ಬೆಂಗಳೂರು: ರೈತರ ಕಲ್ಯಾಣವು ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರದ ಪ್ರಥಮ ಆದ್ಯತೆಯಾಗಿದೆ. 2022ರ ಹೊತ್ತಿಗೆ ರೈತರ ಆದಾಯ ದ್ವಿಗುಣಗೊಳ್ಳಬೇಕು ಎಂಬ ಘೋಷಣೆ ನಮ್ಮ ಪ್ರಧಾನಿ ಅವರದು. ಈ ಆಶಯ ಈಡೇರಿಸಲು ಎರಡು ಕೃಷಿ ಕಾಯ್ದೆ ಜಾರಿ ಮತ್ತು ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮೂಲಕ ರೈತರಿಗೆ ಸ್ವಾಭಿಮಾನವನ್ನು ಕೊಟ್ಟಿದೆ. ಕೇವಲ ದಲ್ಲಾಳಿಗಳ ಏಕಸ್ವಾಮ್ಯಕ್ಕೆ ಒಳಪಟ್ಟಿದ್ದ ಕೃಷಿ ಮಾರುಕಟ್ಟೆಗಳ ಸಂಕೋಲೆ ಬಿಡುಗಡೆಯಾಗಿದೆ. ದೇಶದ ಯಾವುದೇ ಮೂಲೆ, ಹೆಚ್ಚು ಬೆಲೆ ಕೊಡುವ ವ್ಯಾಪಾರಿಗೆ ಉತ್ಪನ್ನ ಮಾರಾಟ ಮಾಡುವ ಸ್ವಾತಂತ್ರ್ಯ ಇದರಿಂದ ರೈತರಿಗೆ ಸಿಕ್ಕಿದೆ ಎಂದು ಶಾಸಕ ಶ್ರೀ ಪಿ.ರಾಜೀವ್ ಅವರು ಅಭಿಪ್ರಾಯಪಟ್ಟರು.
ಮಲ್ಲೇಶ್ವರದ ಪಕ್ಷದ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪಕ್ಷದ ರಾಜ್ಯ ಮಟ್ಟದ ಇ ಚಿಂತನ ವರ್ಗದಲ್ಲಿ “ಬಡವರ ಕಲ್ಯಾಣಕ್ಕಾಗಿ ಸಂಕಲ್ಪ ಮತ್ತು ಆ ದಿಸೆಯಲ್ಲಿ ನಮ್ಮ ಪ್ರಯತ್ನಗಳು” ಕುರಿತು ಅವರು ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ರಾಜ್ಯ ಪ್ರಶಿಕ್ಷಣ ವಿಭಾಗ ಆಯೋಜಿಸಿದ್ದ ರಾಜ್ಯ ಇ-ಚಿಂತನ ವರ್ಗ ಕಾರ್ಯಕ್ರಮದಲ್ಲಿ ವೆಬೆಕ್ಸ್ ಮೂಲಕ ಭಾಗವಹಿಸಿದ್ದರು.
ಫಸಲ್ ಬಿಮಾ ಯೋಜನೆ ಮೂಲಕ 9.42 ಕೋಟಿಗೂ ಹೆಚ್ಚು ರೈತರಿಗೆ ಸೌಲಭ್ಯ ಲಭಿಸುತ್ತಿದೆ. ರಾಷ್ಟ್ರೀಯ ಕೃಷಿ ಮಾರುಕಟ್ಟೆ ಯೋಜನೆ “ಇ ನಾಮ್” ಅಡಿಯಲ್ಲಿ ಇಲ್ಲಿನವರೆಗೆ 1.70 ಕೋಟಿಗೂ ಹೆಚ್ಚು ರೈತರು ನೋಂದಾವಣೆಗೊಂಡಿದ್ದಾರೆ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 66 ಲಕ್ಷ ಹೆಕ್ಟೇರ್ ಭೂಮಿಗೆ ಹನಿ ನೀರಾವರಿ ಸೌಲಭ್ಯ ನೀಡಲಾಗಿದೆ ಎಂದು ಶಾಸಕರಾದ ಶ್ರೀ ಪಿ. ರಾಜೀವ್ ವಿವರಿಸಿದರು.
