Ticker

6/recent/ticker-posts

Ad Code

Responsive Advertisement

ಕರ್ನಾಟಕದ ವಿನಾಶದಂಚಿನ ಸಸ್ಯ ಹಾಗೂ ಪ್ರಾಣಿ ಸಂಕುಲಗಳು

ಸಂರಕ್ಷಣೆ ಹಾಗು ಸಂವರ್ಧನೆಗೆ ಆದ್ಯತೆ ನೀಡಬೇಕಾದ ನಾಡಿನ ಜೀವವೈವಿಧ್ಯ

ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ಇರುವ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡದಿಂದಾಗಿ,   ನಾಡಿನ ಅಪಾರ ಬಗೆಯ ಸಸ್ಯ ಹಾಗೂ ಪ್ರಾಣಿ ಪ್ರಬೇಧಗಳು ಕಣ್ಮರೆಯಾಗುತ್ತಿವೆ. ಇದು ಭವಿಷ್ಯದ ನೀರು, ಆಹಾರ, ಪರಿಸರ ಸುರಕ್ಷತೆ ಇತ್ಯಾದಿಗಳ ಸುರಕ್ಷತೆಗೆ ಮಾರಕವಾಗಬಲ್ಲ ಸಂಗತಿ. ಹೀಗಾಗಿ, “ಜೀವವೈವಿಧ್ಯಕಾನೂನು”ಅಡಿ, ಈ ಬಗೆಯ ವಿನಾಶದಂಚಿಗೆ ತಲುಪಿರುವ ಪ್ರಬೇಧಗಳನ್ನು ಕಾಲಕಾಲಕ್ಕೆ ಗುರುತಿಸಿ, ಸಂರಕ್ಷಿಸುವ ಜವಾಬ್ದಾರಿಯಿದೆ. ಈ ಹಿನ್ನೆಲೆಯಲ್ಲಿ, “ಕರ್ನಾಟಕ ಜೀವವೈವಿಧ್ಯ ಮಂಡಳಿ” ಯು ರಾಜ್ಯದ ವಿನಾಶದಂಚಿನ ಸಸ್ಯ ಹಾಗೂ ಪ್ರಾಣಿ ಪ್ರಬೇಧಗಳ ಪಟ್ಟಿಯನ್ನು ತಜ್ನ ರಸಮಿತಿಯ ಮೂಲಕ ಪರಿಷ್ಕರಿಸಿದೆ. ಈ ವರದಿಯ ಮುಖ್ಯ ಅಂಶಗಳು ಹೀಗಿವೆ.
ಕರ್ನಾಟಕದ ವಿನಾಶದಂಚಿನ ಸಸ್ಯ ಪ್ರಬೇಧಗಳು: ಗಂಭೀರವಾಗಿ ವಿನಾಶದಂಚಿಗೆ ಜಾರಿದವು (Critically Endangered-CR),     ವಿನಾಶದಂಚಿನವು  (Endangered-EN)  ಹಾಗೂ ವಿನಾಶದೆಡೆಗೆ ಸಾಗುತ್ತಿರುವ  (Vulnerable-VU) ಈ ಮೂರು ಗುಂಪುಗಳ ಪ್ರಭೇಧಗಳನ್ನು ಒಟ್ಟಾಗಿ “ಅಪಾಯದಂಚಿನಲ್ಲಿರುವ ಸಸ್ಯವರ್ಗ“ (Threatened  Categories) ಎಂದು ಕರೆಯಲಾಗಿದೆ.  ಇವುಗಳಲ್ಲಿ, “ಗಂಭೀರವಾಗಿ ವಿನಾಶದಂಚಿಗೆ ಜಾರಿದ”  (Critically Endangered-CR) ಹೂಬಿಡುವ ಸಸ್ಯ ಪ್ರಬೇಧಗಳನ್ನು “ಜೀವವೈವಿಧ್ಯ ಕಾಯ್ದೆ, 2002” ರ ಸೆಕ್ಷನ್ 38 ರಅನ್ವಯ, “ಕರ್ನಾಟಕದ ವಿನಾಶದಂಚಿನ ಸಸ್ಯಪ್ರಬೇಧ” ಗಳ ಪಟ್ಟಿಗೆ ಸೇರಿಸಲು ತಜ್ನ ರಸಮಿತಿಯು ಕರ್ನಾಟಕ ಜೀವವೈವಿಧ್ಯ ಮಂಡಳಿಗೆ ಶಿಫಾರಸ್ಸು ಮಾಡಿದೆ. ಸೀತಾ ಅಶೋಕ, ಮರದರಶಿನ, ಭೂತಾಳಗಿಡ, ಎಣ್ಣೆಮರ,  ನೀರನೇರಳೆ ಇತ್ಯಾದಿ ಪ್ರಬೇಧಗಳು ಸೇರಿದಂತೆ, ಒಟ್ಟು 16  ಪ್ರಬೇಧಗಳಿವೆ.


