Ticker

6/recent/ticker-posts

Ad Code

Responsive Advertisement

ಶಾಸಕ ಎಂ.ಎಸ್ ಸೋಮಲಿಂಗಪ್ಪ ಅವರಿಂದ ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿ ವಿತರಣೆ

ಬಳ್ಳಾರಿ, ಜು.09: ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಶಾಸಕ ಎಂ.ಎಸ್.ಸೋಮಲಿAಗಪ್ಪ ಅವರು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಜತೆಗೂಡಿ ಶುಕ್ರವಾರ ಆಹಾರ ಸಾಮಾಗ್ರಿ ವಿತರಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಕೆಲಸವಿಲ್ಲದೇ ದುಡಿಯುವ ಕಾರ್ಮಿಕ ವರ್ಗವು ಸಂಕಷ್ಟದಲ್ಲಿರುವುದನ್ನು ಕಂಡು ಸರ್ಕಾರದಿಂದ ಹಾಗೂ ಶಾಸಕರು ವೈಯಕ್ತಿಕವಾಗಿ ಸಿರುಗುಪ್ಪ ತಾಲೂಕಿನ ಎಲ್ಲಾ ಗ್ರಾಮಗಳ ಸದಸ್ಯರಿಗೆ ಆಹಾರ ಸಾಮಗ್ರಿ ವಿತರಿಸಿದರು.

5.ಕೆ.ಜಿ ಅಕ್ಕಿ, ಬೇಳೆ, ಗೋದಿಹಿಟ್ಟು, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು, ಕಾರ ಹಾಗೂ ಮಸಾಲೆ ಪದಾರ್ಥಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ಈ ಸಮಯದಲ್ಲಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಲಕ್ಷ್ಮೀ ಕೆ.ಮಾರುತಿ ಮಾತನಾಡಿ, ಇಲಾಖೆಯಿಂದ ಹಲವಾರು ಸೌಲಭ್ಯಗಳಿದ್ದು ಎಲ್ಲಾ ಕಟ್ಟಡ ಕಾರ್ಮಿಕರು ಪಡೆದುಕೊಳ್ಳಿ, ನಿಮ್ಮ ಜೀವನ ಸುಧಾರಣೆಗೆ ಸರ್ಕಾರದ ನೆರವು ಸದಾಕಾಲ ಹೀಗೆ ಇರುತ್ತದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಕಮಲ್ ಅಹ್ಮದ್, ಕಾರ್ಮಿಕ ನಿರೀಕ್ಷಕ ಸಿ.ಎನ್ ರಾಜೇಶ, ಕಾರ್ಮಿಕ ಇಲಾಖೆ ಮಂಡಳಿಯ ಕಾರ್ಯನಿರ್ವಹಕರಾದ ತುರುಮಂದೆಪ್ಪ, ದಾದಕಲಂದರ್, ಹನುಮಂತಪ್ಪ, ಪಟ್ಟಣ ಪಂಚಾಯತಿಯ ಉಪಾಧ್ಯಕ್ಷ ಮಂಜುನಾಥ, ತಾಲೂಕ ಅಧ್ಯಕ್ಷ ಆರ್.ಸಿ.ಪಂಪನಗೌಡ, ಆರೋಗ್ಯ ನಿರೀಕ್ಷಕಿ ಶೋಭಾ, ಸದಸ್ಯ ಕೋಮರಪ್ಪ, ರಾಘವೇಂದ್ರ ದ್ಯಾವಣ್ಣ, ಸಿದ್ದನಗೌಡ ಮತ್ತು ಕಾರ್ಮಿಕ ಇಲಾಖೆಯ ಸಿಬ್ಬಂದಿ ಹಾಗೂ ಇತರರು ಇದ್ದರು.


Post a Comment

0 Comments

Ad Code

Responsive Advertisement