಸಂಖ್ಯ ವೀಕ್ಷಕರಿಗೆ ನೀಡಬಯಸುವುದು ನಮ್ಮ ಆಶಯವಾಗಿರುತ್ತದೆ. ಪ್ರೇಕ್ಷಕರ ಸಮ್ಮುಖದಲ್ಲಿ ನಾವೆಲ್ಲರೂ ಶೀಘ್ರವಾಗಿಯೇ ನೇರಪ್ರಸಾರದಲ್ಲಿ ಬರುತ್ತಿದ್ದೇವೆ ಎಂದು ಈ ಮೂಲಕ ತಿಳಿಯಬಯಸುತ್ತಿದ್ದೇವೆ.
ತಮ್ಮಗಳ ಸಲಹೆ ಸೂಚನೆಗಳನ್ನು ಅತ್ಯಂತ ವಿನಯದಿಂದ ನಿರೀಕ್ಷಿಸುತ್ತಿದ್ದೇವೆ.
-ವೆಂಕಟಸುಬ್ಬು ಮೋಕ್ಷಗುಂಡ0, ಹಿರಿಯ ಪತ್ರಕರ್ತರು
080-23319247, 9448119247,
Email : editorvarthajala@gmail.com

0 Comments