ಮಣ್ಣು ಪರೀಕ್ಷೆಗೆ ಹೆಚ್ಚಿನ ಆದ್ಯತೆ ನೀಡಿದ ಮೊದಲ ಕೇಂದ್ರ ಸರಕಾರ ನಮ್ಮದು. 11.94 ಕೋಟಿ ರೈತರಿಗೆ ಸಾಯಿಲ್ ಹೆಲ್ತ್ ಕಾರ್ಡ್ ವಿತರಿಸಲಾಗಿದೆ. ಸಣ್ಣ ಹಿಡುವಳಿದಾರ ಸಾಲದ ಸುಳಿಯಲ್ಲಿ ಸಿಲುಕಿರಬಾರದು ಎಂಬ ದೃಷ್ಟಿಯಿಂದ ಕೃಷಿ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದು ವಾರ್ಷಿಕ ಒಟ್ಟು 6 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ 4 ಸಾವಿರ ರೂಪಾಯಿಗಳನ್ನು ರಾಜ್ಯ ಸರಕಾರ ನೀಡುತ್ತಿದ್ದು, ಒಟ್ಟು 10 ಸಾವಿರ ರೈತರಿಗೆ ಸಿಗುತ್ತಿದೆ. ಬಿಜೆಪಿ ಸರಕಾರಗಳು ಬಡವರ, ಶೋಷಿತರ, ರೈತರ ಪರವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ದೇಶದ ಕಟ್ಟಕಡೆಯ ವ್ಯಕ್ತಿಯೂ ಸೇರಬಹುದಾದ ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಜೀವನ್ ಜ್ಯೋತಿ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ ಮೊದಲಾದವುಗಳನ್ನು ಜಾರಿಗೊಳಿಸಿದ್ದು, ವಾರ್ಷಿಕವಾಗಿ 21 ರೂಪಾಯಿಯಿಂದ ಪ್ರೀಮಿಯಂ ರಂಭವಾಗುತ್ತಿವೆ. ವಾರ್ಷಿಕವಾಗಿ 2 ಲಕ್ಷದಿಂದ 5 ಲಕ್ಷದವರೆಗೆ ಪ್ರಯೋಜನ ಲಭಿಸುತ್ತಿದೆ ಎಂದು ವಿವರಿಸಿದರು.
ಆರೋಗ್ಯ ಕ್ಷೇತ್ರಕ್ಕೆ ಶ್ರೀ ನರೇಂದ್ರ ಮೋದಿ ಅವರ ಸರಕಾರ ಆದ್ಯತೆ ನೀಡಿದೆ. ಹಣ ಇಲ್ಲ ಎಂಬ ಕಾರಣಕ್ಕೆ ಆತ್ಮೀಯನನ್ನು ಕಳೆದುಕೊಳ್ಳುವ ಸ್ಥಿತಿ ಬರಬಾರದೆಂಬ ಬಡವರ ಪರ ಆಲೋಚನೆಗೆ ಅನುಗುಣವಾಗಿ ಆಯುಷ್ಮಾನ್ ಭಾರತ್ ಯೋಜನೆಯನ್ನು ಬಿಜೆಪಿಯ ಕೇಂದ್ರ ಸರಕಾರ ಅನುಷ್ಠಾನಕ್ಕೆ ತಂದಿದೆ. 5 ಲಕ್ಷದವರೆಗೆ ವೆಚ್ಚ ಭರಿಸಿ ಕೊಡುವ ಯೋಜನೆ ಇದಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರ, ಆಹಾರ ಕ್ಷೇತ್ರ ಸೇರಿ ವಿವಿಧ ರಂಗಗಳಲ್ಲಿ ನೆರವಾಗುವ ಮೂಲಕ ದೇಶದ ಕಟ್ಟಕಡೆಯ ಜನರ ಜೊತೆ ಸರಕಾರವೂ ಇದೆ ಎಂಬ ವಿಶ್ವಾಸವನ್ನು ಶ್ರೀ ನರೇಂದ್ರ ಮೋದಿ ಅವರ ಸರಕಾರ ಮೂಡಿಸಿದೆ. ಆತ್ಮನಿರ್ಭರ ಭಾರತ ಯೋಜನೆ ಮೂಲಕ ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆ, ಕಿರು ಉದ್ಯಮಗಳನ್ನು ಬೆಂಬಲಿಸುವ ಹಲವಾರು ಆಯಾಮಗಳಿಗೆ ಶ್ರೀ ನರೇಂದ್ರ ಮೋದಿ ಅವರ ಸರಕಾರ ಮುಂದಾಗಿದೆ ಎಂದು ತಿಳಿಸಿದರು.
ಬಡವರಿಗೆ ಸಮಸ್ಯೆ ಆಗಬಾರದೆಂಬ ದೃಷ್ಟಿಯಿಂದ ಪ್ರತಿಯೊಬ್ಬರಿಗೂ ಉಚಿತ ಕೋವಿಡ್ ಲಸಿಕೆ ಘೋಷಿಸಿದ ಜಗತ್ತಿನ ಏಕೈಕ ರಾಷ್ಟ್ರ ಭಾರತ. ಕೋವಿಡ್ ಸಂದರ್ಭದಲ್ಲಿ ಬಡವರು ಹಸಿವಿನಿಂದ ಬಳಲಬಾರದೆಂಬ ಯೋಚನೆಯಿಂದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯನ್ನು ಪ್ರಕಟಿಸಲಾಗಿದೆ. ಇದರಡಿ 80 ಕೋಟಿ ಜನರಿಗೆ ನವೆಂಬರ್‍ವರೆಗೆ 5 ಕೆಜಿ ಅಕ್ಕಿ ನೀಡಲಾಗುತ್ತಿದೆ ಎಂದು ವಿವರಿಸಿದರು. ಈ ವಿಚಾರವನ್ನು ನಾವು ಜನರಿಗೆ ತಿಳಿಸಬೇಕು ಎಂದರು.
1970ರ ದಶಕದಲ್ಲಿ ಇಂದಿರಾ ಗಾಂಧಿ ಅವರು ಗರೀಬಿ ಹಠಾವೋ ಘೋಷಣೆ ಮಾಡಿದರು. ಆ ಘೋಷಣೆ ಮೂಲಕ ಹಲವು ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷವು ಗೆದ್ದಿತು. ಆದರೆ, ಬಡವರ ಅಭಿವೃದ್ಧಿ ಆಗಲೇ ಇಲ್ಲ. ಬಡವರು ಮತ್ತಷ್ಟು ಹೀನಾಯ ಸ್ಥಿತಿಗೆ ಹೋದರು. ಬಡವರ ಕಲ್ಯಾಣಕ್ಕಾಗಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ 100 ರೂಪಾಯಿ ಹಣ ಬಡವರ ಕೈಸೇರುವಾಗ ಕೇವಲ 20 ರೂಪಾಯಿ ಆಗಿರುತ್ತದೆ ಎಂಬ ವಿಚಾರವನ್ನು ಸ್ವತಃ ಕಾಂಗ್ರೆಸ್ ಪ್ರಧಾನಿ ರಾಜೀವ್ ಗಾಂಧಿ ಅವರೇ ಒಪ್ಪಿಕೊಂಡಿದ್ದರು ಎಂದು ತಿಳಿಸಿದರು.
