Ticker

6/recent/ticker-posts

Ad Code

Responsive Advertisement

MADHUGIRI : ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು: ಅಧಿಕಾರಿಗಳಿಗೆ ತಾಕೀತು

ಮಧುಗಿರಿ ಕೂರೋನ ದಿಂದಾಗಿ ಸ್ಥಗಿತಗೊಂಡಿರುವ ಸರ್ಕಾರದ ವಿವಿಧ ಯೋಜನೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ತಾ‌.ಪಂ. ಆಡಳಿತಾಧಿಕಾರಿ ಡಾ.ಆರ್ ಶುಬ್ರ ನಾಯಕ ಅಧಿಕಾರಿಗಳಿಗೆ ತಾಕೀತು ಮಾಡಿದರು.        

 ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖಾವಾರು ಅಧಿಕಾರಿಗಳ ಸಹಕಾರದೊಂದಿಗೆ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ ಎಂದರು. 

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀನರಸಯ್ಯ ಮಾತನಾಡಿ ಮಧುಗಿರಿ ಉಪವಿಭಾಗದಲ್ಲಿ ರೇಷ್ಮೆ ಕೃಷಿಗೆ ಪೂರಕ ವಾತಾವರಣವಿದ್ದು ರೇಷ್ಮೆ ಬೆಳೆಯಲು ರೈತರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಯಪ್ಪ ಮಾತನಾಡಿ ತಾಲೂಕಿನಲ್ಲಿ ವಾಡಿಕೆ ಮಳೆ ಉತ್ತಮವಾಗಿದೆ 

ಈಗಲೇ ಬಿತ್ತನೆ ಬೀಜ ವಿತರಿಸಿದ್ದು ರಸಗೊಬ್ಬರ ದಾಸ್ತಾನಿದೆ 4 ಸಾವಿರ ರೈತರು ಬೆಳೆ ವಿಮೆಗೆ ನೋಂದಾಯಿಸಿದ್ದು, ಬೆಳೆ ವಿಮೆ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದೆ ಎಂದರು. ಪಂಚಾಯತ್ ರಾಜ್ ಇಲಾಖೆಯ ಎಇಇ ಸುರೇಶ್ ರೆಡ್ಡಿ ತಾಲೂಕಿನಲ್ಲಿ 18 ಅಂಬೇಡ್ಕರ್ ಭವನಗಳನ್ನು ಪೂರ್ಣಗೊಳಿಸಿದ್ದು 9 ಭವನಗಳಿಗೆ ನಿವೇಶನಗಳನ್ನು ಒದಗಿಸಿದರೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.  

ತಾ.ಪಂ. ಇಒ ದೊಡ್ಡ ಸಿದ್ದಯ್ಯ, ಎಡಿಒ ಮಧುಸೂದನ್, ಟಿಎಚ್ಒ ರಮೇಶ್ ಬಾಬು, ಸಿಡಿಪಿಒ ಅನಿತಾ, ಮೀನುಗಾರಿಕೆ ಇಲಾಖೆಯ ರಂಗಸ್ವಾಮಿ, ಬೆಸ್ಕಾಂ ಎಇಇ ಕೃಷ್ಣಮೂರ್ತಿ, ಲೋಕೋಪಯೋಗಿ ಇಲಾಖೆಯ ಎಇಇ ಹೊನ್ನೇಶಪ್ಪ, ಅಬಕಾರಿ ಇಲಾಖೆಯ ರಾಮಮೂರ್ತಿ ಮುಂತಾದವರಿದ್ದರು,

Post a Comment

0 Comments

Ad Code

Responsive Advertisement