Ticker

6/recent/ticker-posts

Ad Code

Responsive Advertisement

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಪೊಲೀಸರ ಪದೋನ್ನತಿ ಸಮಾರಂಭ

29-07-2021 .... ಸಂಜೆ 4.30 ಗಂಟೆಗೆ ಸಿಎಆರ್ (ದಕ್ಷಿಣ) ಆಡುಗೋಡಿಯಲ್ಲಿ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿರವರಿಗೆ ಮಾನ್ಯ ಪೊಲೀಸ್ ಆಯುಕ್ತರು ಬೆಂಗಳೂರು ನಗರ ರವರಿಂದ ಪದೊನ್ನತಿ ಪ್ರಧಾನ ಸಮಾರಂಭ ನಡೆಸಲಾಯಿತು. ಈ ಸಂಧರ್ಭದಲ್ಲಿ  ಮಾನ್ಯ ಪೊಲೀಸ್ ಆಯುಕ್ತರು ಮಾತನಾಡಿ ಆರ್ಮಿಯಲ್ಲಿ ಸಮಯಕ್ಕೆ ಸರಿಯಾಗಿ ಮುಂಬಡ್ತಿ ನೀಡಲಾಗುತ್ತದೆ ಆದರೆ ನಮ್ಮ ಇಲಾಖೆಯಲ್ಲಿ ಕೆಲಸದ ಒತ್ತಡವಿರುವುದರಿಂದ ಸರಿಯಾದ ಸಮಯಕ್ಕೆ ಮುಂಬಡ್ತಿ ನೀಡಲು ವ್ಯತ್ಯಾಸವಾಗುತ್ತಿದೆ, ಆದರೆ ನೀವುಗಳು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಮುಂಬಡ್ತಿ ಪಡೆದಿರುವಿರಿ. 

ಇನ್ನುಮುಂದೆ ಇದೇ ರೀತಿ ಕರ್ತವ್ಯ ನಿರ್ವಹಿಸಿ ಒಳ್ಳೆಯ ಸೇವೆ ನೀಡಬೇಕೆಂದು ಆಶಿಸುತ್ತೇನೆ. ಬಡ್ತಿ ಪಡೆದ ನಂತರ ಇನ್ನು ಮುಂದೆ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ಹೈದರಬಾದ್ ಕರ್ನಾಟಕ ಮೀಸಲಾತಿಯಲ್ಲಿ ಹುದ್ದೆ ಪೆಡೆದವರು ಹುದ್ದೆಯಲ್ಲಿ ಬೇಗ ಮುಂಬಡ್ತಿ ಪಡೆಯುವುದರಿಂದ ಡಿಸಿಪಿ ಹುದ್ದೆ ವರೆಗೂ ಮುಂಬಡ್ತಿ ಪಡೆಯುವ ಅವಕಾಶವಿದೆ. ಈ ವರ್ಷ ವಿವಿಧ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 850 ಸಿಬ್ಬಂದಿಗಳಿಗೆ ಈ ಕೆಳಕಂಡ0ತೆ ಮುಂಬಡ್ತಿ ನೀಡಲಾಗಿದೆ.

ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಘಟಕದಲ್ಲಿ ದಿನಾಂಕ:28/07/2021 ರಂದು ಒಟ್ಟು 315 (ಹೈದ್ರಾಬಾದ್ ಕರ್ನಾಟಕ-97 ಮತ್ತು ನಾನ್ ಹೈದ್ರಾಬಾದ್ ಕರ್ನಾಟಕ-248)  ಸಿಪಿಸಿ ರವರುಗಳಿಗೆ ಸಿಹೆಚ್‌ಸಿ ಹುದ್ದೆಗೆ ಮುಂಬಡ್ತಿ ನೀಡಲಾಗಿರುತ್ತದೆ.

ನಾನ್ ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿ 10 ವರ್ಷ ಪೂರೈಸಿರುವ (2011ನೇ ಸಾಲಿನಲ್ಲಿ ನೇಮಕಾತಿ ಹೊಂದಿರುವ) ಸಿಪಿಸಿ ರವರುಗಳಿಗೆ ಸಿಹೆಚ್‌ಸಿ ಹುದ್ದೆಗೆ ಮುಂಬಡ್ತಿ ನೀಡಲಾಗಿರುತ್ತದೆ. 

