Ticker

6/recent/ticker-posts

Ad Code

Responsive Advertisement

Bellary : ವಿಜಯನಗರ ಕಾಲೇಜಿನ ನೂತನ ಅಧ್ಯಕ್ಷರಾಗಿ ಅಸುಂಡಿ ನಾಗರಾಜ ಗೌಡ

ಬಳ್ಳಾರಿ ಜುಲೈ 11. ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಕಚೇರಿಯಲ್ಲಿ ದಿನಾಂಕ 11-07-2021 ರ ಭಾನುವಾರ ದಂದು ಬೆಳಗ್ಗೆ 11:00 ಗಂಟೆಗೆ,  ಬಳ್ಳಾರಿ ಜಿಲ್ಲಾ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿ.ಎಸ್.ಮಹಮ್ಮದ್ ರಫೀಕ್ ರವರ ನೇತೃತ್ವದಲ್ಲಿ, ವಿಜಯನಗರ (ಹೊಸಪೇಟೆ) ಜಿಲ್ಲೆಯಲ್ಲಿನ ವಿಜಯನಗರ ಕಾಲೇಜಿನ ನೂತನ ಅಧ್ಯಕ್ಷರಾಗಿ ಮೋಕ-ರೂಪನಗುಡಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಸುಂಡಿ ನಾಗರಾಜ ಗೌಡ ರವರು ಪ್ರಮಾಣ ಸ್ವೀಕಾರ ಮಾಡಿದ್ದಾರೆ.

ಆದ್ದರಿಂದ ಮಾನ್ಯ ಜಿಲ್ಲಾ ಅಧ್ಯಕ್ಷರಾದ ಜಿ.ಎಸ್.ಮಹಮ್ಮದ್ ರಫೀಕ್ ರವರು, ಅಸುಂಡಿ ನಾಗರಾಜ ಗೌಡರನ್ನು ಗಂಧದ ಮಾಲೆಯನ್ನು ಹಾಕಿ ಸನ್ಮಾನಿಸಿದರು.

ಈ ಸಂಧರ್ಭದಲ್ಲಿ ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರಾದ ಆಂಜಿನೇಯುಲು, ಬ್ರೂಸ್ ಪೇಟ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅರ್ಷದ್ ಅಹಮ್ಮದ್ ಗನಿ, ಕಂಟೋನ್ಮೆ0ಟ್ ಬ್ಲಾಕ್ ಅಧ್ಯಕ್ಷರಾದ ಪೆರಂ ವಿವೇಕ್, ಕೌಲ್ ಬಜಾರ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಜಿ.ಜೆ.ರವಿಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಡಿ.ಅಯಾಜ್ ಅಹಮ್ಮದ್ ಮತ್ತು ಇತರರು ಉಪಸ್ಥತರಿದ್ದರು.


Post a Comment

0 Comments

Ad Code

Responsive Advertisement