Ticker

6/recent/ticker-posts

Ad Code

Responsive Advertisement

ಜಿಲ್ಲಾ ಕಟ್ಟಡ ಕಾರ್ಮಿಕ ಅಧಿಕಾರಿಗಳಿಗೆ ಕಟ್ಟಡ ಕಾರ್ಮಿಕರ ಪರಿಸ್ಥಿತಿ ಬಗ್ಗೆ ಮನವಿ

ಮಧುಗಿರಿ:   ವಿಶ್ವ ಮಾನವ ಹಕ್ಕುಗಳ ಸೇವಾಕೇಂದ್ರವು, ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಮಾನ್ಯ ಜಿಲ್ಲಾ ಕಟ್ಟಡ ಕಾರ್ಮಿಕ ಅಧಿಕಾರಿಗಳಿಗೆ ಕಟ್ಟಡ ಕಾರ್ಮಿಕರ  ಪರಿಸ್ಥಿತಿಯ ಬಗ್ಗೆ ಮನವಿ ಮಾಡಿತ್ತು. 

ವಿಶ್ವ ಮಾನವ ಹಕ್ಕುಗಳ ಸಂಸ್ಥಾಪಕರಾದ ಸಿದ್ದಲಿಂಗೇಗೌಡರು ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಪುರವರ ಹೋಬಳಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕ ಕುಟುಂಬಗಳು ಕೋರೋನ ಸಂಕಷ್ಟ ಸಮಯದಲ್ಲಿ ಅತೀವ ಕಷ್ಟಕ್ಕೆ ಒಳಗಾಗಿದ್ದರೂ ಇವರ ಕಷ್ಟ ಹೇಳತೀರದು .ಇಂತಹ ಪರಿಸ್ಥಿತಿಯಲ್ಲಿ ಇವರ ಕಷ್ಟವನ್ನು ಆಲಿಸಿದ ವಿಶ್ವ ಮಾನವ ಹಕ್ಕುಗಳ ಆಯೋಗದ ಸದಸ್ಯರುಗಳು ಇವರ ಬಳಿ ತೆರಳಿದಾಗ, ಇವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. 

ಕಟ್ಟಡ ಕಾರ್ಮಿಕರು ಕೋವಿಡ್ 19 ಸಮಯದಲ್ಲಿ ಇಡೀ ಕುಟುಂಬ ಸಮೇತ ಭಾರಿ ಸಮಸ್ಯೆ ಎದುರಿಸುತ್ತಿರುವುದು ಮನಗಂಡರು. ತದನಂತರ ಸಂಬಂಧಪಟ್ಟ  ಮೇಲಧಿಕಾರಿಗಳಿಗೆ ಪತ್ರದ ಮುಖ್ಯನ ಮನವರಿಕೆ ಮಾಡಿಕೊಟ್ಟು ಸಹಾಯ ಒದಗಿಸುವಲ್ಲಿ ಸಫಲರಾಗಿದ್ದಾರೆ. ಪುರವರ ಹೋಬಳಿ ಕಟ್ಟಡ ಕಾರ್ಮಿಕರ  ಮನವಿಗೆ ಸ್ಪಂದಿಸಿ. ಕಟ್ಟಡ ಕಾರ್ಮಿಕರಿಗೆ ಫುಡ್ ಕಿಟ್ ದೊರೆಯುವಂತೆ ಮಾಡಿದ  ವಿಶ್ವಮಾನವ ಹಕ್ಕುಗಳ ಸೇವಾಕೇಂದ್ರದ. ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸಿದ್ದಲಿಂಗೇಗೌಡರು ಮತ್ತು  ಮಧುಗಿರಿ ತಹಶಿಲ್ದಾರ್ ಶ್ರೀ ರವಿ ರವರಿಗೆ. ಕಾರ್ಮಿಕ ನಿರೀಕ್ಷಕರಾದ  ಶ್ರೀಕಾಂತ್ ರವರಿಗೆ.  ಸಾಮಾಜಿಕ ಕಾರ್ಯಕರ್ತರಾದ,ಪಿ ರಾಮಚಂದ್ರ, ಪ್ರಸನ್ನಕುಮಾರ್, ಪುರವರ ಹೋಬಳಿ ಕಟ್ಟಡ ಕಾರ್ಮಿಕರಿಂದ  ಅಭಿನಂದನೆಗಳನ್ನು ತಿಳಿಸಲಾಯಿತು. 


ಜೊತೆಗೆ ಆಹಾರ ಕಿಟ್ ನ್ನ ಕೂಡ ಈ ಸಮಯದಲ್ಲಿ ಕಟ್ಟಡ ಕಾರ್ಮಿಕರಿಗೆ ತಹಸಿಲ್ದಾರ್ ವೈ.ರವಿ ಹಾಗೂ ಪುರವರದ ಆರ್ ಐ ಜಯರಾಮಯ್ಯ ಆಹಾರದ ಕಿಟ್ ನ್ನು ವಿಸ್ತರಿಸಲಾಯಿತು. ರಾಮಚಂದ್ರ ರವರ ಮಕ್ಕಳಾದ ಭಾವನ, ವೈಷ್ಣವಿ ಸ್ವತಹ ತಯಾರಿಸಿ ಎಲ್ಲ ಕಟ್ಟಡ ಕಾರ್ಮಿಕರಿಗೆ ಮಾಸ್ಕ್ ಗಳನ್ನು  ಈ ವೇಳೆಯಲ್ಲಿ ಹಂಚಿದರು.


Post a Comment

0 Comments

Ad Code

Responsive Advertisement