Ticker

6/recent/ticker-posts

Ad Code

Responsive Advertisement

ಭಾರತೀಯ ಜನತಾ ಪಾರ್ಟಿ ಬಳ್ಳಾರಿ ನಗರ ಘಟಕದ ಕಾರ್ಯಕಾರಣಿ ಸಭೆ

ಬಳ್ಳಾರಿ, ಜು.24: ಭಾರತೀಯ ಜನತಾ ಪಾರ್ಟಿ ಬಳ್ಳಾರಿ ನಗರ ಘಟಕದ ಅಧ್ಯಕ್ಷ ಕೆ.ವಿ.ವೆಂಕಟೇಶ್ವರ ಅವರ ಅಧ್ಯಕ್ಷತೆಯಲ್ಲಿ ಮಂಡಲ ಕಾರ್ಯಕಾರಿಣಿ ಸಭೆಯನ್ನು ಎಸ್.ಪಿ. ವೃತ್ತದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಇಂದು ನಡೆಸಲಾಯಿತು. 

ಈ ಸಭೆಗೆ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ನಾಯುಡು, ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್, ನಗರದ ಉಸ್ತುವಾರಿ, ಜಿಲ್ಲಾ ಉಪಾಧ್ಯಕ್ಷರಾದ ಡಾ|| ಅರುಣಾ ಕಾಮಿನೇನಿ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ತಿಪ್ಪಣ್ಣ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಕೆ. ರಾಮಂಜಿನಿ, ಪಾಲಿಕೆ ಸದಸ್ಯ ಕೆ. ಎಸ್. ಅಶೋಕ್ ಕುಮಾರ್, ಅವರು ಸಭೆಯಲ್ಲಿ ಹಾಜರಿದ್ದು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದರು. 

ಈ ಸಂದರ್ಭದಲ್ಲಿ ನಗರ ಉಪಾಧ್ಯಕ್ಷೆ ಪುಷ್ಪಲತಾ, ಕೇದಾರ ಸ್ವಾಮಿ, ವಸಂತ ಕುಮಾರ್, ಮೋರ್ಚಾ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಪ್ರಮುಖರು, ಕಾರ್ಯಕರ್ತರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement