ಮಧುಗಿರಿ : ರೋಟರಿ ಸಂಸ್ಥೆ ಸುಮಾರು 200 ದೇಶದಲ್ಲಿ ತನ್ನ ಸೇವಾವಾಪ್ತಿಯನ್ನು ವಿಸ್ತರಿಸಿದ್ದು. ಸಮಾಜಸೇವೆಗೆ ಮತ್ತೊಂದು ಹೆಸರು ರೋಟರಿ ಸಂಸ್ಥೆಯಾಗಿದೆ, ಎಂದು ಶಾಸಕ ಎಂ.ವಿ.ವೀರಭದ್ರಯ್ಯ ಅಭಿಪ್ರಾಯಪಟ್ಟರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ನೂತನ ರೋಟರಿ ತಾಲೂಕು ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹುಟ್ಟಿ ಸಮಾಜಕ್ಕೆ ಸೇವೆ ಮಾಡುವುದೇ ರೋಟರಿಯ ಗುರಿಯಾಗಿದ್ದು, ಈ ಮಾತನ್ನು ಗೌರವ ಹಾಗೂ ಗರ್ವದಿಂದ ಹೇಳುತ್ತಿದ್ದೇನೆ. ಇಂತಹ ಧ್ಯೇಯವಾಕ್ಯದ ಮೂಲ ಉದೇಶದಿಂದ ವಿಶ್ವದಲ್ಲಿ ಸಮಾಜಸೇವೆ ಮಾಡುತ್ತಿರುವ ರೋಟರಿ ಸಂಸ್ಥೆಯ ಸೇವೆಗೆ ಎಲ್ಲರೂ ಕೈಜೋಡಿಸಬೇಕಿದೆ. ನೂತನ ಅಧ್ಯಕ್ಷ ಜಯರಾಮಯ್ಯ ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷರಾಗಿ ಮತ್ತಷ್ಟೂ ಸಮಾಜಸೇವೆಯನ್ನು ಮಾಡುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ರೋಟರಿ ಸಂಸ್ಥೆಯ ಫ್ಲೈಟ್ ಲೆಫ್ಟಿನೆಂಟ್ ಗೌರ್ನರ್ ಕೆ.ಪಿ.ನಾಗೇಶ್ ಮಾತನಾಡಿ, ರೋಟರಿ ಸಂಸ್ಥೆಯ ಕಾರ್ಯವು ಇಂದು ಮತ್ತಷ್ಟೂ ಹೆಚ್ಚಾಗಿದ್ದು, ಸಂಸ್ಥೆಯ ದೇಶದ ಅಧ್ಯಕ್ಷರಾದ ಮೆಹ್ತಾರವರು ಲಯನ್ ಸಂಸ್ಥೆಯ ಸಹಯೋಗದೊಂದಿಗೆ ಕೇಂದ್ರ ಸರಕಾರದ ಎಲ್ಲಾ ಇಲಾಖೆಗಳ ಕಾರ್ಯಕ್ರಮಗಳ ಅನುದಾನದಲ್ಲಿ ಶೇ.10 ರಷ್ಟು ಸಹಾಯ ನೀಡಲು ಮಾತುಕತೆ ನಡೆಸಿದ್ದಾರೆ. ಅದರಿಂದ ದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮ ಸಂಸ್ಥೆಯ ಪಾಲು ಇರಲಿದೆ. ಇದು ಹೆಮ್ಮೆಯ ವಿಚಾರವಾಗಿದ್ದು, ಸಮಾಜಸೇವೆಗೆ ನಮ್ಮ ದುಡಿಮೆಯ ಶೇ.10 ರಷ್ಟು ಹಣ ನೀಡಿದರೆ ಆ ಜನ್ಮ ನಿಜಕ್ಕೂ ಸಾರ್ಥಕ. ಇದನ್ನು ಸಂಸ್ಥೆಯ ನಮ್ಮೆಲ್ಲ ರೋಟೆರಿಯನ್‍ಗಳು ಪಾಲಿಸುತ್ತಿದ್ದಾರೆ.
