Ticker

6/recent/ticker-posts

Ad Code

Responsive Advertisement

ಅಖಿಲ ಭಾರತ ಪ್ರತಿರೋಧ ಸಪ್ತಾಹ ಅಂಗವಾಗಿ ಸಹಿ ಸಂಗ್ರಹ ಚಳುವಳಿ

ಬಳ್ಳಾರಿ ಜುಲೈ 11. RKS (AIKKMS ರೈತ ಸಂಘಟನೆ ವತಿಯಿಂದ ಜುಲೈ 11-17ರವರಗೆ ಅಖಿಲ ಭಾರತ ಪ್ರತಿರೋಧ  ಅಂಗವಾಗಿ ಕೋಳೂರು ಗ್ರಾಮದಲ್ಲಿ ಎಲ್ಲಾ ರೈತಾಪಿ ಜನಗಳಿಂದ ಸಹಿ ಸಂಗ್ರಹ ಚಳುವಳಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಕೊಳೂರು ಗ್ರಾಮದ ಹಿರಿಯ ರೈತರಾದ ಕಾಳಿಂಗ ರಾಮನಗೌಡ ಅವರು ಸಹಿ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ RKS (AIKKMS ಜಿಲ್ಲಾ ಕಾರ್ಯದರ್ಶಿಗಳಾದ ಇ.ಹನುಮಂತಪ್ಪ ಅವರು ಮಾತನಾಡುತ್ತಾ ಕೇಂದ್ರ ಬಿ.ಜೆ.ಪಿ. ಸರ್ಕಾರವು ಜಾರಿಗೆ ತಂದಿರುವ ಅಗತ್ಯ ವಸ್ತುಗಳ ಸರಕು ಸೇವಾ ಕಾಯ್ದೆ (2020), ಎಪಿಎಂಸಿ ತಿದ್ದುಪಡಿ ಕಾಯ್ದೆ (2020), ಗುತ್ತಿಗೆ ಕೃಷಿ ಕಾಯ್ದೆ (2020) ಹಾಗೂ ವಿದ್ಯುತ್ ಬಿಲ್ (2020)ಗಳು ಸಂಪೂರ್ಣವಾಗಿ ರೈತ ವಿರೋಧಿ ಹಾಗೂ ಕಾರ್ಪೋರೇಟ್ ಪರವಾಗಿವೆ.

 ಈ ಕಾನೂನುಗಳನ್ನು ವಿರೋಧಿಸಿ ಲಕ್ಷೋಪಲಕ್ಷ ರೈತರು ದೆಹಲಿಯ ವಿವಿಧ ಗಡಿಗಳಲ್ಲಿ ಕಳೆದ 7 ತಿಂಗಳುಗಳಿAದ ತಮ್ಮ ಹೋರಾಟವನ್ನು ಮುಂದುವರೆಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರವು ಈ ಹೋರಾಟವನ್ನು ದಾರಿ ತಪ್ಪಿಸಲು ಮತ್ತು ಹತ್ತಿಕ್ಕಲು ರೈತರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳನ್ನು ಮತ್ತು ದಬ್ಬಾಳಿಕೆಗಳನ್ನು ನಡೆಸಿತು. 

