Ticker

6/recent/ticker-posts

Ad Code

Responsive Advertisement

11 ವಾರಗಳ ಇಳಿಕೆಯ ನಂತರ ದೇಶದಲ್ಲಿ ಕೊರೋನಾ ಪ್ರಕರಣಗಳು ಶೇ.7.5 ಏರಿಕೆ

 ಭಾರತದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಮೇ ವಾರದಲ್ಲಿ ಅಂದರೆ ಕೋವಿಡ್‌ನ ಎರಡನೇ ಅಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಆ ನಂತರ ಕಳೆದ 11 ವಾರಗಳ ಹಿಂದೆ ಕೊಂಚ ಕಡಿಮೆಯಾಗಿತ್ತು. ಆದರೆ ಕಳೆದ 12 ವಾರಗಳಲ್ಲಿ ಮೊದಲ ಬಾರಿಗೆ ವಾರದಿಂದ ವಾರಕ್ಕೆ ಕೊರೊನಾ ವೈರಸ್‌ ಪ್ರಕರಣಗಳು ಏರಿಕೆಯನ್ನು ದಾಖಲಿಸಿವೆ.


 ಭಾನುವಾರ ಕೊನೆಗೊಂಡ ಪ್ರಸಕ್ತ ವಾರದಲ್ಲಿ (ಜುಲೈ 26-ಆಗಸ್ಟ್ 1) ಭಾರತವು 2.86 ಲಕ್ಷ ಹೊಸ ಕೋವಿಡ್‌ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ವಾರದ 2.66 ಲಕ್ಷಕ್ಕಿಂತ 7.5% ಏರಿಕೆಯಾಗಿದೆ. ಮೇ 3-9ರ ನಂತರ ಎರಡನೇ ಅಲೆಯ ಉತ್ತುಂಗಕ್ಕೇರಿದ ನಂತರ ದೇಶದಲ್ಲಿ ಕೋವಿಡ್‌ ಪ್ರಕರಣಗಳ ವಾರದ ಲೆಕ್ಕಾಚಾರದಲ್ಲಿ ಮೊದಲ ಬಾರಿಗೆ ಏರಿಕೆ ಕಂಡು ಬಂದಿದೆ. ಕೋವಿಡ್‌ ಪ್ರಕರಣಗಳ ಕುಸಿತವು ಶೇ.1.4% ಕ್ಕೆ ಇಳಿದಿದ್ದರೂ, ಕಳೆದ ವಾರದವರೆಗೂ ಮುಂದುವರೆಯಿತು.

ಭಾರತದಲ್ಲಿ ಪ್ರಸ್ತುತ  ಕೇಂದ್ರಬಿಂದುವಾಗಿರುವ ಕೇರಳ, ಪ್ರಸ್ತುತ ವಾರದಲ್ಲಿ 1.4 ಲಕ್ಷ ಕೋವಿಡ್‌ ಪ್ರಕರಣಗಳನ್ನು ದಾಖಲಿಸಿದೆ. ಇದು ಹಿಂದಿನ ವಾರದ 1.1 ಲಕ್ಷಕ್ಕಿಂತ 26.5% ಹೆಚ್ಚಳವಾಗಿದೆ. ಕಳೆದ ಏಳು ದಿನಗಳಲ್ಲಿ ದೇಶದ ಎಲ್ಲಾ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಕೇರಳ ರಾಜ್ಯವು ಅರ್ಧದಷ್ಟು (49%), ದೈನಂದಿನ ಸರಾಸರಿ 20,000 ಹೊಸ ಪ್ರಕರಣಗಳನ್ನು ಹೊಂದಿದೆ. ಕೇರಳದಲ್ಲಿ ಭಾನುವಾರ 20,728 ಪ್ರಕರಣಗಳು ದಾಖಲಾಗಿದೆ. ಇದು ಆರನೇ ದಿನವಾಗಿದ್ದು, ದೈನಂದಿನ ಎಣಿಕೆ 20,000 ಕ್ಕಿಂತ ಹೆಚ್ಚಾಗಿದೆ.

ಆತಂಕದ ಸಂಗತಿಯೆಂದರೆ, ಕೇರಳದ ಕೋವಿಡ್ ಉಲ್ಬಣವು ಅದರ ನೆರೆಯ ರಾಜ್ಯಗಳಿಗೆ ಪರಿಣಾಮ ಬೀರುವ ಲಕ್ಷಣಗಳು ಈಗಾಗಲೇ ಕಂಡು ಬಂದಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಕರ್ನಾಟಕವು ಹೊಸ ಪ್ರಕರಣಗಳಲ್ಲಿ 17.3% ಹೆಚ್ಚಳವನ್ನು ದಾಖಲಿಸಿದೆ. ಕರ್ನಾಟಕವು ಪ್ರಸಕ್ತ ವಾರದಲ್ಲಿ 12,442 ಪ್ರಕರಣಗಳನ್ನು ವರದಿ ಮಾಡಿದ್ದು, ಹಿಂದಿನ ಏಳು ದಿನಗಳಲ್ಲಿ 10,610 ಪ್ರಕರಣಗಳನ್ನು ದಾಖಲಿಸಿದೆ. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಕರ್ನಾಟಕ ಸರ್ಕಾರವು ಕೇರಳ ಹಾಗೂ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವುದನ್ನು ನಿರ್ಬಂಧಿಸಿದೆ. ಕೋವಿಡ್‌ ಆರ್‌ಟಿ-ಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದೆ.

ತಮಿಳುನಾಡಿನಲ್ಲಿ, ವಾರದ ಪ್ರಕರಣಗಳ ಎಣಿಕೆ ಹಿಂದಿನ ವಾರದಂತೆಯೇ ಇತ್ತು. ಹಿಂದಿನ ವಾರದಲ್ಲಿ 13,095 ಕ್ಕೆ ಹೋಲಿಸಿದರೆ 13,090 ಪ್ರಕರಣಗಳು ಈ ವಾರ ದಾಖಲಾಗಿದೆ. ಇದು ರಾಜ್ಯದಲ್ಲಿ ಒಂಬತ್ತು ವಾರಗಳವರೆಗೆ ಇದ್ದ ಪ್ರಕರಣಗಳ ಸಂಖ್ಯೆಯನ್ನು ಕುಸಿಯುವ ಪ್ರವೃತ್ತಿಯನ್ನು ಮುರಿವರಿಯುವ ಸೂಚನೆ ನೀಡಿದೆ. ಸತತ ನಾಲ್ಕು ದಿನಗಳವರೆಗೆ ತಮಿಳುನಾಡಿನಲ್ಲಿ ದೈನಂದಿನ ಪ್ರಕರಣಗಳ ಎಣಿಕೆ ಸ್ವಲ್ಪ ಹೆಚ್ಚಾಗಿದ್ದು, ಬುಧವಾರ 1,756 ರಿಂದ ಭಾನುವಾರ 1,990 ಕ್ಕೆ ಏರಿಕೆಯಾಗಿದೆ.

Post a Comment

0 Comments

Ad Code

Responsive Advertisement