Ticker

6/recent/ticker-posts

Ad Code

Responsive Advertisement

ರಾಷ್ಟಿçಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯರಿಗೆ ಸನ್ಮಾನ

ಬಳ್ಳಾರಿ,ಜು.01: ರಾಷ್ಟಿçಯ ವೈದ್ಯರ ದಿನಾಚರಣೆ ಅಂಗವಾಗಿ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಿಗೆ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರಾದ ಡಾ.ಹೆಚ್.ನಿಜಾಮುದ್ದೀನ್, ಡಾ.ನಾರಾಯಣ ಬಾಬು, ಡಾ.ಪ್ರಿಯಾಂಕಾ ರಡ್ಡಿ ಯವರನ್ನು ಸಂಸ್ಕತಿ ಶಾಲೆಯ ಶಿಕ್ಷಕರು ಸನ್ಮಾನಿಸಿದರು.

ಶಾಲೆಯ ಸಂಯೋಜಕರಾದ ದೀಪಾ ಅವರು ಮಾತನಾಡಿ ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರಿಗೆ ವೈದ್ಯರ ಪ್ರಾಮುಖ್ಯತೆಯ ಬಗ್ಗೆ ತಿಳಿದು ಬಂದಿರುತ್ತದೆ. ವಿಶ್ವದಾದ್ಯಂತ ಕರೋನಾ ಕಾಯಿಲೆ ಪ್ರಾರಂಭದಿAದ ಪ್ರತಿಯೊಬ್ಬ ವೈದ್ಯರು ಹಗಲು ರಾತ್ರಿ ಸೇವೆಯಲ್ಲಿ ತೊಡಗಿ ಜನರ ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರೆ ಎಂದರು.

 ಇದಕ್ಕಾಗಿ ಕೃತಘ್ಞತೆಯನ್ನು ಸಲ್ಲಿಸಲು ಶಾಲಾ ಮಕ್ಕಳು ತಯಾರಿಸಿದ ಶುಭಾಶಯ ಪತ್ರ ಹಾಗೂ ಹೂ ಗುಚ್ಚಗಳನ್ನು ನೀಡಿ ಧನ್ಯವಾದಗಳನ್ನು ಇದೇ ಸಂದರ್ಭದಲ್ಲಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಕತಿ ಶಾಲೆಯ ಶಿಕ್ಷಕಿಯರಾದ ಅನಿತಾ, ವಾಸಿಮಾ, ರಿಜ್ವಾನಾ, ಪೂರ್ಣಿಮಾ,  ನಳಿನಿ,  ವೈಷ್ಣವಿ,ಸಂಸ್ಕತಿ ಶಾಲೆಯ ಮುಖ್ಯಸ್ಥ ದರೂರು ರಮೇಶ್ ಮತ್ತಿತರರು ಇದ್ದರು.

Post a Comment

0 Comments

Ad Code

Responsive Advertisement