Ticker

6/recent/ticker-posts

Ad Code

Responsive Advertisement

PANCHAMUKHI ANJANEYA SWAMY TEMPLE, BELLARY ಶ್ರೀ ಪಂಚಮುಖಿ ಆಂಜಿನೇಯಸ್ವಾಮಿ - ಶ್ರೀ ಶನೇಶ್ವರ ವಿಗ್ರಹ ಪ್ರತಿಷ್ಟಾಪನಾ

ಬಳ್ಳಾರಿ.ಜು.11: ನಗರದ ಸಿರುಗುಪ್ಪ ರಸ್ತೆಯ ಗಣೇಶ್‌ನಗರದ ಶ್ರೀ ಲಕ್ಷಿö್ಮ ನರಸಿಂಹ ಯಂತ್ರೋದ್ಧಾರಕ ದೇವಸ್ಥಾನದಲ್ಲಿ ಶ್ರೀ ಪಂಚಮುಖಿ ಆಂಜಿನೇಯಸ್ವಾಮಿ ಮತ್ತು ಶ್ರೀ ಶನೇಶ್ವರ ವಿಗ್ರಹ ಪ್ರತಿಷ್ಟಾಪನಾ  ಕಾರ್ಯಕ್ರಮವನ್ನು ಭಾನುವಾರ ಮುಂಜಾನೆ 9 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು ಎಂದು ದೇವಸ್ಥಾನದ ಅರ್ಚಕರಾದ ಪವನ್ ಆಚಾರಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಇದರ ಪ್ರಯುಕ್ತ ಶ್ರೀ ರಾಘವೇಂದ್ರಸ್ವಾಮಿ ಯಂತ್ರೋದ್ಧಾರಕ ಅಲಂಕಾರ ಪೂಜೆ, ಮಹಾಗಣಪತಿ ನವಗ್ರಹ ಪೂಜೆ, ವಾಸ್ತು ಧನ್ವಂತರಿ ಮೃತ್ಯುಂಜಯ ಹೋಮ ಪೂಜೆಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ಬಲರಾಮ್ ಆಚಾರಿ ಮತ್ತು ಬೃಂದಾ ಅವರು ನಿರ್ವಹಿಸಿದರು. 

ನಂತರ ಕಳಸ ಪ್ರತಿಷ್ಟಾಪನ ಮೂಲ ವಿಗ್ರಹಗಳಿಗೆ ವಿಶೇಷ ಅಲಂಕಾರಗಳೊ0ದಿಗೆ ಪೂಜೆಯನ್ನು ನೆರವೇರಿಸದರು. ಈ ಸಂದರ್ಭದಲ್ಲಿ ಮಾಜಿ ಎಂ.ಪಿ ಸಣ್ಣ ಫಕ್ಕೀರಪ್ಪ, ಸಂಜಯ್ ಬೆಟಗೇರೆ, ಸತ್ಯಪ್ಪ ಆಚಾರಿ, ಶ್ರೀಧರ್, ಮಾರುತಿ, ರವೀಂದ್ರ, ಅನಂತಾಚಾರಿ ಸೇರಿದಂತೆ ದೇವಸ್ಥಾನದ ಅನೇಕ ಭಕ್ತವೃಂದ ಉಪಸ್ಥಿತರಿದ್ದರು. 


Post a Comment

0 Comments

Ad Code

Responsive Advertisement