ಮಧ್ಯವರ್ತಿಗಳನ್ನು ತಪ್ಪಿಸಬೇಕು. ಸರಕಾರದ ಯೋಜನೆಗಳು ನೇರವಾಗಿ ತಲುಪಬೇಕೆಂಬ ದೃಷ್ಟಿಯಿಂದ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ಕಾರ್ಯ ನಿರ್ವಹಿಸಿದರು. ಜನ್‍ಧನ್ ಯೋಜನೆ ಅಂಥ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಮಾಹಿತಿ ನೀಡುವಿಕೆ, ಮಧ್ಯವರ್ತಿಗಳ ಹಸ್ತಕ್ಷೇಪ ತಪ್ಪಿಸಬೇಕು ಎಂಬ ಚಿಂತನೆಯೊಂದಿಗೆ ತಂತ್ರಜ್ಞಾನದ ಸಮರ್ಪಕ ಬಳಕೆಗೆ ಕೇಂದ್ರ ಸರಕಾರ ಮುಂದಾಗಿದೆ. ಡಿಜಿಟಲ್ ಇಂಡಿಯಾ ಮೂಲಕ ಜನ್‍ಧನ್ ಯೋಜನೆಯಡಿ 50 ಕೋಟಿ ಬ್ಯಾಂಕ್ ಖಾತೆಗಳನ್ನು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ತೆರೆಯಲಾಗಿದೆ. ಕೇಂದ್ರ ಸರಕಾರದ 52 ಸಚಿವಾಲಯಗಳು ಬಿಡುಗಡೆ ಮಾಡುವ 380 ಯೋಜನೆಗಳು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಜನರನ್ನು ತಲುಪುತ್ತಿವೆ. ಇಲ್ಲಿನವರೆಗೆ 17 ಲಕ್ಷ ಕೋಟಿ ರೂಪಾಯಿ ಜನಸಾಮಾನ್ಯರ ಖಾತೆಗೆ ಸಂದಾಯವಾಗಿವೆ ಎಂದು ಅವರು ನುಡಿದರು.
ಬ್ಯಾಂಕ್ ಖಾತೆ ಬೇಡದ ಬಡವರಿಗೆ ಬ್ಯಾಂಕ್‍ಗಳಲ್ಲಿ ಖಾತೆ ತೆರೆಸುವ ಕಾರ್ಯವನ್ನು ಪ್ರಧಾನಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮುಖ್ಯಸ್ಥರಾದ ರಾಹುಲ್ ಗಾಂಧಿ ಅವರು ಜನ್‍ಧನ್ ಖಾತೆಗಳ ವಿಚಾರವಾಗಿ ಲೇವಡಿ ಮಾಡಿದರು. ಇದಕ್ಕಾಗಿ ರಾಜಕೀಯ ವಿಶ್ಲೇಷಕರು ರಾಹುಲ್ ಗಾಂಧಿ ಅವರನ್ನು “ಪಾಲಿಟಿಕಲ್ ಬಫೂನ್” ಎಂದು ಕರೆಯುತ್ತಾರೆ ಎಂದರು. ಕಾಂಗ್ರೆಸ್ ಆಡಳಿತವೇ ಈಗ ಇರುತ್ತಿದ್ದರೆ 17 ಲಕ್ಷ ಕೋಟಿ ಪೈಕಿ 13.5 ಲಕ್ಷ ಕೋಟಿ ಮಧ್ಯವರ್ತಿಗಳ ಪಾಲಾಗುತ್ತಿತ್ತು. 3.5 ಲಕ್ಷ ಕೋಟಿ ಮಾತ್ರ ಬಡವರಿಗೆ ಸಿಗುತ್ತಿತ್ತು ಎಂದರು,
ಹಲವು ದಶಕಗಳ ಕಾಲ ಕಾಂಗ್ರೆಸ್ ಆಡಳಿತದ “ಪಾಲಿಸಿ ಪೆರಾಲಿಸಿಸ್”ನಿಂದ ದೇಶ ಬಳಲುತ್ತಿತ್ತು. ಸ್ವಾತಂತ್ರ್ಯ ಪಡೆದ 70 ವರ್ಷಗಳ ಬಳಿಕವೂ 18 ಸಾವಿರ ಹಳ್ಳಿಗಳು ವಿದ್ಯುತ್ ಸಂಪರ್ಕ ಪಡೆದಿರಲಿಲ್ಲ. ಶ್ರೀ ನರೇಂದ್ರ ಮೋದಿ ಅವರ ಸರಕಾರವು ಕೇವಲ 5 ವರ್ಷಗಳಲ್ಲಿ ಸೌಭಾಗ್ಯ ಯೋಜನೆಯಡಿ 2,81,69,724 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. ಲಕ್ಷಾಂತರ ಮನೆಗಳು ಕರ್ನಾಟಕದಲ್ಲೂ ಇದರ ಪ್ರಯೋಜನ ಪಡೆದಿವೆ ಎಂದು ತಿಳಿಸಿದರು.