ಇದರ ಜೊತೆಗೆ, ವ್ಯಾಪಕವಾಗಿ ವಾಣಿಜ್ಯಕವಾಗಿ ಬಳಸುತ್ತಿರುವ ಪ್ರಬೇಧಗಳು (07), ಭವಿಷ್ಯದಲ್ಲಿ ವಿನಾಶವಾಗಲಿರುವ ಹೂಬಿಡುವ ಸಸ್ಯ ಪ್ರಬೇಧಗಳು (94), ಬಹಳದ ಸೀಮಿತ ಹರವಿರುವ ಹೂಬಿಡುವ ಸಸ್ಯ ಪ್ರಬೇಧಗಳು (11,ಕರ್ನಾಟಕದಲ್ಲಿ ಮಾತ್ರ ಸಿಗುವ ಹೂಬಿಡುವ ಸಸ್ಯ ಪ್ರಭೇಧಗಳು (106, ರಾಜ್ಯ ಹಾಗೂ ನೆರೆಹೊರೆಯ ಪ್ರದೇಶದಲ್ಲಿ ಮಾತ್ರ ಕಾಣಸಿಗುವ ಪ್ರಬೇಧಗಳನ್ನೂ ಸಹ (666) ಗುರುತಿಸಲಾಗಿದೆ.  
ಕರ್ನಾಟಕದ ವಿನಾಶದಂಚಿನ ಸಸ್ತನಿಗಳು: ತಜ್ನರು ನೀಡಿರುವ ವರದಿಯಂತೆ, ರಾಜ್ಯದ ಈ ಕೆಳಗಿನ ಸಸ್ತನಿಗಳು ವಿನಾಶದಂಚಿಗೆ ತಲುಪಿವೆ. ಪುನಗಿನಬೆಕ್ಕು, ಕಾಡುಪಾಪ, ನೀರಾನೆ, ಬಾವಲಿ, ತಿಮಿಂಗಲು ಪ್ರಬೇಧಗಳು ಸೇರಿದಂತೆ, ಒಟ್ಟು  40 ಸಸ್ತನಿಗಳನ್ನು ವಿನಾಶದಂಚಿಗೆ ತಲುಪಿದವು ಎಂದು ಗುರುತಿಸಲಾಗಿದೆ.


