ಬಳ್ಳಾರಿ ಆ 01. ಬಳ್ಳಾರಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ಉಮೇಶ್ ಕುಮಾರ್ ಅವರಿಗೆ ಎಪಿಎಂಸಿಯ ಗಾಂಧೀಜಿ ಹೋಲ್‌ಸೇಲ್ ತರಕಾರಿ ವರ್ತಕರಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು. ಅನಂತರ ಗಾಂಧೀಜಿ ಹೋಲ್‌ಸೇಲ್ ತರಕಾರಿ ವರ್ತಕರ ಸಂಘದ ಅದ್ಯಕ್ಷರು ಗೋವಿಂದರಾಜುಲು ಮಾತನಾಡುತ್ತಾ ನಮಗೆ ಬಹಳ ದಿನಗಳಿಂದ ಕೆಲ ಸಮಸ್ಯೆಗಳು ಇದ್ದು ಅವನ್ನು ಸರಿಪಡಿಸಲು ಕೋರಿದರು.
ಸಮಸ್ಯೆಗಳನ್ನು ಆಲಿಸಿದ ಅಧ್ಯಕ್ಷರು ನನಗೆ 8-10 ದಿನ ಕಾಲವಕಾಶವನ್ನು ಕೊಡಿ ನಿಮ್ಮ ಸಮಸ್ಯೆಗಳೇನೇ ಇದ್ದರೂ ಕೂಡಾ ಅವುಗಳನ್ನು ಇತ್ಯರ್ಥ ಪಡಿಸುತ್ತೇನೆ ಎಂದು ಭರವಸೆ ನಿಡಿದರು. ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ತರಕಾರಿ ಮಾರುಕಟ್ಟೆಗೆ ನನ್ನೊಂದಿಗೆ ಕಾರ್ಯಧರ್ಶಿ ಮೇರುನಂದನ್, ಸದಸ್ಯರಾದ ಕಾಂಡ್ರಬಾಬು, ಮಾರುಕಟ್ಟೆಯ ಹಿರಿಯ ಮೇಲ್ವಿಚಾರಕರು ವಿ.ಬಸವರಾಜ್ ಮತ್ತು ಕಛೇರಿಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ, ನಮಗೆ ಅಲ್ಲಿ ಕಂಡುಬAದಿದ್ದು ಹೊಟ್ಟೆಗೆ ತಿನ್ನುವ ತರಕಾರಿಯನ್ನು ರಸ್ತೆಯಲ್ಲಿ,ಕೆಸರಿನಲ್ಲಿ ಮಾರಾಟ ಮಾಡುತಿದ್ದಾರೆ ಎಂದು,ಸರಕಾರ ಚಿಲ್ಲರೆ ವ್ಯಾಪರಸ್ಥರಿಗೆ ಅನುಕೂಲವಾಗಲೆಂದು 2.3 ಕೋಟಿ ವೆಚ್ಚದಿಂದ ಭಾನುವಾರ ಸಂತೆ ಕಟ್ಟಡವನ್ನು ನಿರ್ಮಾಣ ಮಾಡಿ ಕೊಟ್ಟಿದೆ,
ಆದರೆ ವ್ಯಾಪಾರಸ್ಥರು ಅದನ್ನು ಉಪಯೋಗಿಸಿಕೊಳ್ಳದೇ ಬಿಸಿಲು-ಮಳೆಗೆ, ಧೂಳು,ದುಮ್ಮಿನಲ್ಲಿ ಕೂತು ವ್ಯಾಪಾರ ವಹಿವಾಟನ್ನು ಮಾಡಿಕೊಳ್ಳುತ್ತಿದ್ದಾರೆ. ಇದು ಒಳಿತಲ್ಲ ಎಂದು, ಇದರಿಂದ ಆರೋಗ್ಯದ ಮೇಲೆ ಪರಿಣಾಮಗಳು ಬೀರುತ್ತಾವೆ ಎಂದರು.
ಚಿಲ್ಲರೆ ವ್ಯಾಪಾರ ಮಾಡುವವರು ಹೊರಗಡೆ ಕೂಡಲು ಹೋಲ್‌ಸೇಲ್ ವರ್ತಕರೇ ಕಾರಣ ಎಂದರು. ಹೊರಗಡೆ ಚಿಲ್ಲರೆ ವ್ಯಾಪಾರ ಮಾಡುವವರೆಲ್ಲಾ ಭಾನುವಾರ ಸಂತೆಯ ಕಟ್ಟಡದಲ್ಲಿ ಕೂಡಲು ಅವರು ಸೂಚನೆ ನೀಡಿದರು.
ಹೋಲ್‌ಸೇಲ್ ವರ್ತಕರು ಮಾರ್ಕೆಟ್ ಫೀಯನ್ನು ಬಹಳ ಕಡಿಮೆ ಮಟ್ಟದಲ್ಲಿ ತುಂಬುವುದರಿ0ದ ಮೇಂಟೇನೆನ್ಸ್ಗೆ ಸಾಲುತ್ತಿಲ್ಲವೆಂದು, ಎಂ.ಎಫ್ ಅನ್ನು ಜಾಸ್ತಿ ಕಟ್ಟಬೇಕೆಂದು ತಿಳಿಸಿದರು. ಸದಸ್ಯ ಬಾಬು ಕಾಂಡ್ರ ಅವರು ಮಾತನಾಡುತ್ತಾ ನೀವು ನಮಗೆ ಸಹಕಾರ ನೀಡಿದರೇ ನಾವು ಕೂಡಾ ನಿಮ್ಮ ಸಮಸ್ಯೆಗಳನ್ನು ಇತ್ಯರ್ಥ ಮಾಡಲು ಸುಲಭವಾಗುತ್ತದೆ ಎಂದು ನುಡಿದರು. ಈ ಸಂದರ್ಭದಲ್ಲಿ ಮಾರುಕಟ್ಟೆಯ ಹಿರಿಯ ಮೇಲ್ವಿಚಾರಕರು ವಿ.ಬಸವರಾಜ್ ಮತ್ತು ಕಛೇರಿಯ ಸಿಬ್ಬಂದಿ, ವರ್ತಕರ ಸಂಘದ ಗೌರವಾಧ್ಯಕ್ಷ ದಿನೇಶ್,ಉಪಾಧ್ಯಕ್ಷ ಹನೀಫ್,ಕಾರ್ಯಧರ್ಶಿ ಪಂಪನಗೌಡ, ಖಜಾಂಚಿ ಮಹಮ್ಮದ್, ಶ್ರೀನಿವಾಸ್, ಆದಿನಾರಾಯಣ , ಮೋಹನ್, ನಾಗರಾಜ್, ರಮೇಶ್, ಸದಾನಂದ, ಶ್ರೀಧರ್, ದಸ್ತಗಿರಿ ಮತ್ತಿತರರು ಉಪಸ್ಥಿತರಿದ್ದರು.

0 Comments