ಕ್ಷಯ, ಶ್ವಾಸಕೋಶದ ಕ್ಯಾನ್ಸರ್‍ನಿಂದ ಮಹಿಳೆಯರು ಬಲಿಯಾಗುವುದನ್ನು ತಪ್ಪಿಸಲು ಹೊಗೆಮುಕ್ತ ಅಡುಗೆ ಪರಿಕಲ್ಪನೆಯ ಉಜ್ವಲ ಯೋಜನೆಯಡಿ 9.5 ಕೋಟಿ ಕುಟುಂಬಕ್ಕೆ ಉಚಿತ ಸಿಲಿಂಡರ್ ನೀಡಲಾಗಿದೆ. ಬಡ ಕುಟುಂಬಗಳೂ ಎಲ್‍ಇಡಿ ಬಲ್ಬ್ ಬಳಸಿ ವಿದ್ಯುತ್ ಬಿಲ್ ಹೊರೆ ಕಡಿಮೆಯಾಗಿ ಆರ್ಥಿಕ ಸ್ವಾವಲಂಬನೆ ¥ಡೆಯಬಹುದೆಂಬ ಚಿಂತನೆ ಇರುವ ಯೋಜನೆ “ಉಜಾಲಾ” ಜಾರಿಗೊಂಡಿದ್ದು, 36,74,41,809 ಕುಟುಂಬಗಳಿಗೆ ಉಚಿತವಾಗಿ ಎಲ್‍ಇಡಿ ಬಲ್ಬ್ ಕೊಡಲಾಗಿದೆ ಎಂದು ವಿವರಿಸಿದರು.
ಪ್ರಧಾನಿ ದೇಶದ ಕಟ್ಟಕಡೆಯ ಜನರಿಗೂ ಸ್ಪಂದಿಸುವ ವ್ಯಕ್ತಿ ಎಂಬ ಚಿಂತನೆ ಈಗ ಬೆಳೆದಿದೆ. 50- 60 ವರ್ಷಗಳ ಕಾಲ ಚುನಾವಣೆ ವೇಳೆ “ಹರ್ ಘರ್ ಬಿಜಲಿ, ಹರ್ ಘರ್ ಪಾನಿ” ಘೋಷಣೆಯನ್ನು ಕಾಂಗ್ರೆಸ್ ಮೊಳಗಿಸುತ್ತಿತ್ತು. ಅದು ಘೋಷಣೆಯಾಗಿಯೇ ಉಳಿಯಿತು. ಆದರೆ, ಜಲಜೀವನ ಮಿಷನ್ ಮೂಲಕ ಮನೆಮನೆಗೂ ಶುದ್ಧ ನೀರು ನೀಡುವ ಪ್ರಧಾನಿಯವರ ಆಲೋಚನೆ ಕಾರ್ಯಗತವಾಗಿದೆ. ಈ ಎಲ್ಲ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎಂದರು.
ಬಡ ಕುಟುಂಬ ಆರ್ಥಿಕ ಸ್ವಾವಲಂಬಿ ಆಗಬೇಕು ಎಂಬ ನಿರ್ಧಾರ ಬಿಜೆಪಿಯದು. “ರೋಟಿ ಕಪಡಾ ಮಕಾನ್” ಸುಮಾರು ಅರ್ಧ ಶತಮಾನದ ಕಾಲ ಕಾಂಗ್ರೆಸ್‍ನ ಚುನಾವಣಾ ಪ್ರಣಾಳಿಕೆ ಆಗಿತ್ತು. ಅದರಿಂದ ಜನಸಾಮಾನ್ಯರಿಗೆ ಪ್ರಯೋಜನ ಆಗಲೇ ಇಲ್ಲ. ಆದರೆ, ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಯೋಜನೆಗಳನ್ನಷ್ಟೇ ಘೋಷಿಸಲಿಲ್ಲ. “ಒಂದು ದೇಶ- ಒಂದು ಪಡಿತರ ಚೀಟಿ”ಯ ಯೋಜನೆಯಡಿ ಇಂಥ ಬಡವರ ಪರ, ಮಹತ್ವಪೂರ್ಣ ನಿರ್ಧಾರ ಇರುವುದನ್ನು ನಾವು ಕಾಣಬಹುದು ಎಂದು ವಿಶ್ಲೇಷಿಸಿದರು.
ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ದೀನದಯಾಳ್ ಉದ್ಯೋಗ ಕೌಶಲ್ಯ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೊಳಿಸಿದೆ. 2023ರ ಹೊತ್ತಿಗೆ ಪ್ರತಿಯೊಬ್ಬರಿಗೂ ಮನೆ ಸಿಗಬೇಕೆಂಬ ಆಶಯದ ಪ್ರಧಾನಮಂತ್ರಿ ಆವಾಸ್ ಯೋಜನೆಯೂ ತ್ವರಿತಗತಿಯಲ್ಲಿ ಕೆಲಸ ಮಾಡುತ್ತಿದೆ. ಬೀದಿ ಬದಿ ವ್ಯಾಪಾರಿಗಳನ್ನೂ ನಮ್ಮ ಕೇಂದ್ರ ಸರಕಾರ ಮರೆತಿಲ್ಲ. 25 ಲಕ್ಷಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂಪಾಯಿ ಪರಿಹಾರಧನ ನೀಡಲಾಗಿದೆ ಎಂದು ತಿಳಿಸಿದರು.
ಯೂರಿಯಾಗೆ ಲಕ್ಷಾಂತರ ಕೋಟಿ ರೂಪಾಯಿ ಕೊಟ್ಟರೂ ಬಡ ರೈತರಿಗೆ ಯೂರಿಯಾ ಸಿಗುತ್ತಿರಲಿಲ್ಲ. ಬೇವುಲೇಪಿತ ಯೂರಿಯಾ ವಿತರಣೆಗೆ ಕೇಂದ್ರ ಸರಕಾರ ಮುಂದಾಯಿತು. ಫಾರ್ಮಸ್ಯೂಟಿಕಲ್ ಕಂಪೆನಿಗಳ ಏಕಸ್ವಾಮ್ಯ ತಪ್ಪಿಸಲು ಮತ್ತು ಔಷಧಿಗಳ ಬೆಲೆ ಕಡಿಮೆ ಮಾಡಲು “ಪ್ರಧಾನಮಂತ್ರಿ ಜನೌಷಧಿ ಕೇಂದ್ರ”ಗಳನ್ನು ತೆರೆಯಲಾಯಿತು. ರಿಯಾಯಿತಿ ದರದಲ್ಲಿ ಸ್ಟೆಂಟ್ ನೀಡಿದ್ದರಿಂದ ಬಡವರೂ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯ ಎಂಬ ಪರಿಸ್ಥಿತಿ ಈಗ ನಿರ್ಮಾಣವಾಗಿದೆ ಎಂದರು.
ಸಾಮಾಜಿಕ ಪರಿವರ್ತನೆಯ ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮುದ್ರಾ ಯೋಜನಾದಂಥ ಅನೇಕ ಯೋಜನೆಗಳು ಬಡ ಕುಟುಂಬಗಳಿಗೆ ಆರ್ಥಿಕ ಸದೃಢತೆಯನ್ನು ನೀಡುತ್ತಿವೆ. 18ರಿಂದ 35 ವರ್ಷದ ಯುವಕರಿಗೆ ಗ್ರಾಮೀಣ ಕೌಶಲ್ಯ ಯೋಜನೆಯಡಿ ತರಬೇತಿ ಕೊಟ್ಟು ಉದ್ಯೋಗಾವಕಾಶ ಸೃಷ್ಟಿಗೆ ಪ್ರಧಾನಿಯವರು ಮುಂದಾಗಿದ್ದು, ಈಗಾಗಲೇ 26.85 ಲಕ್ಷಕ್ಕೂ ಹೆಚ್ಚು ಯುವಕರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು. 92 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ ಎಂದರು.
ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾದಾಗ ಪೋಖ್ರಾನ್‍ನಲ್ಲಿ ಅಣ್ವಸ್ತ್ರ ಪರೀಕ್ಷೆಯನ್ನು ಮಾಡುವ ಎದೆಗಾರಿಕೆ ತೋರಿದರು. ಅಮೆರಿಕಾದಂಥ ಮುಂದುವರಿದ ರಾಷ್ಟ್ರಗಳು ಭಾರತಕ್ಕೆ ದಿಗ್ಬಂಧನ ಹೇರಬಹುದೆಂಬ ಆತಂಕವನ್ನು ಲೆಕ್ಕಿಸದೆ ರಾಷ್ಟ್ರೀಯತೆಯನ್ನು ಅವರು ಎತ್ತಿ ಹಿಡಿದರು. ಭಾರತ ಜಗದ್ವಂದ್ಯ ಆಗಬೇಕೆಂಬ ಆಶಯ ಅವರದಾಗಿತ್ತು ಎಂದು ವಿವರಿಸಿದರು.