ನೂತನ ಅಧ್ಯಕ್ಷ ಜೆ.ಜಯರಾಮಯ್ಯ ಮಾತನಾಡಿ, ಅಧಿಕಾರ ವಹಿಸಿಕೊಂಡಾಗಿನಿಂದ ಗುಡ್ ನೈಬರ್ಸ್ ಇಂಡಿಯಾ ಸಂಸ್ಥೆ ಹಾಗೂ ದಾನಿಗಳ ನೆರವಿನಿಂದ ನೂರಾರು ಮಕ್ಕಳಿಗೆ ನೋಟ್‍ಪುಸ್ತಕ, ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದ್ದು, ಮೊನ್ನೆ ನಡೆದ ಮೆಟ್ರಿಕ್ ಪರೀಕ್ಷಾ ಕೇಂದ್ರದ ಸಿಬ್ಬಂದಿಗಳು ಹಾಗೂ ಉಪವಿಭಾಗದ 9 ಸಾವಿರ ಮಕ್ಕಳಿಗೆ ಕರೊನಾ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಗಿದ್ದು. ಇನ್ನೂ ಇಂತಹ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಾಕಿಕೊಂಡಿದ್ದೇವೆ ಎಂದರು.
ರೋಟರಿ ಸಂಸ್ಥೆಯು ಸೇವೆ ಬಯಸುತ್ತದೆ. ಪಕ್ಷ ಯಾವುದಾರೂ ಸರಿ ಇಂತಹ ಸರಳ ಹಾಗೂ ಸೇವೆಯ ಗುರಿ ಹೊಂದಿರುವ ಶಾಸಕರನ್ನು ನಾನೆಲ್ಲೂ ಕಂಡಿಲ್ಲ. ಇಂತವರು ರಾಜಕೀಯದಲ್ಲಿದ್ದರೆ ಎಂತಹ ಕಷ್ಟವಾದ ಅಭಿವೃದ್ಧಿ ಕಾರ್ಯವಾದರೂ ಈಡೇರಲಿದೆ.-ಕೆ.ಪಿ.ನಾಗೇಶ್, ಫ್ಲೈಟ್ ಲೆಫ್ಟಿನೆಂಟ್ ಗೌರ್ನರ್ ರೋಟರಿ ಸಂಸ್ಥೆ.
ಈ ಸಂದರ್ಭದಲ್ಲಿ ವೈಯಕ್ತಿಕವಾಗಿ 9 ಸಾವಿರ ಮಾಸ್ಕ್ ತಯಾರಿಸಿ ಹಂಚಿದ ಪುರವರದ ಸಹೋದರಿಯರಾದ ವೈಷ್ಣವಿ ಹಾಗೂ ಭಾವನರನ್ನು ಸಂಸ್ಥೆಯಿಂದ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ವಿವಿಧ ಸ್ಥರದ ಅಧಿಕಾರಿಗಳಾದ ಹೆಚ್‍ಕೆವಿ ರೆಡ್ಡಿ, ಶ್ರೀನಿವಾಸಮೂರ್ತಿ, ಮಹದೇವಪ್ರಸಾದ್, ಬೆಳ್ಳಿ ಲೊಕೇಶ್, ಬಾಲಾಜಿ, ವಾಸೀಂ, ಬೆಂಗಳೂರು ಸಂಸ್ಥೆಯ ವಿಜಯ ಮೋಹನ್, ಉಪಾಧ್ಯಕ್ಷ ವೆಂಕಟೇಶ್, ತಾಲೂಕು ಕಾರ್ಯದರ್ಶಿ ಕರಿಯಣ್ಣ, ಮಾಜಿ ಅಧ್ಯಕ್ಷ ಶಿವಲಿಂಗಪ್ಪ, ಖಜಾಂಚಿ ವೆಂಟರಾಮು ತಾಲೂಕು ಕುಂಚಿಟಿಗ ವಕ್ಕಲಿಗ ಸಂಘದ ಅಧ್ಯಕ್ಷ ರಾಜಶೇಖರ್, ಹಾಗೂ ಮಾಜಿ ಅಧ್ಯಕ್ಷರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ನಟರಾಜ್, ಖಜಾಂಚಿ ಚಿಕ್ಕರಂಗಪ್ಪ, ಎಚ್.ಎಸ್. ಶಿವಕುಮಾರ್, ರಕ್ತದಾನಿ ಶಿಕ್ಷಕರ ಬಳಗದ ಅಧ್ಯಕ್ಷ ಶಶಿಕುಮಾರ್, ಗುಡ್ ನೈಬರ್ಸ್ ಸಂಸ್ಥೆಯ ಸಂಚಾಲಕ ಲೊಕೇಶ್, ಹಾಗೂ ಪದಾಧಿಕಾರಿಗಳು ಇದ್ದರು.


0 Comments