Ticker

6/recent/ticker-posts

Ad Code

Responsive Advertisement

600 ಅಂಕ ಪಡೆದ ದ್ವಿತೀಯ ಪ.ಪೂ. ವಿದ್ಯಾರ್ಥಿನಿ ಎಂ.ವoದನ

ಬಳ್ಳಾರಿ ಜುಲೈ 21.ನಗರದ ಪ್ರತಿಷ್ಠಿತ ವೀ.ವಿ. ಸಂಘದ ಸ್ವತಂತ್ರ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಎಂ.ವoದನ ದ್ವಿತೀಯ ಪ.ಪೂ. ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಪಡೆದು ದಾಖಲೆ ನಿರ್ಮಿಸಿ, ಕಾಲೇಜಿಗೆ ಮತ್ತು ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಕೀರ್ತಿಯನ್ನು ತಂದಿದ್ದಾರೆ. 

ಬಳ್ಳಾರಿ ತಾಲೂಕಿನ ಕೆ.ವೀರಾಪುರ ಗ್ರಾಮದ ರೈತನ ಮಗಳ ಈ ಸಾಧನೆ ನಿಜಕ್ಕೂ ಪ್ರಶಂಸನೀಯ. ಇವರ ಈ ಯಶಸ್ಸಿಗೆ ಕಾಲೇಜಿನ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ. 

ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಏಳುಬೆಂಚಿ ರಾಜಶೇಖರ, ನಿಕಟಪೂರ್ವ ಅಧ್ಯಕ್ಷರಾದ ಡಾ.ಎಸ್.ಎಫ್. ಗಡ್ಡಿ ನಿಕಟಪೂರ್ವ ಆಡಳಿತ ಮಂಡಳಿ ಸದಸ್ಯರಾದ ಕೋಳೂರು ವೆಂಕಟೇಶ ಗೌಡರು, ಡಾ. ಎಸ್.ಬಿ. ರಾಜಶೇಖರ, ಹೆಚ್.ಕೆ. ಗೌರಿಶಂಕರ ಮತ್ತು ವೀ.ವಿ. ಸಂಘದ ಅಧ್ಯಕ್ಷರಾದ ಗುರುಸಿದ್ಧ ಸ್ವಾಮಿ, ಉಪಧ್ಯಕ್ಷರಾದ ಅಲ್ಲಂ ಚನ್ನಪ್ಪ, ಕಾರ್ಯದರ್ಶಿಯಾದ ಬಿ.ವಿ. ಬಸವರಾಜ, ಜಂಟಿ ಕಾರ್ಯದರ್ಶಿಯಾದ ದರೂರು ಶಾಂತನ ಗೌಡರು, ಕೋಶಾಧಿಕಾರಿಯಾದ ಗೋನಾಳು ರಾಜಶೇಖರ ಗೌಡರು ವಿದ್ಯಾರ್ಥಿನಿ ವಂದನರನ್ನು ಅಭಿನಂದನಿಸಿದ್ದಾರೆ.


Post a Comment

0 Comments

Ad Code

Responsive Advertisement