Ticker

6/recent/ticker-posts

Ad Code

Responsive Advertisement

ಕೇಂದ್ರದಲ್ಲಿ ಸಹಕಾರ ಸಚಿವಾಲಯ - ಸಹಕಾರಿಗಳ ಸ್ವಾಗತ ಪ್ರಧಾನಿಗೆ ಜಿ.ಟಿ. ದೇವೇಗೌಡರ ಅಭಿನಂದನೆ


ರಾಷ್ಟçದಲ್ಲಿ ಬೃಹತ್ತಾಗಿ, ಮಹತ್ವದ್ದಾಗಿ ಬೆಳೆದಿರುವ ಹಾಗೂ ಬೆಳೆಯುತ್ತಿರುವ ಸಹಕಾರಿ ವ್ಯವಸ್ಥೆಯನ್ನು ಬಲಪಡಿಸಿ ``ಸಹಕಾರದಿಂದ ಸಮೃದ್ಧಿ’’ ಧ್ಯೇಯದೊಂದಿಗೆ ``ಕೇಂದ್ರ ಸಹಕಾರ ಸಚಿವಾಲಯ’’ ಸ್ಥಾಪನೆ ಕುರಿತ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು ಶಾಸಕರು ಹಾಗೂ ಸಹಕಾರ ಮಹಾಮಂಡಳದ ಅಧ್ಯಕ್ಷರೂ ಆದ ಶ್ರೀ ಜಿ.ಟಿ. ದೇವೇಗೌಡರು ಸ್ವಾಗತಿಸಿ, ಪ್ರಧಾನಿಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಸಹಕಾರ ಸಚಿವಾಲಯವನ್ನು ಕೃಷಿ ಸಚಿವಾಲಯದಿಂದ ಬೇರ್ಪಡಿಸಿ, ಪ್ರತ್ಯೇಕವಾಗಿ ಸಹಕಾರ ಸಚಿವಾಲಯವನ್ನು ಜಾರಿಗೆ ತಂದಿರುವುದು ಸಂತೋಷವೆನಿಸಿದೆ.  ನನ್ನಂತೆ ಭಾರತದ ಕೋಟ್ಯಂತರ ಸಹಕಾರಿಗಳಿಗೂ ಸಂತಸವೆನಿಸಿದೆ.  
ಈ ಕ್ರಮದಿಂದ ಭಾರತ ದೇಶದ ಸಹಕಾರ ಕ್ಷೇತ್ರ ಸರ್ವತೋಮುಖ ಅಭಿವೃದ್ಧಿ ಹೊಂದಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಹಕಾರಿಗಳ ಪ್ರಶಂಸೆಗೆ, ಗೌರವಕ್ಕೆ ಪಾತ್ರರಾಗಿರುತ್ತಾರೆ.  ಪ್ರಧಾನಿಯವರ ಈ ಕ್ರಮದಿಂದ ರಾಷ್ಟçದ ಸಹಕಾರಿ ಚಳವಳಿ ವ್ಯಾಪಕವಾಗಿ ಬೆಳೆಯುವ ನಿರೀಕ್ಷಿತ ಗುರಿ ಮುಟ್ಟುವ ಹಾದಿಯಲ್ಲಿದೆ.  
ದೇಶದಲ್ಲಿ 8 ಲಕ್ಷ ಸಹಕಾರ ಸಂಘಗಳು, 30 ಕೋಟಿ ಸದಸ್ಯರು ಇರುವ ರಾಷ್ಟçದ ಸಹಕಾರಿ ವ್ಯವಸ್ಥೆಗೆ ಕೇಂದ್ರ ಸರ್ಕಾರದಲ್ಲಿ ಸಚಿವರ ನೇಮಕವಾಗಿ ಸಹಕಾರಿ ವ್ಯವಸ್ಥೆಯ ಮೂಲಕ ಸಮಾಜದಲ್ಲಿನ ಆರ್ಥಿಕವಾಗಿ ಅಬಲರಾದವರ ನೆರವಾಗಿ ದಾವಿಸಬೇಕಾದ ಅಗತ್ಯವಿದೆ.  ಸಹಕಾರಿ ವ್ಯವಸ್ಥೆಗೆ ಕೇಂದ್ರದಲ್ಲೂ ಹಲವಾರು ಕಾನೂನುಗಳು, ನಿಯಮಗಳು, ತಿದ್ದುಪಡಿಗಳು ಆಗಿರುವ ಹಾಗೂ ಆಗಬೇಕಾಗಿರುವ ಸಂದರ್ಭದಲ್ಲಿ ಸಹಕಾರ ಸಚಿವಾಲಯ ಪ್ರಮುಖ ಪಾತ್ರವನ್ನು ವಹಿಸಬಲ್ಲದು.  ಇದು ಸಹಕಾರಿ ಚಳವಳಿಗೆ ಸಂಬAಧಿಸಿದ 97ನೇ ಸಂವಿಧಾನ ತಿದ್ದುಪಡಿಯ ಆಶಯವನ್ನು ಈಡೇರಿಸಿದೆ ಎಂದು ಜಿ.ಟಿ. ದೇವೇಗೌಡರು ಹೇಳಿದ್ದಾರೆ. 
ಕೇಂದ್ರ ಸಹಕಾರ ಸಚಿವಾಲಯ, ರಾಜ್ಯ ಸಹಕಾರ ಸಚಿವರುಗಳೊಂದಿಗೆ ಸಮಾಲೊಚನೆ ನಡೆಸಿ, ಅಗತ್ಯ ಕಾನೂನುಗಳನ್ನು ರಚಿಸಲು, ನೂತನ ಯೋಜನೆಗಳನ್ನು ರೂಪಿಸಲು, ಸಹಕಾರಿ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತರಲು ಕೇಂದ್ರ ಸರ್ಕಾರ ರಚಿಸಲಿರುವ ಸಚಿವಾಲಯ ನೆರವಾಗಲಿದೆ.  ಇದರ ಜೊತೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿ ಸಹಕಾರ ಚಳವಳಿ ಏಕರೂಪವಾಗಿ ಅಭಿವೃದ್ಧಿ ಹೊಂದಲು ನೂತನ ಸಚಿವಾಲಯ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತದೆ ಎಂಬ ಆಶಯದೊಂದಿಗೆ ಕರ್ನಾಟಕ ರಾಜ್ಯದ ಎಲ್ಲಾ ಸಹಕಾರಿಗಳ ಪರವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷನಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಜಿ.ಟಿ. ದೇವೇಗೌಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Post a Comment

0 Comments

Ad Code

Responsive Advertisement