ಲಾಕ್‌ಡೌನ್ ವೇಳೆ ಎಷ್ಟೋ ಜನ ಒಪ್ಪೊತ್ತಿನ ತಿಂಡಿ ಊಟಕ್ಕೂ ಕಷ್ಟ ಪಡುತ್ತಿದ್ದುದನ್ನು ನಾವು ದೇಶಾದ್ಯಂತ ಕಂಡಿರುವುದು ಸತ್ಯ. ಈ ಸಂದರ್ಭದಲ್ಲಿ ಆಸರೆಗೆ ಎಂದವರು ಬಹಳ ಮಂದಿ. ಅವರ ಸೇವೆಗೆ ಆಶೀರ್ವದಿಸಿದವರು ಅದೆಷ್ಟೋ ಮಂದಿ. ಅಂತೆಯೇ ಇತ್ತ ರಾಯಚೂರಿನ ಶ್ರೀ ಸಾಯಿ ಧ್ಯಾನ ಮಂದಿರ ಶ್ಲಾಘನೀಯ ಕಾರ್ಯಕ್ಕೆ ಪಾತ್ರವಾಗಿದೆ.
ಆಸ್ಪತ್ರೆಗಳಲ್ಲಿದ್ದ ಸೋಂಕಿತರಿಗೆ, ಬಂಧುಗಳಿಗೆ, ಮಿತ್ರರಿಗೆ, ನಿರ್ಗತಿಕರಿಗೆ, ವಾರಿಯರ್ಸ್ ಗಳಿಗೆ ಪ್ರತಿದಿನ ಮೂರು ಹೊತ್ತು ಊಟೋಪಚಾರ ನೀಡುತ್ತಾ ಬಂದಿದೆ. ದಿನಂಪ್ರತಿ 3000 ಮಂದಿಗೆ ಹಸಿದ ಹೊಟ್ಟೆಗೆ ಊಟ ನೀಡುತ್ತಿದ್ದ ಈ ಸಂಸ್ಥೆ ಕೋರೋನಾ ಸಮಖ್ಯೆ ಇಳಿಯುತ್ತಿದ್ದಂತೆ ಹಸಿದವರ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸುತ್ತಾ ಬಂದಿತ್ತು.
ಆದರೂ ಯಾವುದಕ್ಕೂ ಕಾರಣ ನೀಡದೇ ಹಸಿದ ಹೊಟ್ಟೆಗೆ ಊಟ ನೀಡಿದ ಈ ಸಂಸ್ಥೆಗೆ ಎಷ್ಟು ಹೊಗಳಿದರೂ ಸಾಲದು.
ಅವರ ಶ್ಲಾಘನೀಯ ಕಾರ್ಯವನ್ನು ಮೆಚ್ಚಿ 11/07/2021 ರಂದು. ರಾಯಚೂರಿನ IMA ಹಾಲಿನಲ್ಲಿ ಇಂದು ಸನ್ಮಾನವನ್ನು ಏರ್ಪಡಿಸಲಾಗಿತ್ತು. ಈ ಸಮಾರಂಭದ ಕಾರ್ಯಕ್ರಮದಲ್ಲಿ ತಂಡದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದುದು ವಿಶೇಷವಾಗಿತ್ತು.
ಕಲಾವಿದರಿಗೆ ಕಿಟ್:
ಕೋರೋನಾ ಸಂದರ್ಭದಲ್ಲಿ ಕಲಾವಿದರಿಗೆ, ಬಡರೋಗಿಗಳಿಗೆ, ದೀಕ್ಷಿತ್ ಫೌಂಡೇಷನ್ ಸೂಳೇಭಾವಿ ರಂಗಭೂಮಿ ಕಲಾಬಳದ ವತಿಯಿಂದ ಪಟ್ಟಣದ ಬಸವ ಕಾಲೇಜು ಆವರಣದಲ್ಲಿ ಆಹಾರದ ಕಿಟ್‌ಗಳನ್ನು ನೀಡಲಾಯಿತು.





0 Comments