ಬಳ್ಳಾರಿ ಜುಲೈ 11. ಕಲ್ಯಾಣ ಕರ್ನಾಟಕ ಪ್ರದೇಶದ ಸರ್ವಾಂಗೀಣ ಅಭಿವೃದ್ದಿಗಾಗಿ ಸಂವಿಧಾನದ ಅನುಚ್ಛೇಧದ 371ಜೆ ಅಡಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿ ರಚಿಸಲಾಗಿದೆ, ಈ ಭಾಗದ ಹಿಂದುಳಿವಿಕೆಯನ್ನು ರಾಜ್ಯದ ಸರಾಸರಿ ಅಭಿವೃದ್ದಿಗೆ ಸಮಾನವಾಗಿ ಅಭಿವೃದ್ದಿಗೊಳಿಸಲು ಮಂಡಳಿ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಈ ಪ್ರದೇಶದ ಅಭಿವೃದ್ದಿಗಾಗಿ ಮಂಡಳಿಯೂ ಒಂದು ಸರಕಾರವಾಗಿ ಕೆಲಸ ಮಾಡುವ ಅಧಿಕಾರ ಮಂಡಳಿಯ ಕಾನೂನಿನಲ್ಲಿ ನೀಡಲಾಗಿದೆ,
ಆದರೆ, ಈಗಿನ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ಸರಕಾರ ಕಳೆದ ಎರಡು ವರ್ಷದಿಂದ ಮಂಡಳಿಯನ್ನು ನಿಷ್ಕಿಯಗೊಳಿಸುತ್ತ ಬಂದಿದೆ. ಹಿಂದಿನ ಸರಕಾರದಲ್ಲಿ ಮಂಡಳಿಗೆ ಈ ಭಾಗದ ಜಿಲ್ಲಾ ಉಸ್ತುವಾರಿ ಸಚಿವರೊಬ್ಬರು ಮಂಡಳಿಗೆ ಅಧ್ಯಕ್ಷರಾಗಲು ಕಾನೂನಿನಲ್ಲಿ ಅವಕಾಶ ನೀಡಿತ್ತು, ಆದರೆ ಈಗಿನ ಸರಕಾರ ತಮ್ಮ ಪಕ್ಷದ ಶಾಸಕರನ್ನು ತೃಪ್ತಿಪಡಿಸಲು ಅದನ್ನು ತಿದ್ದುಪಡಿ ಮಾಡಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಲು ಅವಕಾಶ ನೀಡಿ ಮಂಡಳಿಯನ್ನು ಕೆಳದರ್ಜೆಗೆ ಇಳಿಸಿತು. ಈ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷವಾದರೂ ಇಲ್ಲಿಯವರೆಗೆ ಮಂಡಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡದೇ ಮಂಡಳಿಯ ಅಧಿಕಾರವನ್ನು ಸರಕಾರ ತನ್ನ ತೆಕ್ಕೆಗೆ ತೆಗೆದುಕೊಂಡು ಈ ಭಾಗದ ಅಭಿವೃದ್ದಿಗೆ ತೊಡಕಾಗಿದೆ.
ಈ ಭಾಗದ ಎಲ್ಲ ಸಚಿವರು, 12 ಜನ ಶಾಸಕರು, 2 ವಿಧಾನ ಪರಿಷತ್ ಸದಸ್ಯರು, 1 ಲೋಕಸಭಾ ಸದಸ್ಯರು, 1 ಜಿಲ್ಲಾ ಪಂಚಾಯತ್ ಸದಸ್ಯರು, 1 ನಗರ ಸ್ಥಳೀಯ ಸಂಸ್ಥೆ ಅಧ್ಯಕ್ಷರು, 5 ಜನ ವಿಷಯ ಪರಿಣಿತರು ಮಂಡಳಿಗೆ ಸದಸ್ಯರಾಗಿ ನಾಮನಿರ್ದೇಶನ ಮಾಡಬೇಕು. ಆದರೆ ಈ ಸರಕಾರ ಮಂಡಳಿಯ ಅಧಿಕಾರವನ್ನು ಕೇಂದ್ರೀಕೃತಗೊಳಿಸಿ ತನ್ನಲ್ಲೇ ಇಟ್ಟುಕೊಳ್ಳಬೇಕೆಂಬ ಹುಂಬತನದಿAದ ಎರಡು ವರ್ಷದಿಂದ ಮಂಡಳಿಗೆ ಸದಸ್ಯರನ್ನು ನೇಮಿಸಿರುವದಿಲ್ಲ. ಪೂರ್ಣ ಪ್ರಮಾಣದ ಮಂಡಳಿ ರಚನೆಯಾಗದೇ ಇರುವದರಿಂದ ಮಂಡಳಿಯ ವ್ಯಾಪ್ತಿಯಲ್ಲಿ ಬರುವ ಯಾವುದೇ ಕೆಲಸ/ಕಾಮಗಾರಿಗಳಿಗೆ ಅನುಮೋದನೆ ನೀಡುವ ಅಥವಾ ಕಾಮಗಾರಿ ಬದಲಾವಣೆ ಮಾಡುವ ಅಧಿಕಾರ ಸರಕಾರಕ್ಕೆ ಹೋಗಿದೆ. ಕಳೆದ 70 ವರ್ಷಗಳಿಂದ ಸರಕಾರ ಈ ಪ್ರದೇಶವನ್ನು ಅಭಿವೃದ್ದಿಯಲ್ಲಿ ನಿರ್ಲಕ್ಷö್ಯ ಮಾಡಿದೆ ಎನ್ನುವ ಕಾರಣಕ್ಕೆ 371ಜೆ ಅಡಿಯಲ್ಲಿ ಸ್ಥಳೀಯವಾಗಿ ಅಭಿವೃದ್ದಿಗೆ ಮಂಡಳಿ ರಚನೆ ಮಾಡಲಾಗಿದೆ, ಅದರ ಅರಿವು ಸಹ ಇರದ ಈ ಸರಕಾರ ಮತ್ತೆ ಮಂಡಳಿಯ ಅಧಿಕಾರ ತನ್ನ ತೆಕ್ಕೆಗೆ ತೆಗೆದುಕೊಂಡಿರುವದು ನಾವು ತೀರ್ವವಾಗಿ ಖಂಡಿಸುತ್ತೇವೆ ಎಂದು ಸಿರಿಗೇರಿ ಪನ್ನರಾಜ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗ ಕರ್ನಾಟಕ ಸರಕಾರದ ಯೋಜನಾ ಇಲಾಖೆಯ ಸಚಿವರಾದ ನಾರಾಯಗೌಡ ಇವರು ಮಂಡಳಿಯ ಕಾಮಗಾರಿ/ಕ್ರೀಯಾಯೋಜನೆ ಕುರಿತು ಪ್ರಗತಿ ಪರಿಶೀಲನೆ ಮಾಡಲು ದಿನಾಂಕ 13-07-2021 ರಂದು ಕಲಬುರಗಿಗೆ ಬರುತ್ತಿರುವದನ್ನು ನಾವು ತೀರ್ವವಾಗಿ ವಿರೋಧಿಸುತ್ತೇವೆ, ಈ ಸರಕಾರವು ಮಂಡಳಿಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವದು ಈ ಭಾಗದ ಜನತೆ ಸಹಿಸಿಕೊಳ್ಳುವದಿಲ್ಲ. ಸಂವಿಧಾನದ 371ಜೆ ಅಡಿಯಲ್ಲಿ ಅಥವಾ ಅದರ ನಂತರ ರಚಿಸಲಾದ ಮಂಡಳಿ ಕಾನೂನಿನಲ್ಲಿ ಮಂಡಳಿಯ ಪ್ರಗತಿ ಪರಿಶೀಲನೆ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆಯೇ ಹೊರತು ಯಾವುದೇ ಸಚಿವರಿಗೆ ಇರುವದಿಲ್ಲ. ಆದರೆ, ಸರಕಾರ ಅಕ್ರಮವಾಗಿ ಮಂಡಳಿಯ ಅಧಿಕಾರವನ್ನು ಕಬಳಿಸಲು ಪ್ರಯತ್ನ ಮಾಡುತ್ತಿರುವದು ಅಕ್ಷಮ್ಯ ಅಪರಾಧ ಮತ್ತು ಈ ಬಾಗದ ಬೆಳವಣಿಗೆಗೆ ಮಾಡುತ್ತಿರುವ ಅನ್ಯಾಯ. ಕಾರಣ, ಪ್ರಗತಿ ಪರಿಶೀಲನೆಗೆ ಬರುತ್ತಿರುವ ಸಚಿವರಾದ ನಾರಾಯಣಗೌಡ ಇವರು ಈ ಭಾಗದ ಜನತೆಯ ಭಾವನೆಗಳನ್ನು ಅರ್ಥಮಾಡಿಕೊಂಡು ಅದನ್ನು ಕೈಬಿಡಬೇಕು ಹಾಗೂ ಯಾವುದೇ ವಿಳಂಭವಿಲ್ಲದೇ ಮಂಡಳಿಗೆ ಪೂರ್ಣ ಪ್ರಮಾಣದ ಆಡಳಿತ ಮಂಡಳಿ ಸದಸ್ಯರನ್ನು ನೇಮಿಸಬೇಕೆಂದು ಈ ಮೂಲಕ ಆಗ್ರಹಿಸಿದ್ದಾರೆ. ಈಸಂಧರ್ಭದಲ್ಲಿ ಟ.ಜಿ.ವಿಠಲ್ ಅವರು ಉಪಸ್ಥಿತರಿದ್ದರು.
VARTHAJALA :
# 396, Sampige Road, Malleswaram, Near 8th Cross, Opp. Asha Sweets, Bengaluru 560 003.
Phone : 080-23319247, 9448119247

0 Comments