ಹೈದ್ರಾಬಾದ್ ಕರ್ನಾಟಕ ವೃಂದದಲ್ಲಿ 05 ವರ್ಷ ಪೂರೈಸಿರುವ (2016ನೇ ಸಾಲಿನಲ್ಲಿ ನೇಮಕಾತಿ ಹೊಂದಿರುವ) ಸಿಪಿಸಿ ರವರುಗಳಿಗೆ ಸಿಹೆಚ್‌ಸಿ ಹುದ್ದೆಗೆ ಮುಂಬಡ್ತಿ ನೀಡಲಾಗಿರುತ್ತದೆ.

ಒಟ್ಟು 315 ಸಿಬ್ಬಂದಿಗಳ ಪೈಕಿ 43 ಮಹಿಳಾ ಸಿಪಿಸಿ ರವರುಗಳಿಗೆ ಸಿಹೆಚ್‌ಸಿ ಹುದ್ದೆಗೆ ಮುಂಬಡ್ತಿ ನೀಡಲಾಗಿರುತ್ತದೆ. 

ಜೇಷ್ಟತಾ ಪಟ್ಟಿಯನುಸಾರ ಸಿಬ್ಬಂದಿಗಳ ಸೇವಾ ವಿವರಗಳನ್ನು ಮತ್ತು ದಾಖಲಾತಿಗಳನ್ನು ಪಡೆದು ಪರಿಶೀಲಿಸಿ ಅರ್ಹ ಸಿಬ್ಬಂದಿಗಳ ಪಟ್ಟಿಯನ್ನು ಸಿದ್ದಪಡಿಸಲಾಗುವುದು.

ಅರ್ಹ ಸಿಬ್ಬಂದಿಗಳನ್ನು ಮುಂಬಡ್ತಿ ಕೌನ್ಸಿಲಿಂಗ್‌ಗೆ ಹಾಜರಾಗುವಂತೆ ಸೂಚಿಸಲಾಗುತ್ತದೆ. 

ಈ ಪ್ರಕ್ರಿಯೆಯನ್ನು ಸಂಪೂರ್ಣ ಪಾರದರ್ಶಕವಾಗಿ ಕೌನ್ಸಿಲಿಂಗ್ ಮುಖಾಂತರ ಸಿಬ್ಬಂದಿಗಳ ಸಮ್ಮುಖದಲ್ಲಿ ರಿಕ್ತ ಸ್ಥಾನಗಳ ಪಟ್ಟಿಯನ್ನು ಪ್ರದರ್ಶಿಸಿ, ಸಿಬ್ಬಂದಿಗಳ ಆಯ್ಕೆಯನುಸಾರ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ. 

 ಈ ಮೂಲಕ ಬೆಂಗಳೂರು ಕಮಿಷನರೇಟ್ ನಲ್ಲಿ ನೆಡೆದಂತ ವರ್ಗಾವಣೆ ಮತ್ತು ಬಡ್ತಿ ಅತ್ಯಂತ ಪಾರದರ್ಶಕವಾಗಿ ನಡೆದಿರುತ್ತದೆ. ನಾನು ನಿಮ್ಮಲ್ಲಿ ಹೇಳುವುದೇನೆಂದರೆ ಏನೇ ತೊಂದರೆ ಇದ್ದರೂ ನಮ್ಮ ಗಮನಕ್ಕೆ ತನ್ನಿ ನಾವು ಅದಕ್ಕೆ ನ್ಯಾಯ ಸಮ್ಮತವಾಗಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಇಂದು ಅಲ್ಪ ಸಮಯದಲ್ಲಿ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದೀರ, ನಿಮ್ಮಿಂದ ಎಲ್ಲಾ ನಾಗರೀಕರಿಗೂ ಒಳ್ಳೆಯ ಸೇವೆ ದೊರೆಯುವಂತಾಗಲಿ ಎಂದು ಆಶಿಸುತ್ತೇನೆಂದು ತಿಳಿಸಿದರು.


Post a Comment

0 Comments

Ad Code

Responsive Advertisement