ಈ ಎಲ್ಲಾ ಆಕ್ರಮಣಗಳನ್ನು ರೈತರು ವಿಫಲಗೊಳಿಸಿದರು. ಹೀಗೆ ರೈತರು ಧೃತಿಗೆಡದೆ ಧೈರ್ಯದಿಂದ “ನಾವು ಹೋರಾಡುತ್ತೇವೆ ಮತ್ತು ನಾವು ಗೆಲ್ಲುತ್ತೇವೆ” ಎಂಬ ಘೋಷಣೆಯನ್ನು ಕೂಗುತ್ತಾ ಹೋರಾಟದ ಕಣದಲ್ಲಿದ್ದಾರೆ. ಇಲ್ಲಿಯವರೆಗೆ ಸುಮಾರು 600 ಕ್ಕೂ ಹೆಚ್ಚು ಜನ ರೈತರು ಹೋರಾಟದ ಸ್ಥಳದಲ್ಲೇ ಅಸುನೀಗಿದ್ದಾರೆ. ತಮ್ಮವರನ್ನು ಕಳೆದುಕೊಂಡ ಈ ರೈತರು ದುಃಖದಿಂದ ಕುಗ್ಗಿಹೋಗಲಿಲ್ಲ. ಬದಲಿಗೆ ಇನ್ನಷ್ಟು ಗಟ್ಟಿಗೊಳ್ಳುತ್ತಾ ಮಡಿದವರಿಂದ ಪ್ರೇರಣೆ ಪಡೆದು ಮುನ್ನಡೆಯುತ್ತಿದ್ದಾರೆ. ಭಾರತದ ರೈತ ಚಳುವಳಿಯ ಇತಿಹಾಸದಲ್ಲಿಯೇ ಇಂತಹ ಹೋರಾಟ ನಡೆದಿಲ್ಲ. ಅಭೂತಪೂರ್ವ ರೈತರ ಹೋರಾಟದಲ್ಲಿ ಭಾಗವಹಿಸಬೇಕೆಂದು ಕೋಳೂರಿನ ಜನತೆಗೆ ಕರೆ ನೀಡಿದರು.

RKS (AIKKMS ಜಿಲ್ಲಾ ಮುಖಂಡರಾದ ಗೋವಿಂದ್ ಅವರು ಮಾತನಾಡುತ್ತಾ ರೈತ-ಕೃಷಿಕಾರ್ಮಿಕರ ಸಂಘಟನೆ(RKS)ನ ಅಖಿಲ ಭಾರತ ಸಮಿತಿಯಾದ ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘಟನೆ (AIKKMS)ವು ದಿನಾಂಕ 11 ರಿಂದ 17 ಜುಲೈ, 2021 ರ ವರೆಗೆ “ಅಖಿಲ ಭಾರತ ಪ್ರತಿರೋಧ ಸಪ್ತಾಹ ದಿನ”ವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲೆಡೆಯೂ ರೈತರಿಂದ ಸಹಿಗಳನ್ನು ಸಂಗ್ರಹಿಸಿ ಆ ಸಹಿಗಳೊಂದಿಗೆ ದಿನಾಂಕ :17.07.2021 ರಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಕಛೇರಿ ಎದರು ಪ್ರತಿಭಟನೆ ಮಾಡಿ ಮಾನ್ಯ ಜಿಲ್ಲಾಧಿಕಾರಿಗಳ ಮುಖಾಂತರ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. 

ಈ ಚಳುವಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಭಾಗವಹಿಸಿ ನಿಮ್ಮ ಬೆಂಬಲ ನೀಡಬೇಕೆಂದು ಕೇಳಿಕೊಂಡರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು RKS (AIKKMSಜಿಲ್ಲಾ ಸಮಿತಿ ಸದಸ್ಯರಾದ ಪಂಪಾಪತಿ ಅವರು ವಹಿಸಿದ್ದರು. ಈ ಸಂದರ್ಭದಲ್ಲಿ RKS (AIKKMSಜಿಲ್ಲಾ ಕಾರ್ಯದರ್ಶಿ ಇ.ಹನುಮಂತಪ್ಪ, ಸದಸ್ಯರಾದ ಗೋವಿಂದ್, ಬಸಣ್ಣ, ಪಮಪಾಪತಿ, ಖಾಸಿಮ್ ಸಬ್ ಮತ್ತು ಊರಿನ ಗ್ರಾಮಾಸ್ತರಾದ ಶೇಖಣ್ಣ, ಅನಂದಪ್ಪ, ಗಾದಿಲಿಂಗ, ಚೆನ್ನಪ್ಪ, ಮೌಲಾಸಾಬ್ ಮತ್ತಿತರರು ಭಾಗವಹಿಸಿದ್ದರು.    

Bellary - Varthajala


Post a Comment

0 Comments

Ad Code

Responsive Advertisement