ಶ್ರೀ ವಾಜಪೇಯಿ ಅವರು ಜಾರಿಗೊಳಿಸಿದ ಭಾರತ್ ಮಾಲಾ ಯೋಜನೆ ಇಡೀ ದೇಶವನ್ನು ಒಗ್ಗೂಡಿಸುವ ಸಂಕಲ್ಪದ ದ್ಯೋತಕವಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರಕಾರವು ಬಡವರು, ರೈತರು, ಕಾರ್ಮಿಕರು, ಸೇರಿ ಎಲ್ಲರ ಒಳಿತಿಗಾಗಿ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್” ಚಿಂತನೆಯೊಂದಿಗೆ ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ. ಬಡವರ ಕಲ್ಯಾಣಕ್ಕೆ ಗರೀಬ್ ಕಲ್ಯಾಣ್ ಯೋಜನೆಗಳಿಗೆ ಅವರು ಆದ್ಯತೆ ನೀಡಿದ್ದಾರೆ ಎಂದರು.
ರಾಷ್ಟ್ರೀಯತೆ ನಮ್ಮ ಮೂಲ ಮಂತ್ರ. ಭಾರತ ಕೇವಲ ಕಲ್ಲುಮಣ್ಣಿರುÀವ ಭೂ ಪ್ರದೇಶವಾಗಿ ನಾವು ಭಾವಿಸುವುದಿಲ್ಲ. ಇದು ನಮ್ಮ ಮಾತೆಯಾಗಿದೆ. ಭಾರತ ಮಾತೆಯ ಅಸ್ಮಿತೆ, ಅಭ್ಯುದಯಕ್ಕಾಗಿ ಶ್ಯಾಮಪ್ರಸಾದ ಮುಖರ್ಜಿ ಮತ್ತು ಪಂಡಿತ ದೀನದಯಾಳ ಉಪಾಧ್ಯಾಯರು ಹಾಕಿಕೊಟ್ಟ ಮಾರ್ಗ ಮತ್ತು ಮಾರ್ಗದರ್ಶನ ಸೂತ್ರಗಳೊಂದಿಗೆ ನಮ್ಮ ಪಕ್ಷ ಮುನ್ನಡೆಯುತ್ತಿದೆ ಎಂದರು.
ಜನಸಂಘದ ಕಾಲದಿಂದ ನಮ್ಮದಾಗಿದ್ದ ಚಿಂತನೆಗಳನ್ನು ಅಧಿಕಾರ ಸಿಕ್ಕಿದ ಸಂದರ್ಭದಲ್ಲಿ ನಾವು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು. ದೇಶದ ಬಡವರೂ ವಿಮಾನದಲ್ಲಿ ಓಡಾಡುವಂತಾಗಬೇಕೆಂಬ ಕಲ್ಪನೆಯಿಂದ ಉಡಾಣ್ ಯೋಜನೆ ಜಾರಿಗೊಂಡಿದೆ. ಭಾರತ ಬದಲಾಗುತ್ತಿದೆ. ಜಗತ್ತು ಭಾರತದ ಕಡೆ ತಿರುಗಿ ನೋಡುತ್ತಿದೆ. ಬಡ ಕುಟುಂಬಗಳು ಆರ್ಥಿಕ ಸ್ವಾವಲಂಬನೆಯನ್ನು ಪಡೆಯುವತ್ತ ನಡೆಯುತ್ತಿವೆ. ಇದಕ್ಕೆ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಕಾರಣ ಎಂದರು. ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಶ್ರೀ ಜಗದೀಶ್ ಹಿರೇಮನಿ ಅವರು ಉಪಸ್ಥಿತರಿದ್ದರು.

0 Comments