Ticker

6/recent/ticker-posts

Ad Code

Responsive Advertisement

ಡಬ್ಬಿಂಗ್ ಮುಗಿಸಿದ ಜಗ್ಗೇಶ್-'ಡಾಲಿ' ಧನಂಜಯ್ ಸದ್ಯದಲ್ಲೇ 'ತೋತಾಪುರಿ' ಸವಿಯಲು ಸಿದ್ಧ

ನವರಸ ನಾಯಕ ಜಗ್ಗೇಶ್ ಹಾಗೂ 'ಡಾಲಿ' ಧನಂಜಯ್ ಪ್ರಮುಖ ಭೂಮಿಕೆಯಲ್ಲಿರುವ 'ತೋತಾಪುರಿ' ಬಿಡುಗಡೆಯ ಸನ್ನಾಹದಲ್ಲಿದೆ. ವಿಜಯಪ್ರಸಾದ್ ಈ ಚಿತ್ರವನ್ನು ನಿರ್ದೇಶಿಸಿದ್ದು, 'ನೀರ್ ದೋಸೆ' ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಮತ್ತೆ ಒಗ್ಗೂಡಿದ್ದಾರೆ. ಈ ಚಿತ್ರ ಎರಡು ಭಾಗಗಳಾಗಿ ಮೂಡಿ ಬರುತ್ತಿದ್ದು, ಸದ್ಯದಲ್ಲೇ ಫಸ್ಟ್ ಲುಕ್ ಹರಿಬಿಡಲಿದೆ 'ತೋತಾಪುರಿ' ತಂಡ.

ಇತ್ತೀಚೆಗಷ್ಟೇ ಕುಂಬಳಕಾಯಿ ಒಡೆದ ಈ ಚಿತ್ರದ ಡಬ್ಬಿಂಗ್ ಕಾರ್ಯವೂ ಮುಕ್ತಾಯಗೊಂಡಿದೆ. ಕೆಲ ದಿನಗಳ ಹಿಂದೆ ಜಗ್ಗೇಶ್ ಹಾಗೂ ಧನಂಜಯ್ ಡಬ್ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಬಹುತೇಕ ಮುಗಿಸಿರುವ ಚಿತ್ರತಂಡ, ಸಿನಿಮಾವನ್ನು ಸದ್ಯದಲ್ಲೇ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.

ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಸುಮಾರು 80ಕ್ಕೂ ಅಧಿಕ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಮೈಸೂರು, ಕೂರ್ಗ್, ಕೇರಳ ಮೊದಲಾದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. 

ಎರಡನೇ ಮದುವೆ, ಗೋವಿಂದಾಯ ನಮಃ, ಶಿವಲಿಂಗ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸುರೇಶ್ ಆರ್ಟ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ 'ತೋತಾಪುರಿ'ಗೆ ಅನೂಪ್ ಸೀಳಿನ್ ಸಂಗೀತ, ನಿರಂಜನ್ ಬಾಬು ಕ್ಯಾಮೆರಾ ಕೆಲಸವಿದೆ.

Post a Comment

0 Comments

Ad Code

Responsive Advertisement