ಇವುಗಳ ಜೊತೆಗೆ, ಕಶೇರುಕ ಗುಂಪಿನ ಇತರ ಪ್ರಾಣಿವರ್ಗಗಳಲ್ಲಿನ ವಿನಾಶದಂಚಿನ ಪ್ರಬೇಧಗಳನ್ನೂ ಸಹ ತಜ್ನ ಸಮಿತಿಯು ಸೂಚಿಸಿದೆ. ಅವೆಂದರೆ:  ಅಪಾಯದಂಚಿನಲ್ಲಿರುವ ಪಕ್ಷಿ ಪ್ರಬೇಧಗಳು (23), ಅಪಾಯದಂಚಿನಲ್ಲಿರುವ ಸರಿಸೄಪ ಪ್ರಬೇಧಗಳು (26, ಅಪಾಯದಂಚಿನಲ್ಲಿರುವ ಉಭಯವಾಸಿ ಪ್ರಬೇಧಗಳು (21,ಅಪಾಯದಂಚಿನಲ್ಲಿರುವ ಸಿಹಿನೀರು ಮೀನು ಪ್ರಬೇಧಗಳು (53, ಅಪಾಯ ದಂಚಿನಲ್ಲಿರುವ ಸಮುದ್ರ ಮೀನಿನ ಪ್ರಭೇಧಗಳು (35) ಇತ್ಯಾದಿ.  
ಇವುಗಳಪ್ರಾಮುಖ್ಯತೆಯೇನು?
ಮುಂಬರುವ ದಿನಗಳಲ್ಲಿ, ವಿನಾಶದಂಚಿನ ಹೂಬಿಡುವ ಸಸ್ಯ ಪ್ರಬೇಧಗಳು ಹಾಗೂ ಕಶೇರುಕ ಪ್ರಾಣಿ ಪ್ರಬೇಧಗಳ ಈ ಪರಿಷ್ಕೃತಯಾದಿಯು, ರಾಜ್ಯದ ಎಲ್ಲ ಸಂರಕ್ಷಣಾ ಯೋಜನೆಗಳಲ್ಲಿ ಆದ್ಯತೆ ಪಡೆಯಬೇಕಿದೆ. ಅಂತಹ ಕೆಲವು ಪ್ರಮುಖ ಮಾರ್ಗಗಳೆಂದರೆ:  
• ಕರ್ನಾಟಕ ಜೀವವೈವಿದ್ಯ ಮಂಡಳಿಯು ಕೈಗೊಳ್ಳುವ ಎಲ್ಲ ಬಗೆಯ ಸಂರಕ್ಷಣೆ, ಸಂವರ್ಧನೆ ಹಾಗೂ ಬಳಕೆಯ ನ್ಯಾಯಯುತ ಹಂಚಿಕೆ ಕುರಿತ ಕಾರ್ಯಯೋಜನೆಗಳು.  
• ಜೀವವೈವಿಧ್ಯ ಸಂರಕ್ಷಣೆ ಕಾನೂನಿನ ಅನ್ವಯ ರಾಜ್ಯಾದ್ಯಂತ ರಚಿಸಿರುವ “ಜೀವವೈವಿಧ್ಯ ನಿರ್ವಹಣಾ ಸಮಿತಿಗಳು” (ಗ್ರಾಮ ಪಂಚಾಯತ, ತಾಲ್ಲುಕು ಪಂಚಾಯತ, ಜಿಲ್ಲಾ ಪಂಚಾಯತ ಹಾಗೂ ನಗರಸಭೆಗಳಲ್ಲಿ ನಸಮಿತಿಗಳು), ತಮ್ಮ ವ್ಯಾಪ್ತಿಯ ಜನತಾ ಜೀವವೈವಿಧ್ಯ ದಾಖಲಾತಿಗಳ ಪರಿಷ್ಕರಣೆ ಹಾಗೂ ಅದರ ಆಧಾರದಲ್ಲಿ ಕೈಗೊಳ್ಳುವ ಎಲ್ಲ ಸಂರಕ್ಷಣಾ ಕಾರ್ಯಕ್ರಮಗಳು.
• ಅರಣ್ಯ ಇಲಾಖೆ, ವನ್ಯಜೀವಿ ವಿಭಾಗ, ಕೃಷಿ ಇಲಾಖೆ, ತೊಟಗಾರಿಕಾ ಇಲಾಖೆ, ಮೀನುಗಾರಿಕಾ ಇಲಾಖೆ- ಇವುಗಳ ವ್ಯಾಪ್ತಿಯಲ್ಲಿನ ವಿವಿಧ ಸಂರಕ್ಷಣೆ ಹಾಗೂ ಅಭಿವೃದ್ಧಿ ಯೋಜನೆಗಳು.  
• ಅರಣ್ಯ ಇಲಾಖೆಯು ನಿರ್ವಹಿಸುವ ಗಿಡಗಳ ನರ್ಸರಿಯಲ್ಲಿ ಹಾಗೂ ವನೀಕರಣ ಯೋಜನೆಗಳು.
• ವಿಶ್ವವಿದ್ಯಾನಿಲಯ ಹಾಗೂ ಸಂಶೋಧನಾ ಸಂಸ್ಥೆಗಳ ಸಂಶೋಧನಾ ಕಾರ್ಯಕ್ರಮಗಳು.
• ಶಾಲೆ ಹಾಗೂ ಕಾಲೇಜು ಮಟ್ಟದ ಪರಿಸರ ಸಂರಕ್ಷಣೆ ಕುರಿತ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು.

Post a Comment

0 Comments

Ad Code

Responsive Advertisement