ಕರ್ನಾಟಕ ಸರ್ಕಾರದ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ವತಿಯಿಂದ ಅರ್ಚಕರು ~ ಪುರೋಹಿತರು ~ ಅಡುಗೆ ಕೆಲಸಗಾರರು ~ ಶ್ರಮಿಕರು~ ಹಾಗು ಎಲ್ಲಾ ವರ್ಗದ ಬಡವರಿಗೆ ದಿನಸಿ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮವನ್ನು ರಾಜಾಜಿನಗರ ಬ್ರಾಹ್ಮಣ ಸಭಾ ( ರಿ) ಮತ್ತು ವಿಪ್ರ ಸೇವಾ ಸಂಘ , ಬೆo ಉತ್ತರ ಸಂಘದ ಸಹಯೋಗದೊಂದಿಗೆ ಇಂದು ದಿನಾಂಕ 21.07.2021 ರ ಬುಧವಾರ ರಾಜಾಜಿನಗರದ ಶ್ರೀ ಶಂಕರ ಸೇವಾ ಸಮಿತಿ ಆವರಣದಲ್ಲಿ ನಡೆಸಲಾಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಶ್ರೀ ಅಶೋಕ್ ಹಾರನಹಳ್ಳಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮಹಾಸಭಾ ಅಧ್ಯಕ್ಷರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಲಾಯಿತು. ಮಹಾಸಭಾ ಉಪಾಧ್ಯಕ್ಷ ಹಾಗು ರಾಜಾಜಿನಗರ ಬ್ರಾಹ್ಮಣ ಸಭಾ ಅಧ್ಯಕ್ಷರಾದ ಶ್ರೀ ಆರ್ ಲಕ್ಷ್ಮೀಕಾಂತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಎಕೆಬಿಎಂಎಸ್ ಉಪಾಧ್ಯಕ್ಷರುಗಳಾದ ಶ್ರೀಮತಿ ಮಾಲಿನಿ, ಶ್ರೀ ಕೆ ಮೋಹನ್ ಎಕೆಬಿಎಂಎಸ್ ಮಾಜಿ ಪ್ರಧಾನ ಕಾರ್ಯದರ್ಶಿ ಶ್ರೀ ಲಕ್ಷ್ಮೀನಾರಾಯಣ ಭಟ್ಟ , ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ರಾದ ಶ್ರೀ ರಾಘವೇಂದ್ರ ಭಟ್ ಅಖಿಲ ಕರ್ನಾಟಕ ಮಾಧ್ವ ಮಹಾಸಭಾದ ಅಧ್ಯಕ್ಷರಾದ ಶ್ರೀ ಮುರುಳೀಧರ್ ಖಜಾಂಚಿ ಶ್ರೀ ಕೆ ವಿ ರಾಮಚಂದ್ರ ಪಧಾಧಿಕಾರಿಗಳಾದ ಶ್ರೀ ಅಶ್ವಥ್ ನಾರಾಯಣ ಅವರು ಹಾಜರಿದ್ದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸರಕಾರದ ವತಿಯಿಂದ ಈ ದಿನಸಿ ಕಿಟ್ ಅನ್ನು ಪಡೆಯಲು ಕಾರಣರಾದ ಮಹಾಸಭಾ ಸಂ ಕಾರ್ಯದರ್ಶಿ ಶ್ರೀ ಕೆ ಎನ್ ಸತ್ಯಮೂರ್ತಿ ಅವರನ್ನು ಸನ್ಮಾನಿಸಲಾಯಿತು.
ರಾಜಾಜಿನಗರ ಬ್ರಾಹ್ಮಣ ಸಭಾ ಕಾರ್ಯದರ್ಶಿ ಶ್ರೀ ಕೆ ರಾಮಪ್ರಸಾದ್ ವಂದಿಸಿದರು. ಕಾರ್ಯಕ್ರಮದಲ್ಲಿ 300 ಜನರಿಗೆ ದಿನಸಿ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದ ಸಂಚಾಲಕರಾದ ಶ್ರೀ ಹೆಚ್ ಎಂ ಹರಿಪ್ರಸಾದ್ ನಿರೂಪಿಸಿದರು.






0 Comments