Ticker

6/recent/ticker-posts

Ad Code

Responsive Advertisement

ಶ್ರೀ ವಿಠ್ಠಲ ಪಾಂಡುರoಗ ರುಕ್ಮಿಣಿ ಮಂದಿರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು

ಬಳ್ಳಾರಿ,ಜು.21-ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ನಗರದ ವಿವಿಧೆಡೆ ಇರುವ ಶ್ರೀ ವಿಠ್ಠಲ ಪಾಂಡುರoಗ ರುಕ್ಮಿಣಿ ಮಂದಿರಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾಗಿ ಜರುಗಿದವು.ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ,ಮಾಸ್ಕ್, ಸ್ಯಾನಿಟೈಸರ್ ಬಳಸಿ ಮಂದಿರಕ್ಕೆ ಭೇಟಿ ನೀಡಿದ ಭಕ್ತ ವೃಂದದವರು ಹಣ್ಣು, ಕಾಯಿ, ದೀಪ, ಧೂಪ ಸಮರ್ಪಿಸಿ ಭಕ್ತಿಯನ್ನು ಸಮರ್ಪಿಸಿದರು. 


ಇಂದು ದ್ವಾದಶಿಯಾದ್ದರಿಂದ ಪ್ರಾತಃಕಾಲದಿಂದಲೇ ಭಕ್ತರು ವಿಠ್ಠಲನಿಗೆ ಪ್ರಿಯವಾದ ಭಾಜಿ-ಭಕ್ರಿ ನೈವೇದ್ಯ ಸಲ್ಲಿಸಿ ಏಕಾದಶಿ-ದ್ವಾದಶಿ ಪರ್ವವನ್ನು ಉಚ್ಛ್ರಾಯಗೊಳಿಸಿದರು.ಮಹಾನಗರ ಪಾಲಿಕೆ ವ್ಯಾಪ್ತಿಯ 36 ನೇ ವಾರ್ಡ್ ನ ಎಂ.ರಾಜೇಶ್ವರಿ ನಗರದಲ್ಲೂ ಕೂಡ ಶ್ರೀ ರುಕ್ಮಿಣಿ ವಿಠ್ಠಲ ಮಂದಿರದಲ್ಲಿ ಪಾಂಡುರAಗನಿಗೆ ಜಲಾಭಿಷೇಕ, ಶತದಳ ತುಳಸಿ ಅರ್ಚನೆ, ರಖುಮಾಯಿ ಅಮ್ಮನಿಗೆ ಕುಂಕುಮಾರ್ಚನೆ, ತುಳಸಿ ಅಲಂಕಾರ, ಪೂಜೆ, ಭಜನೆ ಮತ್ತು ಮಹಾಮಂಗಳಾರತಿ ಜರುಗಿದವು.ನಿನ್ನೆ ಸಂಜೆ ಶ್ರೀ ವಿಠ್ಠಲ ಗೋಂಧಳಿ ಸಮಾಜದ ಸಂತರು ಹಾಗೂ ಭಕ್ತರಿಂದ ಸಾಮೂಹಿಕ ಭಜನೆ, ಸಂಕೀರ್ತನೆಗಳು ಜರುಗಿದವು. ವಿಪ್ರ ಸಮುದಾಯದ ಸುಮಂಗಲಿಯರು ಸಹ ಶ್ರೀ ಪುರಂದರ ದಾಸರು, ಕನಕದಾದರು, ವಿಜಯದಾದರು ಹಾಗೂ ಶ್ರೀ ಜಗನ್ನಾಥ ದಾಸರ ಕೀರ್ತನೆಗಳನ್ನು ಹಾಡಿದರು.

ಇಂದು ದ್ವಾದಶಿ ಪ್ರಯುಕ್ತ ಭಕ್ತರಿಗೆ ಪ್ರಸಾದ ಹಮ್ಮಿಕೊಳ್ಳಲಾಗಿತ್ತು. ಮಂದಿರದ ಪ್ರಧಾನ ಪುರೋಹಿತರಾದ ಬೇವಿನಹಾಳ್ ಕರಣಂ ವಿಜಯರಾವ್ ಅವರು ಪಂಢರಾಪುರದ ಸನಾತನ ಸತ್ಸಂಪ್ರದಾಯದAತೆ  ಧಾರ್ಮಿಕ ಕಾರ್ಯಕ್ರಮಗಳನ್ನು  ಭಕ್ತರಿಗಾಗಿ ನೆರವೇರಿಸಿಕೊಟ್ಟರು.ವಿಠ್ಠಲ ಗೋಂಧಳಿ ಸಮಾಜದ ಸಂತರಾದ ಡಾ.ಎಸ್.ಎನ್.ಶಾಸ್ತ್ರಿ, ವಿ.ಹೆಚ್.ಲಕ್ಷ್ಮಣರಾವ್, ವಿ.ನಲ್ಲಾರೆಡ್ಡಿ, ಎಸ್.ವಿ.ಶಾಸ್ತ್ರಿ ಮತ್ತು ಪಾಂಡುರAಗ ವಾಕೋಡೆ , ಶ್ರೀಧರ್ ಸಿಂಧೆ, ವಿ.ರಾಘವೇಂದ್ರ ಮತ್ತು ಅಪಾರ ಭಕ್ತವೃಂದದವರು ಇದ್ದರು. 


Post a Comment

0 Comments

Ad Code

Responsive Advertisement