ಬಳ್ಳಾರಿ ಜುಲೈ 01. ಸಿರುಗುಪ್ಪ ತಾಲೂಕಿನ ಜನಪ್ರಿಯ ನಾಯಕರಾದ ಎಂ.ಎಸ್. ಸಿದ್ದಪ್ಪ ನವರು ಜುಲೈ 01 ಬುದುವಾರರದಂದು ಶ್ರೀ ಶ್ರೀ ಶ್ರೀ ಪೂಜ್ಯ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಸಿರುಗುಪ್ಪ ತಾಲೂಕಿನ ವತಿಯಿಂದ 10001 ಸಸಿಗಳನ್ನು ರಾಯರ ಮಠದಲ್ಲಿ,ಇನ್ನಿತರ ಪ್ರದೇಶಗಳಲ್ಲಿ ಪೂಜ್ಯ ಗುರುಗಳ ಜೊತೆ ಸೇರಿ ಹಾಗೂ ಸಿರುಗುಪ್ಪ ಆರ್ಯವೈಶ್ಯ ಸಮಾಜದ ಗುರು ಹಿರಿಯರ ಜೊತೆ ಸೇರಿ ಸಸಿಗಳನ್ನು ನೆಡಲಾಯಿತು.
ಈಸಂಧರ್ಬದಲ್ಲಿ ಸಿದ್ದಪ್ಪನವರು ಮಾತನಾಡುತ್ತಾ ಮನೆಗೆ ಒಂದು ಗಿಡ ನಾಟಿ ಊರಿಗೊಂದು ವನ ಆಗುತ್ತದೆ. ನಮಗೆ ಆಕ್ಷಿಜನ್ ಕೊರತೆ ಉಂಟಾಗುವುದಿಲ್ಲ ಮತ್ತು ಮಳೆಗಳು ಸಮೃಧ್ದಿಯಾಗಿ ಬಂದು ಬೇಳೆಗಳು ಚನ್ನಾಗಿ ಬೇಳೆಯಲು ಅವಕಾಶ ಇರುತ್ತದೆ ಎಂದು ನಾಗರೀಕರಿಗೆ ತಿಳಿಹೇಳಿದರು.
ಗ್ರಾಮದ ಹಿರಿಯರು,ಪಕ್ಷದ ಮುಖಂಡರು,ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.

0 Comments